ವಿಷ್ಣುವರ್ಧನ್ ಸ್ಮಾರಕ ಲೋಕಾರ್ಪಣೆ.

ಸಾಹಸ ಸಿಂಹ ಡಾ ವಿಷ್ಣುವರ್ಧನ್ ಇಡೀ ಕರುನಾಡು ಮೆಚ್ಚಿದ ಹೃದಯವಂತ,ತಮ್ಮ ಅಭಿನಯದಿಂದಲೇ ಜನಮನ ಗೆದ್ದ ಅಪ್ರತಿಮ ನಟ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಹೇಳಿದ್ದಾರೆ. ಮೈಸೂರಿನ ಹಾಲಾಳು ಗ್ರಾಮದಲ್ಲಿ ನಿರ್ಮಿಸಿರುವ ಡಾ ವಿಷ್ಣುವರ್ಧನ್ ಸ್ಮಾರಕ ಭವನ ಉದ್ಘಾಟಿಸಿ ಮಾತನಾಡಿದ ಅವರು ನಾಗರಹಾವು ಸಿನೆಮಾದ ರಾಮಾಚಾರಿ ಪಾತ್ರದ ಮೂಲಕ ಎಲ್ಲರ ಮನೆ ಮಾತಾದ ಡಾ ವಿಷ್ಣುವರ್ಧನ್ ಯಾವುದೇ ಪಾತ್ರಕ್ಕೂ ಸೈ ಎನ್ನವಂತೆ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಡಾ ವಿಷ್ಣುವರ್ಧನ್ ಅವರಿಗೆ ಜೀವನದಲ್ಲಿ ಜೊತೆಯಾಗಿ,ಶಕ್ತಿ ಯಾಗಿ ನಿಂತಿದ್ದ ಪದ್ಮಶ್ರೀ ಭಾರತಿ ಅವರು ವಿಷ್ಣುವರ್ಧನ್ ಅವರು ಜನಿಸಿದ ಮೈಸೂರಿನಲ್ಲೇ ಸ್ಮಾರಕ ನಿರ್ಮಾಣ ಮಾಡಬೇಂದು ಹಂಬಲಿಸಿ ,ಪರಿಶ್ರಮ ವಹಿಸಿ ಸ್ಮಾರಕ ನಿರ್ಮಾಣ ಮಾಡಿಸಿದ್ದಾರೆ ಎಂದು ಹೇಳಿದರು ಈ ಭವ್ಯ ಸ್ಮಾರಕದಲ್ಲಿ ಎಲ್ಲಾ ಸೌಲಭ್ಯ ಇದೆ ಸಾರ್ವಜನಿಕರು ಹಾಗೂ ಚಿತ್ರ ರಂಗ ಇದರ ಅನುಕೂಲ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ್ದಾರೆ.ವಿಷ್ಣುವರ್ಧನ್ ಅವರ ಕಲೆ, ಸಾಹಸ, ಚಿತ್ರರಂಗದಲ್ಲಿ ಮಾಡಿರುವ ಸಾಧನೆ ಕಣ್ಣ ಮುಂದೆ ಇದೆ. ನಾನು ಒಬ್ಬ ವಿಷ್ಣುವರ್ಧನ್ ಅಭಿಮಾನಿಯಾಗಿ ಇಲ್ಲಿ ಬಂದಿದ್ದೇನೆ. 70 ರ ದಶಕದಲ್ಲಿ ನಾಗರಹಾವಿನ ಹೊಸ ನಾಯಕ, ಅವರ ಚಿತ್ರ ಬಂದಿತ್ತು. ಮೊದಲ ಸಲ ನೋಡಿದವರು ಖಂಡಿತವಾಗಿ ವಿಷ್ಣುವರ್ಧನ್ ಅಭಿಮಾನಿ ಆಗುತ್ತಿದ್ದರು. ಇಂದಿಗೂ ಕೂಡ ವಿಷ್ಣುವರ್ಧನ್ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರು ವಿಷ್ಣುವರ್ಧನ್ ಭಾವ ಜೀವಿ, ಮಾನವೀಯತೆಯಿಂದ ಮೆರೆದವರು. ಅವರ ಪಾತ್ರದಲ್ಲಿಯೂ ಮಾನವೀಯತೆ ಎದ್ದು ಕಾಣುತ್ತಿತ್ತು ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು. ಸ್ಮಾರಕ ನಿರ್ಮಾಣಕ್ಕೆ ಯಡಿಯೂರಪ್ಪ ನವರು 11 ಕೋಟಿ ಬಿಡುಗಡೆ ಮಾಡಿಸಿದ್ದರು. ಇದಕ್ಕಾಗಿ ನಾನು ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತ ಜೊಡೋ‌ಸಮಾರೋಪ ಸಮಾರಂಭ.

Mon Jan 30 , 2023
ಸಮಾರಂಭಕ್ಕೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಶ್ರೀನಗರದ ಹೊಟೇಲ್ ನಿಂದ ವಸ್ತು ಸ್ಥಿತಿ ವಿವರಣೆ ಕಾಶ್ಮೀರದ ಮಂಜಿನ ವಾತಾವರಣದ ಬಗ್ಗೆ ವಿವರಣೆ ಸ್ವಿಡ್ಜರ್ ಲೆಂಡ್ ಗೆ ನಾನು‌ಹೋಗಿದ್ದೆ ಆದರೆ ಇಲ್ಲಿನ ಸನ್ನಿವೇಶ ನೋಡಿರಲಿಲ್ಲ ಮಳೆ‌ಬಿದ್ದಂತೆ ಇಲ್ಲಿ ಸ್ನೋ ಬೀಳ್ತಿದೆ ನಾವು ನಾಯಕರೆಲ್ಲರೂ ಇಲ್ಲಿಗೆ ಬಂದಿದ್ದೇವೆ ಇದೊಂದು ಮರೆಯಲಾರದ ಅನುಭವವೆಂದು ವಿವರಣೆ ಭಾರತ್ ಜೋಡೋ ಯಾತ್ರೆ ಮುಕ್ತಾಯ ಇಂದು ಯಾತ್ರೆಯ ಸಮಾರೋಪ ಸಮಾರಂಭ ಜಮ್ಮುಕಾಶ್ಮೀರದ ಶ್ರೀನಗರದಲ್ಲಿ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಗಣ್ಯರು […]

Advertisement

Wordpress Social Share Plugin powered by Ultimatelysocial