ಶಂಕರ್ ಸಿನಿಮಾದಲ್ಲಿ ಮಿಂಚಲಿರುವ ರಾಕಿಂಗ್ ಸ್ಟಾರ್..!

ಶಂಕರ್ ಸಿನಿಮಾದಲ್ಲಿ ಯಶ್ ನಟನೆ..

ಕೋವಿಡ್ 19 ಕಾರಣದಿಂದಾಗಿ ಸದ್ಯ ಯಾವುದೇ ಸ್ಟಾರ್ ನಟರ ಸಿನಿಮಾಗಳೂ ರಿಲೀಸ್ ಆಗಿಲ್ಲ.. ಆದ್ರೆ ಇತ್ತ ಸಿನಿಪ್ರಿಯರೆಲ್ಲರೂ ಸ್ಟಾರ್ ಕಲಾವಿದರ ಸಿನಿಮಾಗಳಿಗಾಗಿ ಕಾತರದಿಂದ ಎದುರು ನೋಡ್ತಿದ್ದಾರೆ.. ಅದ್ರಲ್ಲೂ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಂತೂ ಕೆಜಿಎಫ್ ಪಾರ್ಟ್ 2 ಸಿನಿಮಾ ನೋಡಲು ತುದೀಗಾಲಲ್ಲಿ ನಿಂತು ವೇಯ್ಟ್ ಮಾಡ್ತಿದ್ದಾರೆ.. ಹೀಗಿರೋವಾಗ ರಾಕಿಂಗ್ ಸ್ಟಾರ್ ಕಡೆಯಿಂದ ಅವರ ಅಭಿಮಾನಿಗಳಿಗೆ ಸರ್ಪ್ರೈಸ್ ಸುದ್ದಿಯೊಂದು ಸಿಕ್ಕಿದೆ.. ಅಷ್ಟಕ್ಕೂ ಆ ಸರ್ಪ್ರೈಸ್ ಸುದ್ದಿ ಏನು ಅಂತಿದ್ದೀರಾ..?

ರಾಖಿ ಭಾಯ್ ಫ್ಯಾನ್ಸ್ ಗೆ ಸಿಕ್ತು ಸರ್ಪ್ರೈಸ್ ನ್ಯೂಸ್..! ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಿತು.. ಕೇವಲ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಈ ಸಿನಿಮಾ ತೆರೆಕಂಡು ಪ್ಯಾನ್ ಇಂಡಿಯಾ ಚಿತ್ರವಾಗಿ ಭಾರತೀಯ ಚಿತ್ರರಂಗದಲ್ಲೀ ಭಾರೀ ಸದ್ದು ಮಾಡಿತ್ತು.. ಹಾಗಾಗಿಯೇ ಇದೀಗ ಕೆಜಿಎಫ್ ಸಿನಿಮಾ ಬಗ್ಗೆಯೂ ಭಾರೀ ಕುತೂಹಲ ಹಾಗೂ ನಿರೀಕ್ಷೆಗಳಿವೆ.. ಲಾಕ್ ಡೌನ್ ಕಾರಣದಿಂದಾ ಕೆಜಿಎಫ್ ಪಾರ್ಟ್ 2 ಚಿತ್ರದ ಶೂಟಿಂಗ್ ಸ್ಥಗಿತಗೊಂಡಿತ್ತು.. ಲಾಕ್ ಡೌನ್ ಬಳಿಕ ಇದೀಗ ಮತ್ತೆ ಚಿತ್ರೀಕರಣ ಶುರುವಾಗಿದೆ.. ರಾಖಿಭಾಯ್ ಕೂಡ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.. ಕೆಜಿಎಫ್ ಪಾರ್ಟ್ 2 ಚಿತ್ರ ಇನ್ನೂ ಕಂಪ್ಲೀಟ್ ಆಗೋ ಮೊದಲೇ ಯಶ್ ನಟನೆಯ ಮುಂದಿನ ಸಿನಿಮಾ ಬಗ್ಗೆ ಹೊಸ ಸುದ್ದಿಯೊಂದು ಕೇಳಿ ಬರ್ತಿದೆ.. ಕಾಲಿವುಡ್ ನ ಸ್ಟಾರ್ ಡೈರೆಕ್ಟರ್ ಎಸ್. ಶಂಕರ್ ಡೈರೆಕ್ಟೋರಿಯಲ್ ಸಿನಿಮಾದಲ್ಲಿ ಯಶ್ ನಟಿಸಲಿದ್ದಾರಂತೆ.

ಶಂಕರ್ ಸಿನಿಮಾದಲ್ಲಿ ಮಿಂಚಲಿರುವ ರಾಕಿಂಗ್ ಸ್ಟಾರ್..!

ಕೆಜಿಎಫ್ ಸಿನಿಮಾ ಸೂಪರ್ ಹಿಟ್ ಆಗಿದ್ದೇ ಆಗಿದ್ದು, ಯಶ್ ಅಭಿಮಾನಿಗಳ ಬಳಗ ದೊಡ್ಡದಾಯ್ತು.. ಈಗಂತೂ ಯಶ್ ಗೆ ದೇಶಾದ್ಯಂತ ಫ್ಯಾನ್ಸ್ ಇದ್ದಾರೆ.. ಕೆಜಿಎಫ್ ಪಾರ್ಟ್ 2 ಚಿತ್ರದ ನಿರೀಕ್ಷೆಯಲ್ಲಿರುವ ಯಶ್ ಅಭಿಮಾನಿಗಳಲ್ಲಿ ಅವರು, ಆ ಸಿನಿಮಾ ನಂತ್ರ ಯಾವ ಚಿತ್ರದಲ್ಲಿ ನಟಿಸಲಿದ್ದಾರೆ ಅನ್ನೋ ಕುತೂಹಲದ ಪ್ರಶ್ನೆ ಕಾಡ್ತಿತ್ತು.. ಅದಕ್ಕೀಗ ಉತ್ತರ ಸಿಕ್ಕಿದೆ.. ಎಸ್.ಶಂಕರ್ ನಿರ್ದೇಶಿಸಲಿರುವ ಮುಂದಿನ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ಬಣ್ಣಹಚ್ಚಲಿದ್ದಾರೆ ಅನ್ನಲಾಗ್ತಿದೆ.. ಕೆಜಿಎಫ್ ಸಿನಿಮಾ ಹಿಟ್ ಆದ ನಂತ್ರ ಕನ್ನಡ ಮಾತ್ರವಲ್ಲದೆ ಪರಭಾಷೆಯ ಎಲ್ಲಾ ನಿರ್ದೇಶಕರು ಹಾಗೂ ನಿರ್ಮಾಪಕರೂ ಯಶ್ ಅವರೊಂದಿಗೆ ಸಿನಿಮಾ ಮಾಡಲು ವೇಯ್ಟ್ ಮಾಡ್ತಿದ್ರು.. ಇದೀಗ ಶಂಕರ್ ಅವರು ನಿರ್ದೇಶಿಸಲಿರುವ ಸಿನಿಮಾದಲ್ಲಿ ಯಶ್ ನಟಿಸ್ತಾರೆ ಅನ್ನೋ ಬಿಗ್ ನ್ಯೂಸ್ ಹೊರಬಿದ್ದಿದೆ..

ಬಹುಭಾಷೆಗಳಲ್ಲಿ ಮೂಡಿಬರಲಿದೆ ಈ ಚಿತ್ರ..!

ಇಂಡಿಯನ್, 2.0, ಎಂದಿರನ್, ಐ ಮುಂತಾದ ಬಿಗ್ ಬಜೆಟ್ ಸಿನಿಮಾಗಳನ್ನ ನಿರ್ದೇಶಿಸಿ, ಸಿನಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ ನಿರ್ದೇಶಕ ಎಸ್.ಶಂಕರ್ ಅವರು.. ಕಾಲಿವುಡ್ ನಲ್ಲಿ ಸ್ಟಾರ್ ನಟರಿಗೆ ಅಕ್ಷನ್ ಕಟ್ ಹೇಳಿ, ಸಕ್ಸಸ್ ಫುಲ್ ಡೈರೆಕ್ಟರ್ ಆಗಿ ಮಿಂಚಿರುವ ಶಂಕರ್ ಅವರು ಸದ್ಯ ಕಮಲ್ ಹಾಸನ್ ಅವರೊಂದಿಗೆ ಇಂಡಿಯನ್ 2 ಸಿನಿಮಾ ಮಾಡ್ತಿದ್ದಾರೆ.. ಆದ್ರೆ ಲಾಕ್ ಡೌನ್ ಕಾರಣದಿಂದಾಗಿ ಈ ಚಿತ್ರದ ಶೂಟಿಂಗ್ ತಡವಾಗ್ತಿದೆ.. ಹಾಗಾಗಿ ಅವರು ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದಾರಂತೆ.. ಮೂಲಗಳ ಪ್ರಕಾರ ತಮ್ಮ ಮುಂದಿನ ಚಿತ್ರಕ್ಕೆ ಶಂಕರ್ ಅವರು ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಮಾಡಿದ್ದಾರೆ ಅನ್ನಲಾಗ್ತಿದೆ.. ಅಂದಹಾಗೆ ಇದು ಮಲ್ಟಿಸ್ಟಾರರ್ ಸಿನಿಮಾ ಆಗಿದ್ದು, ದಕ್ಷಿಣ ಭಾರತದ ಎಲ್ಲಾ ಭಾಷೆಗಳ ಸೂಪರ್ ಸ್ಟಾರ್ ನಟರು ಬಣ್ಣ ಹಚ್ಚಲಿದ್ದಾರೆ.. ಸ್ಯಾಂಡಲ್ ವುಡ್ ನಿಂದ ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ.. ಜೊತೆಗೆ ಕಾಲಿವುಡ್ ಸ್ಟಾರ್ ನಟ ವಿಜಯ್ ಸೇತುಪತಿ ಕೂಡ ಈ ಸಿನಿಮಾದಲ್ಲಿ ಲೀಡ್ ರೋಲ್ ಗೆ ಬಣ್ಣಹಚ್ಚಲಿದ್ದಾರಂತೆ..

ಅಂದಹಾಗೆ ಸಿನಿಮಾದಿಂದ ಸಿನಿಮಾಗೆ ಶಂಕರ್ ಅವರ ಸಿನಿಮಾಗಳಲ್ಲಿ ಮೇಕಿಂಗ್ ಗುಣಮಟ್ಟ್ ಹೆಚ್ಚುತ್ತಲೇ ಇರುತ್ತೆ.. ಈಗಾಗ್ಲೇ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 2.0 ಚಿತ್ರದಲ್ಲೂ ವಿಎಫ್ ಎಕ್ಸ್ ಎಫೆಕ್ಟ್ ಎಲ್ಲರ ಕಣ್ಮನ ಸೆಳೆದಿತ್ತು.. ಹಾಗಾಗಿ ಸಹಜವಾಗೇ ಇದೀಗ ಶಂಕರ್ ಅವರ ನಿರ್ದೇಶನದ ಮುಂದಿನ ಚಿತ್ರದ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.. ಇನ್ನೂ ಈ ಸಿನಿಮಾ ತಮಿಳು ಮಾತ್ರವಲ್ಲದೆ ಕನ್ನಡ, ತೆಲುಗು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲೂ ಈ ಚಿತ್ರ ತಯಾರಾಗಲಿದ್ಯಂತೆ.. ಶಂಕರ್ ಅವರ ಸಿನಿಮಾ ಬಗ್ಗೆ ಇಷ್ಟೆಲ್ಲಾ ಸುದ್ದಿಗಳು ಕೇಳಿಬರ್ತಿರೋದಂತೂ ನಿಜ, ಆದ್ರೆ ಈ ಚಿತ್ರದ ಬಗ್ಗೆ ಸ್ವತಃ ನಿರ್ದೇಶಕ ಶಂಕರ್ ಅವರು ಯಾವುದೇ ಅಧಿಕೃತ ಮಾಹಿತಿಯನ್ನೂ ನೀಡಿಲ್ಲ.. ಎನಿವೇ ಶಂಕರ್ ಅವರ ಸಿನಿಮಾದಲ್ಲಿ ಯಶ್ ನಟಿಸೋದು ನಿಜವೇ ಆದ್ರೆ, ಆ ಚಿತ್ರದ ಮೂಲಕ ಮತ್ತೆ ರಾಕಿಭಾಯ್ ಇಡೀ ದೇಶವನ್ನೇ ತಮ್ಮತ್ತ ತಿರುಗಿ ನೋಡುವಂತೆ ಮಾಡೋದು ಗ್ಯಾರೆಂಟಿ ಅನ್ಸುತ್ತೆ..

ಇದನ್ನ ಓದಿ:ಪಟಾಕಿ ನಿಷೇಧ ಮಾಡುವಂತೆ ಒತ್ತಾಯ

Please follow and like us:

Leave a Reply

Your email address will not be published. Required fields are marked *

Next Post

ನವಗ್ರಹ ಚಾಪ್ಟರ್-2 ಬರುತ್ತಾ- ಮತ್ತೆ ಒಂದಾಗ್ತಾರಾ ವಿಲನ್ ಮಕ್ಕಳು..?

Mon Nov 9 , 2020
ಸ್ಯಾಂಡಲ್ ವುಡ್ ನ ಹೆಸರಾಂತ ವಿಲನ್ ಗಳ ಮಕ್ಕಳು ಒಟ್ಟಾಗಿ ನಟಿಸಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದ ಚಿತ್ರ ಅಂದ್ರೆ ಅದು ನವಗ್ರಹ. ದರ್ಶನ್ ಸಹೋದರ ದಿನಕರ್ ತೂಗುದೀಪ್ ಆ್ಯಕ್ಷನ್ ಕಟ್ ಹೇಳಿದ್ದ ಈ ಚಿತ್ರ ರಿಲೀಸ್ ಆಗಿ 12 ವರ್ಷಗಳು ಕಳೆದಿವೆ. 2008ರ ನವೆಂಬರ್ 7 ರಂದು ರಿಲೀಸ್ ಆಗಿದ್ದ ಚಿತ್ರ ಆ ಟೈಮ್ ಅಲ್ಲಿ ಕ್ರೇಜ್ ಕ್ರಿಯೇಟ್ ಮಾಡಿತ್ತು. ಸ್ಯಾಂಡಲ್ನಲ್ಲಿ ಸಖತ್ ಸದ್ದು ಮಾಡಿದ್ದ ನವಗ್ರಹ ಸಿನಿಮಾದ […]

Advertisement

Wordpress Social Share Plugin powered by Ultimatelysocial