WHO:ವಿಶ್ವ ಆರೋಗ್ಯ ಸಂಸ್ಥೆ ಮನುಷ್ಯರಿಗೆ ನಿಯೋಕೋವ್ ಅಪಾಯದ ಕುರಿತು ಮತ್ತಷ್ಟು ಅಧ್ಯಯನ;

ವಾಷಿಂಗ್ಟನ್, ಜನವರಿ 29: ಮನುಷ್ಯರ ಮೇಲೆ ನಿಯೋಕೋಈವ್ ಯಾವ ರೀತಿ ಪರಿಣಾಮ ಬೀರುತ್ತದೆ ಎಂದು ತಿಳಿಯಲು ಮತ್ತಷ್ಟು ಅಧ್ಯಯನದ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇದು ರೂಪಾಂತರಗೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಂಶೋಧಕರು ಹೇಳಿದ್ದರೂ ಕೂಡ ಅದರ ಅಪಾಯ ಸಾಮರ್ಥ್ಯದ ಬಗ್ಗೆ ಮತ್ತಷ್ಟು ಅಧ್ಯಯನ ಅಗತ್ಯವಿದೆ ಎಂದು ಹೇಳಲಾಗಿದೆ.

ಕೊರೊನಾ ವೈರಸ್ ಹೊಸ ಹೊಸ ರೂಪಾಂತರಿಗಳು ಭಾರತ ಸೇರಿದಂತೆ ಇಡೀ ಜಗತ್ತಿನಲ್ಲೇ ತೀವ್ರ ಆತಂಕ ಸೃಷ್ಟಿಸುತ್ತಿರುವುದರ ನಡುವೆಯೇ ದಕ್ಷಿಣ ಆಫ್ರಿಕಾದಲ್ಲಿ ಬಾವಲಿಗಳ ನಡುವೆ ಹರಡುವ ನಿಯೋಕೋವ್ ಹೊಸ ಕೊರೊನಾ ವೈರಸ್ ಪತ್ತೆಯಾಗಿದ್ದು, ಇದು ಭವಿಷ್ಯದಲ್ಲಿ ಮನುಷ್ಯರಿಗೂ ಅಪಾಯವನ್ನುಂಟುಮಾಡುತ್ತದೆ ಎಂದು ಚೀನಾದ ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ನಿಯೋಕೋವ್ ವೈರಸ್(NeoCov) ವೈರಸ್ ತುಂಬಾ ಸಾಂಕ್ರಾಮಿಕವಾಗಿದ್ದು, ಹೆಚ್ಚು ಮಾರಣಾಂತಿಕವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಮೂವರು ಸೋಂಕಿತರಲ್ಲಿ ಒಬ್ಬ ರೋಗಿ ಸಾವನ್ನಪ್ಪಬಹುದು ಎಂದು ಅಂದಾಜಿಸಿದ್ದಾರೆ.

ಮಿಡಲ್ ಈಸ್ಟ್‌ ರೆಸ್ಪಿರೇಟರಿ ಸಿಂಡ್ರೋಮ್ ಎಂಬ ಉಸಿರಾಟ ತೊಂದರೆ ಕಾಯಿಲೆಗೆ ಕಾರಣವಾಗುವ ವೈರಸ್‌ಗೆ ಇರುವಂತಹ ಗುಣಲಕ್ಷಣಗಳನ್ನೇ ನಿಯೊಕೋವ್ ವೈರಾಣು ಹೊಂದಿದೆ.

ನಿಯೊಕೋವ್ ಮನುಷ್ಯರಿಗೆ ಅಪಾಯಕಾರಿಯೇ ಎಂಬುದರ ಕುರಿತು ಮತ್ತಷ್ಟು ಅಧ್ಯಯನದ ಅಗತ್ಯವಿದೆ. ಈ ನಿಲ್ಲಿನಲ್ಲಿ ವರ್ಲ್ಡ್‌ ಆರ್ಗನೈಸೇಷನ್ ಫಾರ್ ಅನಿಮಲ್ ಹೆಲ್ತ್ , ಫುಡ್ ಆಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್ ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಜತೆ ನಿಕಟವಾಗಿ ಕೆಲಸ ನಿರ್ವಹಿಸಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ರಷ್ಯಾದ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿಯ ಪ್ರಕಾರ, ಹೊಸ ಕೊರೊನಾ ವೈರಸ್(Coronavirus) ನಿಯೋಕೋವ್ ಸಹ MERS-CoV ವೈರಸ್‌ಗೆ ಸಂಬಂಧಿಸಿದ್ದಾಗಿದೆ. ಇದು, 2012 ಮತ್ತು 2015ರಲ್ಲಿ ಪಶ್ಚಿಮ ಏಷ್ಯಾದ ದೇಶಗಳಲ್ಲಿ ಮೊದಲು ಪತ್ತೆಯಾಗಿತ್ತು.

ಈ ಹೊಸ ಕೊರೊನಾ ವೈರಸ್ ನಿಯೋಕೋವ್ ಇನ್ನೂ ಮನುಷ್ಯರಿಗೆ ಹರಡಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ಈ ವೈರಸ್ ಬಾವಲಿಗಳಲ್ಲಿ ಕಾಣಿಸಿಕೊಂಡಿದೆ. ಇಲ್ಲಿಯವರೆಗೆ ಈ ವೈರಸ್ ಪ್ರಾಣಿಗಳಲ್ಲಿ ಮಾತ್ರ ಕಂಡುಬಂದಿದೆ. ಆದರೆ ಅದರ ಮತ್ತಷ್ಟು ರೂಪಾಂತರಿಗಳು ಮನುಷ್ಯರಿಗೆ ತಗುಲಬಹುದು ಎಂದು ಸಂಶೋಧಕರು ಹೇಳಿದ್ದಾರೆ.

ನಿಯೋಕೋವ್ ಮತ್ತು ಅದರ ನಿಕಟ ಸಂಬಂಧಿಯಾದ PDF-2180-CoV ದೇಹವನ್ನು ಪ್ರವೇಶಿಸಲು ಕೆಲವು ರೀತಿಯ ಬ್ಯಾಟ್ ಆಂಜಿಯೋಟೆನ್ಸಿನ್-ಪರಿವರ್ತಿಸುವ ಕಿಣ್ವ2(ACE2) ಮತ್ತು ಮಾನವ ACE2 ಅನ್ನು ಬಳಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧ್ಯಯನ ಹೇಳಿದೆ. ಕೊವಿಡ್ ವೈರಸ್ ರೂಪಾಂತರವು ಮಾನವನ ಜೀವಕೋಶಗಳಿಗೆ ಹರಡಲು ಕಾರಣವಾಗಬಹುದು ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

APPU:500 ಸಸಿಗಳನ್ನು ನೀಡಿದ ರಾಘಣ್ಣ, ಅಶ್ವಿನಿ ಪುನೀತ್​ ರಾಜ್​ಕುಮಾರ್​;

Sat Jan 29 , 2022
ಅಭಿಮಾನಿಗಳ ಆರಾಧ್ಯ ದೇವ.. ಚಂದನವನದ ಬೆಳಕು.. ಪವರ್​ ಸ್ಟಾರ್​.. ರಾಜರತ್ಮ.. ಯುವರತ್ನ.. ನಟ ಸಾರ್ವಭೌಮ.. ಪುನೀತ್​ ರಾಜ್​ಕುಮಾರ್ ​ ಅವರನ್ನು ವರ್ಣಿಸಲು ಇರುವ ಪದ ಒಂದೇ.. ಎರಡೇ.. ಎಷ್ಟು ಹೇಳಿದರು ಸಾಲದು. ಇಂದಿಗೆ ಅಪ್ಪು ಅವರನ್ನು ಕಳದುಕೊಂಡು 3 ತಿಂಗಳು ಕಳೆದು ಹೋಗಿದೆ. ಇಂದು ಅಣ್ಣಾವ್ರ ಕುಟುಂಬ ಕಂಠೀರವ ಸ್ಟುಡಿಯೋಗೆ ಬಂದು ಸಮಾಧಿಗೆ . ಪೂಜೆ ಸಲ್ಲಿಸಿದ್ದಾರೆ. 3 ತಿಂಗಳ ಹಿನ್ನೆಲೆ ಅಪ್ಪು ಸಮಾಧಿಗೆ ಹೂಗಳಿಂದ ಅಲಂಕಾರ ಮಾಡಲಾಗಿತ್ತು.ಅಭಿಮಾನಿಗಳ ದಂಡು […]

Advertisement

Wordpress Social Share Plugin powered by Ultimatelysocial