ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲೊಂದು!

 

  ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಅಭಿಮಾನಿಗಳ ನೆಚ್ಚಿನ ತಾರಾ ಜೋಡಿಗಳಲ್ಲಿ ಒಂದು. ಈರ್ವರೂ ವೃತ್ತಿ ಜೀವನದಲ್ಲಿ ಬಹಳ ಕಷ್ಟಪಟ್ಟು ಮೇಲೆ ಬಂದವರು. ಒಂದು ವೇಳೆ ವಿರಾಟ್ ಬಯೋಪಿಕ್ ತಯಾರಾದರೆ… ಈ ಕುರಿತು ಈ ಹಿಂದೆ ವಿರಾಟ್ ಮಾತನಾಡಿದ್ದು ಮತ್ತೊಮ್ಮೆ ವೈರಲ್ ಆಗಿದೆ.ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ  ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ   ಖ್ಯಾತ ಸೆಲೆಬ್ರಿಟಿ ಜೋಡಿಗಳಲ್ಲೊಂದು. ಈರ್ವರೂ ಜತೆಯಾಗಿ ಸುತ್ತಾಡುತ್ತಿರುವ ಸಮಯದಿಂದಲೂ ಅಭಿಮಾನಿಗಳು ಈರ್ವರನ್ನೂ ಗಮನಿಸುತ್ತಿದ್ದಾರೆ. ಪರಸ್ಪರ ಗೌರವ ಹಾಗೂ ಪ್ರೀತಿಯಿಂದ ಈರ್ವರೂ ನಡೆದುಕೊಳ್ಳುವುದು ಅಭಿಮಾನಿಗಳಿಗೆ ಅಚ್ಚುಮೆಚ್ಚು. 2017ರಲ್ಲಿ ಈರ್ವರೂ ವಿವಾಹವಾಗಿದ್ದರು. ಅನುಷ್ಕಾಗೆ ವೃತ್ತಿ ಜೀವನದಲ್ಲಿ ಕಷ್ಟವಾದಾಗ ವಿರಾಟ್ ಬೆನ್ನಿಗೆ ನಿಂತಿದ್ದಾರೆ. ವಿರಾಟ್ ಕ್ರಿಕೆಟ್​ನಲ್ಲಿ ಹಿನ್ನಡೆ ಅನುಭವಿಸಿದಾಗ ಅನುಷ್ಕಾ ಧೈರ್ಯ ತುಂಬಿದ್ದಾರೆ. ಇದೀಗ ಈರ್ವರ ಬಾಳಿಗೆ ಪುಟಾಣಿ ವಮಿಕಾ ಎಂಟ್ರಿ ಕೊಟ್ಟಿದ್ದಾಳೆ. ಪ್ರಸ್ತುತ ವ್ಯಾಲಂಟೈನ್ಸ್ ವೀಕ್  ನಡೆಯುತ್ತಿದೆ. ಅಂದರೆ ಫೆಬ್ರವರಿ 7ರಿಂದ ಫೆಬ್ರವರಿ 14ರವರೆಗೆ ಒಂದೊಂದು ವಿಶೇಷ ದಿನವನ್ನು ಆಚರಿಸಲಾಗುತ್ತದೆ. 14ನೇ ತಾರೀಖು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಖ್ಯಾತ ತಾರೆಯರು ತಮ್ಮ ಸಂಗಾತಿಯ ಕುರಿತು ಹೇಳಿದ ವಿಶೇಷ ಮಾತುಗಳನ್ನು ಸ್ಮರಿಸಲಾಗುತ್ತದೆ. ವಿರಾಟ್- ಹಾಗೂ ಅನುಷ್ಕಾ ಕುರಿತ ಒಂದು ಕುತೂಹಲಕರ ವಿಚಾರ ಇಲ್ಲಿದೆ.ಬಾಲಿವುಡ್​​ನಲ್ಲಿ ಬಯೋಪಿಕ್ ಕುರಿತ ಚಿತ್ರಗಳು ಸದ್ಯದ ಟ್ರೆಂಡ್. ಈಗಾಗಲೇ ಎಂಎಸ್ ಧೋನಿ, ಮೊಹಮ್ಮದ್ ಅಜರುದ್ದೀನ್, ಸಚಿನ್ ತೆಂಡೂಲ್ಕರ್ ಮೊದಲಾದವರ ಕುರಿತು ಬಯೋಪಿಕ್​ಗಳು ಬಂದಿವೆ. ಸಂದರ್ಶನವೊಂದರಲ್ಲಿ ಕೊಹ್ಲಿಗೆ ಇದೇ ಪ್ರಶ್ನೆಯನ್ನು ಕೇಳಲಾಗಿತ್ತು. ಅದಕ್ಕೆ ಉತ್ತರಿಸುತ್ತಾ ಕೊಹ್ಲಿ ಅನುಷ್ಕಾ ಕುರಿತು ಮಾತನಾಡಿದ್ದಾರೆ. ಈ ವಿಚಾರ ವೈರಲ್ ಆಗಿತ್ತು. ಏನದು? ಮುಂದೆ ಓದಿ.ವಿರಾಟ್- ಅನುಷ್ಕಾ ಒಟ್ಟಾಗಿ ಬಯೋಪಿಕ್​ನಲ್ಲಿ ನಟಿಸುತ್ತಾರಾ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ವೃತ್ತಿ ಜೀವನವನ್ನು ಗಮನಿಸಿದರೆ ಈರ್ವರ ಸಾಧನೆಯೇನೂ ಕಡಿಮೆಯಲ್ಲ. ಅದರಲ್ಲೂ ಕೊಹ್ಲಿಯಂತೂ ದಾಖಲೆಗಳ ಒಡೆಯ. ಈಗಾಗಲೇ ಅಂತಾರಾಷ್ಟ್ರೀಯ ದಿಗ್ಗಜರ ಸಾಲಿನಲ್ಲಿ ಕೊಹ್ಲಿ ಗುರುತಿಸಿಕೊಂಡಿದ್ದಾರೆ. ಆದರೆ ಅವರ ವೃತ್ತಿ ಬದುಕೇನೂ ಸುಲಭದ್ದಾಗಿರಲಿಲ್ಲ. ಹೀಗಾಗಿ ಅವರ ಕತಾ ವಸ್ತು ಬಯೋಪಿಕ್​ಗೆ ಹೇಳಿಮಾಡಿಸಿದ ವಸ್ತು ಎನ್ನುವುದು ಹಲವರ ಭಾವನೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಖ್ಯಾತ ಫುಟ್​ಬಾಲ್ ತಾರೆ ಸುನೀಲ್ ಛೆಟ್ರಿ ಸಂದರ್ಶನವೊಂದರಲ್ಲಿ ವಿರಾಟ್​ಗೆ ಪ್ರಶ್ನೆ ಕೇಳಿದ್ದರು ̤ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸೀರೆಯುಟ್ಟ ನಾರಿ ಸೌಂದರ್ಯ ಡಬಲ್ ಆಗೋದೇಕೆ..?

Thu Feb 10 , 2022
ಸೀರೆ ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ. ವಿಶ್ವದಾದ್ಯಂತ ಸೀರೆ ಪ್ರಸಿದ್ಧಿ ಪಡೆದಿದೆ. ಆದ್ರೆ ಭಾರತೀಯ ನಾರಿಯರೇ ಹೆಚ್ಚಿನ ಪ್ರಮಾಣದಲ್ಲಿ ಸೀರೆ ಉಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಸೀರೆ ಉಡುವವರ ಸಂಖ್ಯೆ ಕಡಿಮೆಯಾಗಿದೆ. ಸೀರೆ, ನೋಡಲು ಸುಂದರವಾಗಿರದ ಮಹಿಳೆಯ ಸೌಂದರ್ಯವನ್ನೂ ಹೆಚ್ಚಿಸುತ್ತದೆ. ಅಷ್ಟು ಸುಂದರವಾಗಿರದ ಮಹಿಳೆಗೆ ಸೀರೆಯುಡಿಸಿ ನೋಡಿ. ನಿಮಗೆ ಅದ್ರ ಫಲಿತಾಂಶ ಗೊತ್ತಾಗುತ್ತದೆ. ಮದುವೆಯಾದ್ಮೇಲೆ ಹುಡುಗಿ ಮತ್ತಷ್ಟು ಸುಂದರವಾಗಿ ಕಾಣ್ತಿದ್ದಾಳೆ ಎಂಬ ಮಾತನ್ನು ನಾವು ಕೇಳಿರ್ತೇವೆ. ಇದಕ್ಕೆ ಒಂದರ್ಥದಲ್ಲಿ ಸೀರೆ ಕೂಡ […]

Advertisement

Wordpress Social Share Plugin powered by Ultimatelysocial