ವೈರಂ ಟೀಸರ್ ಬಿಡುಗಡೆ.

 

ಯುವ ನಟ ಪ್ರಣಾಮ್ ನಾಯಕನಾಗಿರುವ ” ವೈರಂ” ಚಿತ್ರದ ಟೀಸರ್  ಅನ್ನು ಹಿರಿಯ ನಟ ದೇವರಾಜ್  ಬಿಡುಗಡೆ ಮಾಡಿ ಪುತ್ರನ ಚಿತ್ರಕ್ಕೆ ಶುಭಕೋರಿದ್ದಾರೆ.ಕನ್ನಡ ಮತ್ತು ತೆಲುಗಿನಲ್ಲಿ ಮೂಡಿ ಬಂದಿರುವ ಚಿತ್ರಕ್ಕೆ ಸಾಯಿ ಶಿವನ್ ಆಕ್ಷನ್ ಕಟ್ ಹೇಳಿದ್ದಾರೆ. ಮೂರು ಗಂಟೆಗೆ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ನಟ ಪ್ರಣಾಮ್ ಒಂದೂಕಾಲು ಗಂಟೆ ತಡವಾಗಿ ಆಗಮಿಸಿದರು.ನಟ ಪ್ರಣಾಮ್ ಮಾತನಾಡಿ  4 ವರ್ಷದ ನಂತರ ನಟಿಸುತ್ತಿರುವ ಚಿತ್ರ. ಆಕ್ಷನ್ ಪ್ಯಾಕ್ ಲವ್ ಸ್ಟೋರಿ ಚಿತ್ರ, ಇಡೀ ತಂಡ, ಇಡೀ ಕುಟುಂಬ ಬೆನ್ನೆಲುಬಾಗಿ ನಿಂತಿದ್ದಾರೆ ಎಂದು ವೇದಿಕೆ ಮೇಲೆ ಭಾವುಕರಾದರು. ಎದುರಿಗೆ ಕುಳಿತ ತಂದೆ, ತಾಯಿ ಕಣ್ಣಲ್ಲಿ ನೀರು ತುಂಬಿಕೊಂಡರು.ನಟಿ ಮೋನಲ್, ಮೊದಲ ಚಿತ್ರ ಸಹಕಾರ ಇರಲಿದೆ. ಹಿಂದು ಕ್ರಿಶ್ಚಿಯನ್ ಹುಡುಗ ಹುಡಗಿಯ ಪ್ರೇಮಕಥೆ ಚಿತ್ರ ಒಳಗೊಂಡಿದೆ ಎಂದರು. ಖಳ ನಟ ರಾಮ್ ಚಿತ್ರದಲ್ಲಿ  ಪ್ರಮುಖ ಪಾತ್ರ ಮಾಡಿದ್ದೇನೆ ಎಲ್ಲರಿಗೂ ಇಷ್ಡವಾಗಲಿದೆ ಎಂದು ಮಾಹಿತಿ ನೀಡಿದರು.ನಿರ್ದೇಶಕ ಸಾಯಿ ಶಿವನ್, ಕನ್ನಡ ಮತ್ತು ತೆಲುಗಿನಲ್ಲಿ ಚಿತ್ರ ನಿರ್ಮಾಣ ಮಾಡಲಾಗಿದೆ.‌ಒಳ್ಳೆಯ ಕಥೆ ಇದೆ‌‌ ಎಂದರು. ಚಿತ್ರಕ್ಕೆ ಮಲ್ಲಿಕಾರ್ಜುನ್ ಮತ್ತು ವೇಮಾ ರೆಡ್ಡಿ ಬಂಡವಾಳ  ಹಾಕಿದ್ದಾರೆ. ಚಿತ್ರದಲ್ಲಿ ಶಂಕರ್ ಅಶ್ವಥ್, ವೀಣಾ ಸುಂದರ್ ಸೇರಿದಂತೆ ಮತ್ತಿತರು ಕಾಣಿಸಿಕೊಂಡಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಣಜಿ ಟ್ರೋಫಿಯಲ್ಲಿ ಮತ್ತೊಂದು ಶತಕ ಸಿಡಿಸಿದ ಸರ್ಫರಾಜ್.

Tue Jan 17 , 2023
ಹೊಸದಿಲ್ಲಿ: ಆಸ್ಟ್ರೆಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಇತ್ತೀಚೆಗೆ ಪ್ರಕಟವಾದ ತಂಡದಲ್ಲಿ ಸ್ಥಾನ ಪಡೆಯದೆ ನಿರಾಸೆ ಅನುಭವಿಸಿದ್ದ ಸರ್ಫರಾಜ್ ಖಾನ್ ಅವರು ಇಂದು ಮತ್ತೊಂದು ಶತಕ ಬಾರಿಸಿದ್ದಾರೆ. ಇದರೊಂದಿಗೆ ಆಯ್ಕೆ ಸಮಿತಿಗೆ ಮತ್ತೆ ತನ್ನ ನೆನಪು ಮೂಡಿಸಿದ್ದಾರೆ. ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ರಣಜಿ ಟ್ರೋಫಿ ಪಂದ್ಯದಲ್ಲಿ ಸರ್ಫರಾಜ್ ಖಾನ್ ಅವರು ಶತಕ ಸಿಡಿಸಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಇತ್ತೀಚೆಗೆ ತಂಡ ಪ್ರಕಟಿಸಲಾಗಿತ್ತು. ಇದರಲ್ಲಿ […]

Advertisement

Wordpress Social Share Plugin powered by Ultimatelysocial