VIRAL NEWS:ಠಾಣೆಗೆ ನುಗ್ಗಿ ಡಿವೈಎಸ್‌ಪಿ ಮೇಲೆ ಹಲ್ಲೆ;

ಠಾಣೆಗೆ ನುಗ್ಗಿ ಡಿವೈಎಸ್‌ಪಿ ಮೇಲೆ ಹಲ್ಲೆ: ವೈರಲ್‌

ಚನ್ನರಾಯಪಟ್ಟಣ:

ತಾಲೂಕಿನ ಹಿರೀಸಾವೆ ಹೋಬಳಿ ಕೇಂದ್ರದಲ್ಲಿನ ಠಾಣೆಗೆ ಭೇಟಿ ನೀಡಿದ ವೇಳೆ ಡಿವೈಎಸ್‌ಪಿ ಮುರಳೀಧರ್‌ ಮೇಲೆ ಹಲ್ಲೆ ಮಾಡಿರುವ ಘಟನೆ ಮಂಗಳವಾರ ನಡೆದಿದ್ದುಇದರ ವಿಡಿಯೋ ಜಾಲ ತಾಣದಲ್ಲಿ ವೈರಲ್‌ ಆಗಿದೆ.

ಮಟ್ಟನವಿಲೆ ಗ್ರಾಮದಕೃಷ್ಣೇಗೌಡರ ಪುತ್ರ, ಎಐಟಿಯುಸಿ ಮುಖಂಡ ಕುಮಾರ್‌ ಹಾಗೂ ಇತರರಿಂದ ಡಿವೈಎಸ್‌ಪಿ ಮೇಲೆ ಹಲ್ಲೆ ಮಾಡಲಾಗಿದ್ದು ಕುಮಾರ್‌, ಸೇರಿದಂತೆಮೂವರು ಪುರುಷರು, ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಘಟನೆ ವಿವರ:

ಹಿರೀಸಾವೆ ಠಾಣೆ ಮುಂದೆ ಕುಮಾರ್‌, ಇತರರು ಧರಣಿ ಮಾಡುತ್ತಿದ್ದ ಹಿನ್ನೆಲೆ ಬೆಂಗಳೂರಿನಿಂದ ಹೊಳೆನರಸೀಪುರಕ್ಕೆ ಡಿವೈಎಸ್‌ಪಿ ತೆರಳುವಾಗ ಹಿರೀಸಾವೆ ಠಾಣೆಗೆ ಭೇಟಿ ನೀಡಿದ್ದರು. ಈ ವೇಳೆ ಠಾಣೆ ಹೊರಗೆ ಧರಣಿ ನಡೆಸುತ್ತಿದ್ದವರಲ್ಲಿ ಒಬ್ಬರು ಠಾಣೆ ಒಳಗೆ ಹೋಗಿ ತಮ್ಮ ಸಮಸ್ಯೆಯನ್ನು ಡಿವೈಎಸ್‌ಪಿಗೆ ತಿಳಿಸುವಂತೆ ಠಾಣೆ ಪೇದೆ ಹೇಳಿದ್ದಾರೆ.

ಕೂಡಲೇ ಕುಮಾರ್‌ ಧರಣಿ ನಿರತರನ್ನು ಒಟ್ಟಿಗೆ ಕರೆದುಕೊಂಡು ಠಾಣೆ ಒಳಗೆ ನುಗ್ಗಿ ಡಿವೈಎಸ್‌ಪಿ ಮುರಳೀಧರ್‌ ಕಾಲರ್‌ ಹಿಡಿದು ಎಳೆದಾಡಿರುವುದು, ಎದೆಗೆ ಥಳಿಸಿರುವುದು ಹಾಗೂ ಧರಣಿಯಲ್ಲಿ ಬಾವುಟದ ಕೋಲಿನಿಂದ ಹೊಟ್ಟೆಗೆ ಚುಚ್ಚಿರುವ ವಿಡಿಯೋ ಠಾಣೆಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಠಾಣೆಯಲ್ಲಿ ಹೆಚ್ಚಿನ ಸಿಬ್ಬಂದಿ ಇರದಿದ್ದರಿಂದ

ಹಲ್ಲೆಗೆ ಹಿನ್ನೆಲೆ ಏನು? :

ಮಟ್ಟನಿವಲೆ ಗ್ರಾಪಂ ಸದಸ್ಯ ಅಶೋಕ್‌ ಹಾಗೂ ಕುಮಾರ್‌ ನಡುವೆ ಡಿ.27 ರಂದು ಜಮೀನಿನ ವಿಷಯವಾಗಿ ಗಲಾಟೆ ನಡೆದಿತ್ತು. ಈ ವೇಳೆ ಅಶೋಕ್‌ರ ಮೇಲೆ ಕುಮಾರ್‌ ಹಲ್ಲೆ ಮಾಡಿದ್ದಾರೆ. ಈ ವೇಳೆ ಅಶೋಕ್‌ ಪರಾರಿಯಾಗಿದ್ದರು. ತಕ್ಷಣ ಕುಮಾರ್‌ ಮಟ್ಟನವಿಲೆ ಹಾಗೂ ಹಿರೀಸಾವೆ ಸರ್ಕಾರಿ ಆಸ್ಪತ್ರೆಗೆ ತೆರಳಿ ಅಶೋಕ್‌ನನ್ನು ಹುಡುಕಿದ್ದರು. ಅಲ್ಲಿ ಕಾಣಿಸದ ಹಿನ್ನೆಲೆ ಠಾಣೆ ಮುಂದೆ ಧರಣಿ ನಡೆಸಿದ್ದಾರೆ. ಈ ವೇಳೆ ಏಕಾಏಕಿ ಡಿವೈಎಸ್‌ಪಿ ಮೇಲೆ ಹಲ್ಲೆ ನಡೆದಿದೆ ಎಂದು ಮೂಲಗಳು ಮಾಹಿತಿ ನೀಡಿವೆ. ಈಗ್ಗೆ ತಿಂಗಳ ಹಿಂದೆ ಹಿರೀಸಾವೆ ವೃತ್ತ ನಿರೀಕ್ಷಕಿ ಭಾನು ಮಟ್ಟನವಿಲೆ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕುಮಾರ್‌ ಪೊಲೀಸರೊಂದಿಗೆ ಜಗಳವಾಡಿದ ವಿಡಿಯೋ ವೈರಲ್‌ ಆಗಿತ್ತು. ಸೇಡು ತೀರಿಸಿಕೊಳ್ಳಲು ಆರೋಪಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡಿದ್ದಾನೆಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

PETROLEUM:ವಾಹನ ಸವಾರರಿಗೆ ನ್ಯೂ ಇಯರ್‌ ಗಿಫ್ಟ್‌ : ಈ ರಾಜ್ಯದಲ್ಲಿ ಪೆಟ್ರೋಲ್‌, ಡಿಸೇಲ್‌ ಬೆಲೆಯಲ್ಲಿ ʼ25 ರೂಪಾಯಿʼ ಇಳಿಕೆ;

Wed Dec 29 , 2021
ಕೆಎನ್‌ಎನ್‌ಡಿಜಿಟಲ್‌ ಡೆಸ್ಕ್‌ : ಜಾರ್ಖಂಡ್‌ ರಾಜ್ಯ ಸರ್ಕಾರ, ಜನತೆಗೆ ಹೊಸ ವರ್ಷದ ಗಿಫ್ಟ್‌ ನೀಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ 25 ರೂಪಾಯಿ ಇಳಿಕೆ ಮಾಡಿದೆ. ಮುಖ್ಯಮಂತ್ರಿ ಹೇಮಂತ್ ಸೊರೇನ್, ಈ ಮಹತ್ವದ ಘೋಷಣೆ ಮಾಡಿದ್ದು, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮಾತ್ರ ಈ ಅಗ್ಗದ ಪೆಟ್ರೋಲ್ ಮತ್ತು ಡೀಸೆಲ್ ಲಾಭ ಸಿಗಲಿದೆ ಎಂದಿದ್ದಾರೆ. ಅದ್ರಂತೆ, ಜನವರಿ 26ರಿಂದ ಜಾರ್ಖಂಡ್‌ನಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರು ಪೆಟ್ರೋಲ್ ಮತ್ತು ಡೀಸೆಲ್ 25 ರೂಪಾಯಿಗಳಷ್ಟು ಅಗ್ಗವಾಗಿ […]

Related posts

Advertisement

Wordpress Social Share Plugin powered by Ultimatelysocial