ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಎಂದರೇನು?

ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಎಂದರೇನು? ಅವುಗಳಲ್ಲಿ ಹೂಡಿಕೆ ಮಾಡುವುದು ಹೇಗೆ? ಹೂಡಿಕೆ ಮಾಡುವ ಮೂಲಕ ಎಷ್ಟು ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು? ತೆರಿಗೆ ವಿನಾಯಿತಿ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.ತೆರಿಗೆ ವಿನಾಯಿತಿ ಪಡೆಯಲು ಹಲವಾರು ಆಯ್ಕೆಗಳಿವೆ.

ಅವುಗಳಲ್ಲಿ ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್​​ನಲ್ಲಿ ಮಾಡುವ ಹೂಡಿಕೆಯೂ ಪ್ರಮುಖವಾದದ್ದಾಗಿದೆ. ಇಎಲ್​ಎಸ್​ಎಸ್ ಇದರ ವಿಸ್ತೃತ ರೂಪ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್, ಅಂದರೆ ಷೇರು ಸಂಯೋಜಿತ ಉಳಿತಾಯ ಯೋಜನೆ ಎಂದಾಗಿದೆ. ಈ ಯೋಜನೆಯಲ್ಲಿ ಸ್ವತ್ತು ನಿರ್ವಹಣಾ ಕಂಪನಿಗಳು ತಮ್ಮ ಸ್ವತ್ತನ್ನು ಷೇರುಗಳ ಮೇಲೆ ಹೂಡಿಕೆ ಮಾಡುತ್ತವೆ. ಸ್ವತ್ತು ನಿರ್ವಹಣಾ ಕಂಪನಿಗಳ ಮೂಲಕ ಹೂಡಿಕೆ ಮಾಡಿ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಎಂದರೇನು? ಅವುಗಳಲ್ಲಿ ಹೂಡಿಕೆ ಮಾಡುವುದು ಹೇಗೆ? ಹೂಡಿಕೆ ಮಾಡುವ ಮೂಲಕ ಎಷ್ಟು ಆದಾಯಕ್ಕೆ ತೆರಿಗೆ ವಿನಾಯಿತಿ ಪಡೆಯಬಹುದು? ತೆರಿಗೆ ವಿನಾಯಿತಿ ಪಡೆಯುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

ಇಎಲ್​ಎಸ್​ಎಸ್ ಮ್ಯೂಚುವಲ್ ಫಂಡ್ ಎಂದರೇನು?

ವ್ಯಕ್ತಿಗಳು ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ಉಳಿತಾಯ ಮಾಡಬಹುದಾದ ಮ್ಯೂಚುವಲ್ ಫಂಡ್ ಉಳಿತಾಯ ಯೋಜನೆಯೇ ಇಎಲ್​​ಎಸ್​​ಎಸ್. ಮೇಲೆ ತಿಳಿಸಿದಂತೆ, ಇದರ ವಿಸ್ತೃತ ರೂಪ ಈಕ್ವಿಟಿ ಲಿಂಕ್ಡ್ ಸೇವಿಂಗ್ಸ್ ಸ್ಕೀಮ್. ಅನೇಕ ಫಂಡ್​ ಹೌಸ್​​ಗಳು ಈ ಸ್ಕೀಮ್​ ಅನ್ನು ಒದಗಿಸುತ್ತವೆ. ಐಡಿಎಫ್​ಸಿ ಟ್ಯಾಕ್ಸ್ ಅಡ್ವಾಂಟೇಜ್, ಕೆನರಾ ರೋಬಿಕೋ ಈಕ್ವಿಟಿ ಟ್ಯಾಕ್ಸ್ ಸೇವರ್, ಮಿರಾಯೆ ಅಸೆಟ್ ಟ್ಯಾಕ್ಸ್ ಸೇವರ್ ಫಂಡ್, ಡಿಎಸ್​​ಪಿ ಟ್ಯಾಕ್ಸ್ ಸೇವರ್ ಇಎಲ್​​ಎಸ್​​ಎಸ್ ಮ್ಯೂಚುವಲ್ ಫಂಡ್​ಗಳಿಗೆ ಕೆಲವು ಉದಾಹರಣೆಗಳಾಗಿವೆ.

ಇಎಲ್​​ಎಸ್​​ಎಸ್ ಮ್ಯೂಚುವಲ್ ಫಂಡ್ ಹೂಡಿಕೆಗೆ 3 ವರ್ಷಗಳ ಲಾಕ್ ಇನ್ ಅವಧಿ ಇರುತ್ತದೆ. 3 ವರ್ಷಕ್ಕೂ ಮೊದಲೇ ಹೂಡಿಕೆದಾರರಿಗೆ ತಮ್ಮ ಹಣವನ್ನು ವಾಪಸ್ ಪಡೆಯಲು ಅವಕಾಶ ಇರುವುದಿಲ್ಲ. ಅಂದರೆ, ಯೂನಿಟ್ ಅಲೊಟ್​ಮೆಂಟ್​ ಆದ ನಂತರ ಮಾರಾಟ ಮಾಡಲು 3 ವರ್ಷಗಳಾಗಬೇಕು. ಹೂಡಿಕೆ ಮಾಡಿದ ಹಣಕ್ಕೆ ಅನುಗುಣವಾಗಿ ಯೂನಿಟ್​​ಗಳನ್ನು ಹಂಚಿಕೆ ಮಾಡಲಾಗುತ್ತದೆ.

ಇಎಲ್​ಎಸ್​​ಎಸ್​ ಮೂಲಕ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ?

ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷ ರೂ.ವರೆಗಿನ ಆದಾಯಕ್ಕೆ ಇಎಲ್​ಎಸ್​​ಎಸ್​ ಮ್ಯೂಚುವಲ್ ಫಂಡ್ ಹೂಡಿಕೆ ಮೂಲಕ ಆದಾಯ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ. ಉದಾಹರಣೆಗೆ; ವ್ಯಕ್ತಿಯೊಬ್ಬರು ಇಎಲ್​ಎಸ್​​ಎಸ್​ ಮ್ಯೂಚುವಲ್ ಫಂಡ್​ನಲ್ಲಿ 50,000 ರೂ. ಹೂಡಿಕೆ ಮಾಡಿದ್ದರೆ, ಒಟ್ಟು ತೆರಿಗೆ ವ್ಯಾಪ್ತಿಗೆ ಬರುವ ಆದಾಯದಿಂದ ಈ ಮೊತ್ತವನ್ನು ಕಳೆಯಲಾಗುತ್ತದೆ. ಇದರಿಂದ ತೆರಿಗೆ ಹೊರೆ ಕಡಿಮೆಯಾಗಲಿದೆ. ಈ ವಿಧಾನದಲ್ಲಿ ಹೂಡಿಕೆ ಮಾಡುವ ಮೂಲಕ ವಾರ್ಷಿಕವಾಗಿ 46,800 ರೂ. ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.

ನೆನಪಿರಲಿ; ಮಾರುಕಟ್ಟೆ ರಿಸ್ಕ್​​ಗಳಿಂದ ಹೊರತಲ್ಲ

ಇಎಲ್​ಎಸ್​​ಎಸ್​ ಮ್ಯೂಚುವಲ್ ಫಂಡ್​ನಲ್ಲಿ ಹೂಡಿಕೆ ಮಾಡುವುದು ಸಂಪೂರ್ಣವಾಗಿ ಮಾರುಕಟ್ಟೆ ರಿಸ್ಕ್​​ಗಳಿಂದ ಮುಕ್ತವಾಗಿರುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. 3 ವರ್ಷಗಳ ವರೆಗೆ ಹಿಂಪಡೆಯಲಾಗುವುದಿಲ್ಲವಾದ ಕಾರಣ ಆ ಸಂದರ್ಭದಲ್ಲಿನ ಮಾರುಕಟ್ಟೆ ಏರಿಳಿತಗಳು ಹೂಡಿಕೆ ಮೇಲೆ ಪರಿಣಾಮ ಬೀರಬಹುದು. ಯಾಕೆಂದರೆ ಇದು ಷೇರುಗಳ ಮೇಲೆ ಮಾಡುವ ಹೂಡಿಕೆಯಾಗಿದೆ. ಹಿಂಪಡೆಯುವ ಸಂದರ್ಭದಲ್ಲಿ ಮಾರುಕಟ್ಟೆ ಉತ್ತಮ ಗಳಿಕೆ ದಾಖಲಿಸುತ್ತಿದ್ದರೆ ಹೆಚ್ಚಿನ ಲಾಭವೂ ದೊರೆಯಬಹುದು. ಹಾಗೆಂದು ತೆರಿಗೆ ಉಳಿಸುವ ಸ್ಥಿರ ಠೇವಣಿಗಳಲ್ಲಿ (ಎಫ್​ಡಿ) ಹೂಡಿಕೆ ಮಾಡುವುದಾದರೆ 5 ವರ್ಷಗಳ ಲಾಕ್ ಇನ್ ಅವಧಿ ಇರುತ್ತದೆ ಎಂಬುದು ನೆನಪಿರಲಿ.

ಇಎಲ್​ಎಸ್​​ಎಸ್​ ಮ್ಯೂಚುವಲ್​ ಫಂಡ್​ನಲ್ಲಿ ಹೂಡಿಕೆ ಮಾಡುವುದು ಹೇಗೆ?

ವ್ಯವಸ್ಥಿತ ಹೂಡಿಕೆ ಯೋಜನೆ ಅಥವಾ ಎಸ್​ಐಪಿ   ವಿಧಾನದಲ್ಲಿ ಹಾಗೂ ಒಂದು ಬಾರಿಯ ಹೂಡಿಕೆ ಅಥವಾ ಲಂಸಮ್  ಹೂಡಿಕೆ ಮಾಡಲೂ ಇಎಲ್​ಎಸ್​​ಎಸ್​ ಮ್ಯೂಚುವಲ್​ ಫಂಡ್​ನಲ್ಲಿ ಅವಕಾಶವಿದೆ. ಎಸ್​ಐಪಿಯಲ್ಲಿ ಪ್ರತಿ ತಿಂಗಳು ಹೂಡಿಕೆ ಮಾಡಬಹುದು. ಇದಕ್ಕೆ ಗರಿಷ್ಠ ಮಿತಿಯಿಲ್ಲ. ಕನಿಷ್ಠ ಮಿತಿ ಮ್ಯೂಚುವಲ್​ ಫಂಡ್​​ ಹೌಸ್​​ಗಳಲ್ಲಿ ಭಿನ್ನವಾಗಿರುತ್ತವೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

50 ವರ್ಷ ಪ್ರಾಯದ ರಾಧಾ ವೆಂಬು ಭಾರತದ ಮೂರನೇ ಶ್ರೀಮಂತ ಮಹಿಳೆಯಾಗಿದ್ದಾರೆ.

Mon Feb 13 , 2023
50 ವರ್ಷ ಪ್ರಾಯದ ರಾಧಾ ವೆಂಬು ಭಾರತದ ಮೂರನೇ ಶ್ರೀಮಂತ ಮಹಿಳೆಯಾಗಿದ್ದಾರೆ. ಹಾಗೆಯೇ ಪ್ರಸ್ತುತ ಸ್ವಯಂ ಪ್ರಯತ್ನದಿಂದ ಶ್ರೀಮಂತೆಯಾದ ಭಾರತದ ಮಹಿಳೆ ಎಂಬ ಹೆಗ್ಗಳಿಕೆಯು ಇದೆ. ಇನ್ನು ಭಾರತದ ಶ್ರೀಮಂತ ಮಹಿಳೆಯರ ಪಟ್ಟಿಯಲ್ಲಿ ಮೊದಲನೇ ಹಾಗೂ ಎರಡನೇ ಸ್ಥಾನದಲ್ಲಿ ಕಿರಣ್ ಮಜುಂದಾರ್-ಶಾ ಮತ್ತು ಫಾಲ್ಗುಣಿ ನಾಯರ್ ಇದ್ದಾರೆ. ಫೋರ್ಬ್ಸ್‌ನ ರಿಯಲ್ ಟೈಮ್ ರಿಚ್ ಲೀಸ್ಟ್ ಪ್ರಕಾರ ರಾಧಾ ವೆಂಬು ಆದಾರವು 2.6 ಕೋಟಿ ಡಾಲರ್ ರೂಪಾಯಿ ಅಥವಾ 21,455 ಕೋಟಿ […]

Advertisement

Wordpress Social Share Plugin powered by Ultimatelysocial