ಮತ್ತೆ ಸದ್ದು ಮಾಡುತ್ತಿದೆ ಹೇಮಾಮಾಲಿನಿ ಕೆನ್ನೆ

ಮತ್ತೆ ಸದ್ದು ಮಾಡುತ್ತಿದೆ ಹೇಮಾಮಾಲಿನಿ ಕೆನ್ನೆ: ನಾನಿದನ್ನು ಸುರಕ್ಷಿತವಾಗಿಟ್ಟುಕೊಳ್ಳೋದು ಬೆಸ್ಟ್‌ ಎಂದ ನಟಿ

ಮುಂಬೈ: ರಾಜಕಾರಣಿಗಳು ನಾಲಗೆ ಹರಿಬಿಡುತ್ತ ಮಹಿಳೆಯರನ್ನು ಯಾವುದ್ಯಾವುದಕ್ಕೋ ಹೋಲಿಕೆ ಮಾಡುವ ಘಟನೆಗಳು ಹೆಚ್ಚುತ್ತಲೇ ಇವೆ. ಇತ್ತ ಮಾಜಿ ಸ್ಪೀಕರ್‌ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದರೆ, ಅತ್ತ ಮಹಾರಾಷ್ಟ್ರ ಸಚಿವ ಗುಲಾಬ್ ರಾವ್ ಪಾಟೀಲ್ ಹೆದ್ದಾರಿಯನ್ನು ನಟಿ, ಸಂಸದೆ ಹೇಮಾಮಾಲಿನಿ ಕೆನ್ನೆಗೆ ಹೋಲಿಸಿ, ಭಾರಿ ಟೀಕೆಗೆ ಗುರಿಯಾಗಿದ್ದಾರೆ.

2019ರಲ್ಲಿ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲೂ ಪ್ರಸಾದ್‌ ಯಾದವ್‌ ಕೂಡ ಅಲ್ಲಿಯ ರಸ್ತೆಗಳನ್ನು ಹೇಮಾಮಾಲಿನಿ (73) ಕೆನ್ನೆಗೆ ಹೋಲಿಸಿ ಟೀಕೆಗೆ ಗುರಿಯಾಗಿದ್ದರು. ಈಗ ಮತ್ತೆ ನಟಿಯ ಕೆನ್ನೆ ಸದ್ದು ಮಾಡುತ್ತಿದೆ. ಈಗ ಮಹಾರಾಷ್ಟ್ರದ ಸಚಿವ ಮತ್ತು ಶಿವಸೇನೆಯ ಹಿರಿಯ ನಾಯಕ ಗುಲಾಬ್ ರಾವ್ ಪಾಟೀಲ್ ಭಾಷಣದ ವೇಳೆ 30 ವರ್ಷಗಳಿಂದ ಶಾಸಕನಾಗಿರುವ ನನ್ನ ಕ್ಷೇತ್ರಕ್ಕೆ ಬಂದು ಒಮ್ಮೆ ರಸ್ತೆ ನೋಡಿ. ಅದು ಹೇಮಾಮಾಲಿನಿ ಅವರ ಕೆನ್ನೆಯಂತೆ ಇಲ್ಲದಿದ್ದರೆ, ನಾನು ರಾಜೀನಾಮೆ ನೀಡುತ್ತೇನೆ ಎಂದಿದ್ದರು.

ರಸ್ತೆಗಳನ್ನು ತಮ್ಮ ಕೆನ್ನೆಗೆ ಹೋಲಿಸುವ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವರ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ನಟಿ, ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ. ‘ಈ ಮಾತನ್ನು ಜನಸಾಮಾನ್ಯರು ಹೇಳಿದ್ದರೆ ನಿರ್ಲಕ್ಷಿಸಬಹುದಿತ್ತೇನೋ. ಆದರೆ ಜವಾಬ್ದಾರಿ ಸ್ಥಾನದಲ್ಲಿ ಇರುವ ವ್ಯಕ್ತಿಯೊಬ್ಬ ಈ ರೀತಿ ಮಾತನಾಡಿರುವುದು ಖಂಡನಾರ್ಹ. ವಿಧಾನಸಭೆಯ ಅಥವಾ ಯಾವುದೋ ಕ್ಷೇತ್ರದ ಸದಸ್ಯರಾಗಿರುವುದರಿಂದ ಈ ಮಾತು ಅವರಿಗೆ ಕ್ಷೋಭೆ ತರುವುದಿಲ್ಲ. ಯಾವುದೇ ಹೆಣ್ಣಿನ ವಿರುದ್ಧ ಈ ರೀತಿ ಹೇಳಿಕೆ ನೀಡಬಾರದು ಎಂದಿದ್ದಾರೆ. ಇದಕ್ಕೂ ಮುನ್ನ ತಿಳಿಹಾಸ್ಯದ ರೂಪದಲ್ಲಿ ನಾನು ನನ್ನ ಕೆನ್ನೆಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವುದು ಉತ್ತಮ ಎಂದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಫ್ಘನ್-ಪಾಕ್ ನಡುವೆ ಗಡಿಯುದ್ಧ ಜೋರು! : ಇಮ್ರಾನ್​ಗೆ ಶಾಕ್!

Tue Dec 21 , 2021
ಅಫ್ಘಾನಿಸ್ತಾನದ ಘೊರುಸ್ಟೆಯ ಗಡಿಯ ಡುರಾಂಡ್​​​ ಲೈನ್​​ನಲ್ಲಿ ಪಾಕಿಸ್ತಾನದ ಸೇನೆ ನಿರ್ಮಿಸಿದ್ದ ಮುಳ್ಳುತಂತಿಯ ಬೇಲಿಯನ್ನು ತಾಲಿಬಾನಿಗಳು ನಾಶಪಡಿಸಿದ್ದಾರೆ. ಡ್ಯುರಂಡ್ ಲೈನ್​​ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನವನ್ನು ಬೇರ್ಪಡಿಸೋ ಗಡಿರೇಖೆಯಾಗಿದೆ. ಡ್ಯುರಂಡ್ ಅನ್ನೋದು ಈ ಗಡಿರೇಖೆ ಎಳೆದ ಬ್ರಿಟಿಷ್ ಅಧಿಕಾರಿಯ ಹೆಸರು. ಇದು ಸುಮಾರು 2670 ಕಿಲೋಮೀಟರ್ ಇದೆ. ಆದ್ರೆ ಈ ಗಡಿಯನ್ನು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನಗಳೆರಡೂ ಒಪ್ಪಿಕೊಳ್ಳೋದಿಲ್ಲ. ಇವರ ನಡುವೆ ಗಡಿ ವಿವಾದ ಇದ್ದು, ಸರಿಯಾದ ಬೇಲಿ ವ್ಯವಸ್ಥೆಯೇ ಇರಲಿಲ್ಲ. ಇದೀಗ ತಾಲಿಬಾನಿಗಳು […]

Advertisement

Wordpress Social Share Plugin powered by Ultimatelysocial