ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ‘ಪುಷ್ಪ 2’ ಅಡ್ಡಕ್ಕೆ ಸಾಯಿ ಪಲ್ಲವಿ ಎಂಟ್ರಿ ಕೊಡ್ತಾರಾ?

‘ಸ್ಟೈಲಿಶ್ ಸ್ಟಾರ್’ ಅಲ್ಲು ಅರ್ಜುನ್‌ ಮುಖ್ಯ ಭೂಮಿಕೆಯ ‘ಪುಷ್ಪ 2’ ಸಿನಿಮಾದ ( Pushpa Movie ) ಚಿತ್ರೀಕರಣ ಶುರುವಾಗಿದೆ. ಈ ಸಿನಿಮಾಗೆ ಅಚ್ಚರಿ ಎನ್ನುವಂತೆ ನಟಿ ಸಾಯಿ ಪಲ್ಲವಿಯ ಎಂಟ್ರಿ ಆಗಿದೆ. ಈ ಸಿನಿಮಾದಲ್ಲಿ ಸಾಯಿ ಪಲ್ಲವಿ ಕೂಡ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರಂತೆ. ಹಾಗಾದರೆ ರಶ್ಮಿಕಾ ಮಂದಣ್ಣ ಸಿನಿಮಾದಲ್ಲಿಇರುವುದಿಲ್ಲವಾ ಎಂದರೆ ಅವರೂ ಇರುತ್ತಾರಂತೆ.
ಮೂಲಗಳ ಪ್ರಕಾರ, ಅಲ್ಲುಅರ್ಜುನ್‌ ಅವರ ಸಹೋದರಿಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸಲಿದ್ದಾರೆ. ಈಗಾಗಲೇ ಚಿತ್ರತಂಡ ಸಾಯಿ ಪಲ್ಲವಿಗೆ ಸ್ಕ್ರಿಪ್ಟ್ ಕಳಿಸಿದ್ದು, ಅವರು ಓಕೆ ಹೇಳಿದ್ದಾರಂತೆ. ಆದರೆ ಚಿತ್ರತಂಡ ಅಧಿಕೃತವಾಗಿ ಇನ್ನೂ ಏನೂ ಹೇಳಿಲ್ಲ. ಒಟ್ಟಾರೆ ಸಾಯಿ ಪಲ್ಲವಿ ಎಂಟ್ರಿಯಿಂದ ‘ಪುಷ್ಪ -2’ ಚಿತ್ರದ ಖದರ್‌ ಹೆಚ್ಚಾಗಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

 

 

 

Please follow and like us:

Leave a Reply

Your email address will not be published. Required fields are marked *

Next Post

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ 'ಕಾಂತಾರ' ಸಿನಿಮಾ ಎಷ್ಟೆಲ್ಲ ದಾಖಲೆಗಳನ್ನು ಮಾಡಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಇದೀಗ ರಿಷಬ್‌ ಶೆಟ್ಟಿ ಅವರ ಮುಂದಿನ ಸಿನಿಮಾಗಳ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಆದರೆ ರಿಷಬ್‌ ಶೆಟ್ಟಿ ಅವರ ಹೊಸ ಸಿನಿಮಾದ ಕುರಿತು ಇಲ್ಲೊಂದು ಮಾಹಿತಿ ಹೊರಬಿದ್ದಿದೆ.

Wed Dec 28 , 2022
ನಟ ರಿಷಬ್ ಶೆಟ್ಟಿ ಅವರ ‘ಕಾಂತಾರ’ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಮಾಡಿರುವ ಸಾಧನೆ ಎಂಥದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಅವರೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಈ ಮಧ್ಯೆ ‘ಕಾಂತಾರ’ ಸಿನಿಮಾ ರಿಲೀಸ್‌ಗೂ ಮುನ್ನ ರಿಷಬ್ ಶೆಟ್ಟಿ ಒಂದಷ್ಟು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಆದರೆ ‘ಕಾಂತಾರ’ ತೆರೆಕಂಡ ಬಳಿಕ ಆ ಸಿನಿಮಾಗಳಲ್ಲಿ ಒಂದಷ್ಟು ಬದಲಾವಣೆ ಆಗಿದೆ. ಅದರಲ್ಲಿ ಮೊದಲನೆಯದು, ರಕ್ಷಿತ್ ಶೆಟ್ಟಿ ನಿರ್ಮಾಣದ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ! ಹೌದು, ರಕ್ಷಿತ್ ಶೆಟ್ಟಿ […]

Advertisement

Wordpress Social Share Plugin powered by Ultimatelysocial