ಹೆಸರಿಗೆ ಬ್ಯೂಟಿ ಪಾರ್ಲರ್​ ಆದ್ರೆ ಮಾಡ್ತಿದ್ದದ್ದು ನೀಚ ಕೃತ್ಯ!

ಕೊಚ್ಚಿ: ಬ್ಯೂಟಿ ಪಾರ್ಲರ್​ ಹೆಸರಿನಲ್ಲಿ ಸಿಂಥೆಟಿಕ್​ ಡ್ರಗ್​ ಮತ್ತು ಸ್ಟ್ಯಾಂಪ್​ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಕೇರಳದ ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತ ಮಹಿಳೆಯನ್ನು ಶೀಲಾ ಸನ್ನಿ (51) ಎಂದು ಗುರುತಿಸಲಾಗಿದೆ.

ಈಕೆ ಕೇರಳದ ತ್ರಿಸ್ಸೂರ್​ ಜಿಲ್ಲೆಯ ನಾಯರಂಗಡಿ ನಿವಾಸಿ. ಚಲಕುಡಿಯಲ್ಲಿ ಬ್ಯೂಟಿ ಪಾರ್ಲರ್​ ಇಟ್ಟುಕೊಂಡಿದ್ದಳು. ಆದರೆ, ಪಾರ್ಲರ್​ ಒಳಗೆ ಡ್ರಗ್ಸ್​ ಮತ್ತು ಸ್ಟ್ಯಾಂಪ್​ ಮಾರಾಟದಂತಹ ಅಕ್ರಮ ವ್ಯವಹಾರ ನಡೆಸುತ್ತಿದ್ದಳು. ಇರಿಂಜಲಕುಡ ವೃತ್ತದ ಕಚೇರಿಯಲ್ಲಿ ದೊರೆತ ರಹಸ್ಯ ಮಾಹಿತಿ ಮೇರೆಗೆ ಅಬಕಾರಿ ನಿರೀಕ್ಷಕ ಕೆ.ಸತೀಶನ್ ನೇತೃತ್ವದ ತಂಡ ಆಕೆಯನ್ನು ಬಂಧಿಸಿದೆ.

 ಆಕೆಯ ಸ್ಕೂಟರ್‌ನ ಬ್ಯಾಗ್‌ನಲ್ಲಿ ಬಚ್ಚಿಟ್ಟಿದ್ದ ಮಾರಣಾಂತಿಕ ಔಷಧಗಳ ಸುಮಾರು 12 ಸ್ಟ್ಯಾಂಪ್‌ಗಳು ಪತ್ತೆಯಾಗಿವೆ. ವಶಪಡಿಸಿಕೊಂಡ ಸ್ಟಾಂಪ್ ಮೌಲ್ಯ 60,000 ರೂಪಾಯಿ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ತನಿಖಾ ತಂಡದಲ್ಲಿ ಪ್ರಿವೆಂಟಿವ್ ಆಫೀಸರ್ ಜಯದೇವನ್, ಶಿಜು ವರ್ಗೀಸ್, ಮಹಿಳಾ ಸಿವಿಲ್ ಅಬಕಾರಿ ಅಧಿಕಾರಿಗಳಾದ ಪಿ ಎಸ್ ರಜಿತಾ, ಸಿ ಎನ್ ಸಿಜಿ ಮತ್ತು ಡ್ರೈವರ್ ಶಾನ್ ಇದ್ದರು

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮನೋಜ್​ ಬಾಜಪಾಯಿ ಅವರಿಗೆ ಈಗ ಸಖತ್ ಬೇಡಿಕೆ ಇದೆ.

Tue Feb 28 , 2023
  ಮನೋಜ್​ ಬಾಜಪಾಯಿ ಅವರಿಗೆ ಈಗ ಸಖತ್ ಬೇಡಿಕೆ ಇದೆ. ಅದಕ್ಕೆ ತಕ್ಕಂತೆ ಶ್ರೀಮಂತಿಕೆಯೂ ಬಂದಿದೆ. ಆದರೆ ಒಂದು ಕಾಲದಲ್ಲಿ ಪರಿಸ್ಥಿತಿ ಹೀಗಿರಲಿಲ್ಲ. ಅವರ ಬಳಿ ಶೂ ಕೂಡ ಇರಲಿಲ್ಲ. ನಟ ಶಾರುಖ್​ ಖಾನ್​  ಅವರನ್ನು ಸಿನಿಮಾಗಳಲ್ಲಿ ನೋಡಿ ಅಭಿಮಾನಿಗಳು ಎಂಜಾಯ್​ ಮಾಡುತ್ತಾರೆ. ಆದರೆ ಅವರ ರಿಯಲ್​ ಲೈಫ್​ ವ್ಯಕ್ತಿತ್ವ ಯಾವ ರೀತಿ ಇದೆ ಎಂಬುದು ಗೊತ್ತಿರುವುದು ಕೆಲವೇ ಮಂದಿಗೆ ಮಾತ್ರ .ಕಿಂಗ್​ ಖಾನ್​ಜೊತೆ ಒಡನಾಡಿದ ಎಲ್ಲರಿಗೂ ಅವರ ನಿಜವಾದ […]

Advertisement

Wordpress Social Share Plugin powered by Ultimatelysocial