ಕೊರೋನಾ ಟೈಂನಲ್ಲಿ ಜನರಿಗೆ ಸಹಾಯ ಮಾಡೋಕೆ ಅಷ್ಟೊಂದು ದುಡ್ಡು ಎಲ್ಲಿಂದ ಬಂತು?

ಕ್ಷಿಣ-ಬಾಲಿವುಡ್ ನಟ ಸೋನು ಸೂದ್ ಅವರು ಜನಸಾಮಾನ್ಯರ ಮಧ್ಯೆ ಭಾರೀ ಜನಪ್ರಿಯತೆಯನ್ನು ಗಳಿಸಿದ್ದಾರೆ. ಅನೇಕರು ನಟನನ್ನು ದೇವರಿಗೆ ಹೋಲಿಸಿದ್ದಾರೆ.

ಕೊರೋನಾ ಅವಧಿಯಲ್ಲಿ ನಟ ಉದಾರ ಹಸ್ತದಿಂದ ಅಗತ್ಯವಿರುವವರಿಗೆ ಸಹಾಯ ಮಾಡುವ ಮೂಲಕ ಹೊಸ ಟ್ರೆಂಡ್ ಸೆಟ್ ಮಾಡಿದ್ದಾರೆ.

ಅವರನ್ನು ನೋಡಿ ಬಹಳಷ್ಟು ಜನರು ಪ್ರಭಾವಿತರಾದರು.

ಈ ಸಮಯದಲ್ಲಿ ಸೋನು ಸೂದ್ ಜನರಿಗೆ ಔಷಧಿಗಳಿಂದ ಹಿಡಿದು ಅಗತ್ಯ ವಸ್ತುಗಳವರೆಗೆ ಬಹಳಷ್ಟು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ವಸತಿ, ಊಟ, ಪ್ರಯಾಣಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದ್ದರು.

ಕೊರೋನಾ ಸಮಯದಲ್ಲಿ ಸಹಾಯ ಮಾಡಲು ನಟನಿಗೆ ಅಷ್ಟೊಂದು ಹಣ ಎಲ್ಲಿಂದ ಬಂತು ಎಂದು ಹಲವರು ಆಶ್ಚರ್ಯ ಪಟ್ಟಿದ್ದಾರೆ. ವಿಮಾನ, ಸ್ಪೆಷಲ್ ರೈಲು ಇವೆಲ್ಲಾ ಖರ್ಚು ದೊಡ್ಡದು. ಆದರೆ ನಟ ಎಲ್ಲವನ್ನೂ ಹೇಗೆ ನಿಭಾಯಿಸಿದ್ರು?

ಇದೀಗ ಈ ಪ್ರಶ್ನೆಗೆ ಖುದ್ದು ನಟ ಸೋನು ಸೂದ್ ಅವರೇ ಉತ್ತರಿಸಿ ಸತ್ಯ ಹೇಳಿದ್ದಾರೆ. ಇದಕ್ಕೆ ‘ಆಪ್ ಕಿ ಅದಾಲತ್’ ನಲ್ಲಿ ಸ್ಪಷ್ಟ ಉತ್ತರ ನೀಡಿದ್ದಾರೆ.

ನಟ ಅಂದು ಮಾಡಿದ ಅಷ್ಟು ಪರಿಹಾರ ಕಾರ್ಯಗಳನ್ನು ಮಾಡುವುದಿರಲಿ, ಬರೀ 2 ದಿನ ಪರಿಹಾರ ಕಾರ್ಯ ಮಾಡಿದರೂ ನಟನ ಸಂಪಾದನೆ ಎಲ್ಲ ಖಾಲಿಯಾಗ್ತಿತ್ತಂತೆ. ಇದನ್ನು ನಟನೇ ಹೇಳಿದ್ದಾರೆ.

ನನ್ನ ಬಳಿ ಅಷ್ಟು ದುಡ್ಡ ಖಂಡಿತಾ ಇರಲಿಲ್ಲ. ನಾನೇನಾದರೂ ಹಾಗೆ ಮಾಡಿದ್ರೆ 2 ದಿನಕ್ಕೂ ನನ್ನ ಸಂಪಾದನೆ ಸಾಕಾಗುತ್ತಿರಲಿಲ್ಲ. ನನ್ನ ಎಲ್ಲಾ ಬ್ರ್ಯಾಂಡ್‌ಗಳಿಗೆ ನಿಧಿ ಸಂಗ್ರಹಿಸಲು ಕೇಳಿದೆ. ನಾನು ಆ ಹಣವನ್ನು ಜನರಿಗೆ ಸಹಾಯ ಮಾಡಲು ಬಳಸಿದ್ದೇನೆ ಎಂದಿದ್ದಾರೆ.

ಔಷಧಿ ಅಥವಾ ಇನ್ಯಾವುದೇ ಜಾಹೀರಾತುಗಳನ್ನು ಮಾಡಲು ನಾನು ಒಂದು ಪೈಸೆಯನ್ನೂ ತೆಗೆದುಕೊಳ್ಳುವುದಿಲ್ಲ ಎಂದು ಕಂಪೆನಿಗೆ ಹೇಳಿದೆ. ಬದಲಾಗಿ ನಿಧಿ ಸಂಗ್ರಹಕ್ಕೆ ಬೇಡಿಕೆ ಇಟ್ಟೆ ಎಂದಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಾ. ಶಾಂತಿಸ್ವರೂಪ್ ಭಟ್ನಾಗರ್ ಭಾರತದ ಮಹಾನ್ ವಿಜ್ಞಾನಿ.

Tue Feb 21 , 2023
ಸರ್ ಶಾಂತಿ ಸ್ವರೂಪ್ ಭಟ್ನಾಗರ್ 1894ರ ಫೆಬ್ರುವರಿ 21ರಂದು ಜನಿಸಿದರು. ಬ್ರಹ್ಮ ಸಮಾಜದ ಅನುಯಾಯಿಗಳಾಗಿದ್ದ ಅವರ ತಂದೆ ಪರಮೇಶ್ವರಿ ಸಹಾಯ್ ಭಾಟ್ನಾಗರ್ ಅವರು, ಶಾಂತಿ ಸ್ವರೂಪರು ಇನ್ನೂ ಎಂಟು ತಿಂಗಳ ಮಗುವಾಗಿದ್ದಾಗಲೇ ನಿಧನರಾದರು. ಹೀಗಾಗಿ ಶಾಂತಿ ಸ್ವರೂಪ್ ಭಾಟ್ನಾಗರ್ ಅವರು ತಮ್ಮ ತಾಯಿಯ ತವರು ಮನೆಯಲ್ಲಿ ಬಾಲ್ಯವನ್ನು ಕಳೆದರು. ಅವರ ತಾತನವರು ಎಂಜಿನಿಯರ್ ಆಗಿದ್ದು ಬಾಲಕ ಶಾಂತಿ ಸ್ವರೂಪನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಕುರಿತಾದ ಆಸಕ್ತಿ ಮೂಡಲು ಪ್ರೇರಕರಾದರು. ಪುಟ್ಟವಯಸ್ಸಿನಲ್ಲೇ […]

Advertisement

Wordpress Social Share Plugin powered by Ultimatelysocial