ಈ ಕಾರಣಕ್ಕಾಗಿಯೇ ಇನ್ನೂ ಮದುವೆಯಾಗಿಲ್ಲವಂತೆ ಸಲ್ಮಾನ್ ಖಾನ್ ..!

ನವದೆಹಲಿ : ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ (Salman Khan) ಇಂದು ತಮ್ಮ 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹುಟ್ಟುಹಬ್ಬದ ಮುನ್ನಾ ದಿನ ಸಲ್ಮಾನ್ ಖಾನ್ ಗೆ ಅವರ ಫಾರ್ಮ ಹೌಸ್ ನಲ್ಲಿ ಹಾವು ಕಚ್ಚಿದ್ದು, ಇದೀಗ ಅವರು ಚೇತರಿಸಿಕೊಂಡಿದ್ದಾರೆ.

ಅಲ್ಲದೆ, ತಡರಾತ್ರಿ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಸಲ್ಲು ಅಭಿಮಾನಿಗಳು ಯಾವಾಗಲೂ, ಅವರು ಬೇಗನೇ ಮದುವೆಯಾಗಳಿ ಎಂದು ಹಾರೈಸುತ್ತಾರೆ. ಆದರೆ, ಸಲ್ಮಾನ್ ಮಾತ್ರ ಇಲ್ಲಿಯವರೆಗೂ ಒಂಟಿಯಾಗಿಯೇ ಇದ್ದಾರೆ.

ಈ ನಟಿಯಿಂದಾಗಿಯೇ ಇನ್ನೂ ಸಿಂಗಲ್ ಆಗಿದ್ದಾರಂತೆ ಸಲ್ಮಾನ್ :
ಸಲ್ಮಾನ್ ಖಾನ್ ಯಾವಾಗ ಮದುವೆಯಾಗುತ್ತಾರೆ? ಎನ್ನುವ ಪ್ರಶ್ನೆ ಇವತ್ತು ನಿನ್ನೆಯದ್ದಲ್ಲ. ಆದ್ರೆ ಈ ಪಶ್ನೆ ಕೇವಲ ಪ್ರಶ್ನೆಯಾಗಿಯೇ ಉಳಿದಿದೆ. ಸಲ್ಮಾನ್ ಅಭಿಮಾನಿಗಳಂತೂ (Salman khan fans) ಸಲ್ಲು ಜೀವನದ ಈ ಶುಭ ಘಳಿಗೆಗಾಗಿ ಕಾಯುತ್ತಿದ್ದಾರೆ. ಸಲ್ಮಾನ್ ಮದುವೆ ( Salman Khan Marriage) ವಿಳಂಬವಾಗುತ್ತಿರುವುದಕ್ಕೆ ನಾನಾ ಕಾರಣಗಳಿರಬಹುದು.

2014 ರಲ್ಲಿ ಬಹಿರಂಗವಾಗಿತ್ತು ರಹಸ್ಯ :
ಒಮ್ಮೆ ಸಲ್ಮಾನ್ ತಾವಿನ್ನೂ ಯಾಕೆ ಮದುವೆಯಾಗಿಲ್ಲ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದರು. ಇದು 2014 ರಲ್ಲಿ ಬಿಗ್ ಬಾಸ್ (Bigg boss) ಸೆಟ್‌ನಲ್ಲಿ ನಡೆದಿದ್ದ ಮಾತು. ಆ ವೇಳೆ ರೇಖಾ (Rekha) ತಮ್ಮ ‘ಸೂಪರ್ ನಾನಿ’ ಚಿತ್ರದ ಪ್ರಚಾರಕ್ಕಾಗಿ ಅಲ್ಲಿಗೆ ಆಗಮಿಸಿದ್ದರು. ತನ್ನ ಹದಿಹರೆಯದ ವರ್ಷಗಳಲ್ಲಿ ರೇಖಾ ಅವರಿಂದ ಬಹಳ ಪ್ರಭಾವಿತನಾಗಿದ್ದೆ ಎಂದು ಸಲ್ಮಾನ್ ಆ ಸಂದರ್ಭದಲ್ಲಿ ಹೇಳಿದ್ದರು. ಅಲ್ಲದೆ, ಇನ್ನೂ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದ್ದರು. ಆ ದಿನಗಳಲ್ಲಿ ರೇಖಾ ಮತ್ತು ಸಲ್ಮಾನ್ ಅಕ್ಕಪಕ್ಕದ ಮನೆಯವರು. ರೇಖಾ ಮಾರ್ನಿಂಗ್ ವಾಕ್ ಹೋಗುವುದನ್ನು ನೋಡಲು ಸಲ್ಮಾನ್ ಬೆಳಗ್ಗೆ 5.30ಕ್ಕೆ ಎದ್ದು ಹೋಗುತ್ತಿದ್ದರಂತೆ. ರೇಖಾಗೆ ಬೇಕಾಗಿ ಯೋಗ ತರಗತಿಗೂ ಸೇರಿಕೊಂಡಿದ್ದಅಂತೆ ಸಲ್ಮಾನ್.

ರೇಖಾ ಅವರಿಗೆ ಈ ಕೆಲಸ ಮಾಡುತ್ತಿದ್ದರು :
ಆ ಸಮಯದಲ್ಲಿ ನನಗೂ ಯೋಗಾಕ್ಕೂ ಯಾವ ಸಂಬಂಧವೂ ಇರಲಿಲ್ಲ. ಆದರೆ, ಅಲ್ಲಿ ರೇಖಾ ಯೋಗ (Yoga) ಕಲಿಸುತ್ತಿದ್ದರಿಂದ, ತಾನು ಮತ್ತು ಸ್ನೇಹಿತ ಅಲ್ಲಿಗೆ ತೆರಳುತ್ತಿದ್ದುದಾಗಿ ಹೇಳಿದ್ದಾರೆ. ಅಷ್ಟು ಮಾತ್ರವಲ್ಲ ತಾನು ದೊಡ್ಡವನಾದ ಮೇಲೆ ಇಡೀ ಹುಡುಗಿಯನ್ನು ವಿವಾಹವಾಗುವುದಾಗಿಯೂ ತನ್ನ ಮನೆಯಲ್ಲಿ ಹೇಳಿದ್ದರಂತೆ. ಈ ಬಗ್ಗೆ ಬಿಗ್ ಬಾಸ್ ವೇದಿಕೆಯಲ್ಲಿ ಮಾತನಾಡಿದ್ದ ಸಲ್ಮಾನ್ ಬಹುಶಃ ಇದೇ ಕಾರಣಕ್ಕೆ ತಾನಿನ್ನೂ ಮದುವೆಯಾಗಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ನಗು ನಗುತ್ತಲೇ ಉತ್ತರಿಸಿದ ರೇಖಾ, ಬಹುಶಃ ನಾನು ಕೂಡಾ ಇಡೀ ಕಾರಣಕ್ಕೆ ಮದುವೆಯಾಗಿಲ್ಲ ಎಂದು ತಮಾಷೆಯಾಗಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಡಕ್‌ಔಟ್ ಆಗಿ ಬಂದ ಪೂಜಾರಾ ಜೊತೆ ಮಾತನಾಡದೇ ಹೊರಟ ದ್ರಾವಿಡ್

Mon Dec 27 , 2021
Cheteshwar Pujara ಕಳಪೆ ಪ್ರದರ್ಶನ ನೋಡಿ Dravid ಮಾಡಿದ್ದೇನು |speed news ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿರುವ ಟೀಮ್ ಇಂಡಿಯಾ ಹರಿಣಗಳ ವಿರುದ್ಧ 3 ಟೆಸ್ಟ್ ಪಂದ್ಯಗಳ ಸರಣಿ ಮತ್ತು 3 ಏಕದಿನ ಪಂದ್ಯಗಳ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಮೊದಲಿಗೆ ಇತ್ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದು ಚೊಚ್ಚಲ ಟೆಸ್ಟ್ ಪಂದ್ಯ ಈಗಾಗಲೇ ಆರಂಭವಾಗಿದೆ. ಡಿಸೆಂಬರ್ 26ರ ಬಾಕ್ಸಿಂಗ್ ಡೇ ದಿನದಂದು ಸೆಂಚುರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಸ್ಟೇಡಿಯಂನಲ್ಲಿ ಭಾರತ […]

Advertisement

Wordpress Social Share Plugin powered by Ultimatelysocial