ಸಮಂತಾ ನಟನೆಯ ‘ಯಶೋದಾ’ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ ರಕ್ಷಿತ್ ಶೆಟ್ಟಿ

 

ನಟಿ ಸಮಂತಾ ಅಭಿನಯದ ‘ಯಶೋದಾ’ ಸಿನಿಮಾ ಮೇಲೆ ದೊಡ್ಡ ನಿರೀಕ್ಷೆ ಸೃಷ್ಟಿಯಾಗಿದೆ. ನವೆಂಬರ್ 11ರಂದು ವಿಶ್ವಾದ್ಯಂತ ತೆರೆಗೆ ಬರಲಿರುವ ಈ ಸಿನಿಮಾ ತೆಲುಗು ಜೊತೆಗೆ ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲೂ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಚಿತ್ರವಾಗಿ ರಿಲೀಸ್ ಆಗಲಿದೆ. ಇದೊಂದು ಥ್ರಿಲ್ಲರ್ ಮಾದರಿಯ ಸಿನಿಮಾವಾಗಿದ್ದು, ಈಗಾಗಲೇ ಟೀಸರ್ ಹಿಟ್ ಆಗಿದೆ. ಇದೀಗ ಈ ಸಿನಿಮಾಗೆ ನಟ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಸಾಥ್ ನೀಡಿದ್ದಾರೆ. ಹೌದು, ಅಕ್ಟೋಬರ್ 27ರಂದು ‘ಯಶೋದಾ’ ಸಿನಿಮಾದ ಮೊದಲ ಟ್ರೇಲರ್ ರಿಲೀಸ್ ಆಗಲಿದೆ.ಯಶೋದಾ’ ಸಿನಿಮಾದ ಐದು ವರ್ಷನ್‌ ಟ್ರೇಲರ್ ರಿಲೀಸ್ ಆಗಲಿದ್ದು, ಅದರಲ್ಲಿ ಕನ್ನಡ ವರ್ಷನ್ ಅನ್ನು ನಟ ರಕ್ಷಿತ್ ಶೆಟ್ಟಿ ರಿಲೀಸ್ ಮಾಡಲಿದ್ದಾರೆ. ಅಕ್ಟೋಬರ್ 27ರಂದು ಸಂಜೆ 5:36ಕ್ಕೆ ಬಿಡುಗಡೆ ರಕ್ಷಿತ್ ಕನ್ನಡ ವರ್ಷನ್ ಟ್ರೇಲರ್ ರಿಲೀಸ್ ಮಾಡಿದರೆ, ಬೇರೆ ಭಾಷೆಗಳ ಟ್ರೇಲರ್‌ಗಳನ್ನು ಆಯಾ ಭಾಷೆಗಳ ಜನಪ್ರಿಯ ನಟರು ಬಿಡುಗಡೆ ಮಾಡಲಿದ್ದಾರೆ. ‘ಯಶೋದಾ’ ಒಂದು ಹೊಸ ಶೈಲಿಯ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಈ ಚಿತ್ರವನ್ನು ಶಿವಲೆಂಕ ಕೃಷ್ಣ ಪ್ರಸಾದ್ ಅವರು ತಮ್ಮ ಶ್ರೀದೇವಿ ಮೂವಿ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ನಿರ್ಮಿಸಿದ್ದಾರೆ.ಹರಿ ಮತ್ತು ಹರೀಶ್ ಈ ಚಿತ್ರವನ್ನು ಜಂಟಿಯಾಗಿ ನಿರ್ದೇಶಿಸಿದ್ದಾರೆ. ಸಮಂತಾ ಜತೆಗೆ ಈ ಚಿತ್ರದಲ್ಲಿ ವರಲಕ್ಷ್ಮೀ ಶರತ್‌ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮ, ಸಂಪತ್ ರಾಜ್, ಶತ್ರು, ಮಧಿರಿಮಾ, ಕಲ್ಪಿಕಾ ಗಣೇಶ್, ದಿವ್ಯ ಶ್ರೀಪಾದ, ಪ್ರಿಯಾಂಕಾ ಶರ್ಮ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸರಿಸುಮಾರು 100 ದಿನಗಳ ಕಾಲ ಈ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ರಕ್ತ ಚಂದನ ಕೇಸ್ ಆರೋಪಿಗಳು!

Mon Dec 26 , 2022
ರಕ್ತಚಂದನ ಸಾಗಾಟ ಮಾಡುತ್ತಿದ್ದ ಆರೋಪಿಗಳ ಬಂಧನ.. ಏಜಾಜ್ ಷರೀಫ್ (44), ಶೌಕತ್( 30) ಇಮ್ತಿಯಾಜ್ (36) ಬಂಧಿತ ಆರೋಪಿಗಳು. ಬಂಧಿತ ಮೂವರು ಆರೋಪಿಗಳು ಕಟ್ಟಿಗೆಹಳ್ಳಿ ಮೂಲದವರು.. ಕಳೆದ 22 ರಂದು ಆರೋಪಿಗಳು ರಕ್ತಚಂದನ ಸಾಗಿಸುತ್ತಿರುವ ಕುರಿತು ಮಾಹಿತಿ.. ಹೊರರಾಜ್ಯದಿಂದ ಕಟ್ಟಿಗೆಹಳ್ಳಿ ರಕ್ತಚಂದನ ಸಾಗಿಸುತ್ತಿದ್ದ ಆರೋಪಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳ ಬಂಧನ.. ಬಂಧಿತರಿಂದ 360 ಕೆಜಿ ರಕ್ತಚಂದನ ತುಂಡುಗಳು ವಶಕ್ಕೆ.. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ […]

Advertisement

Wordpress Social Share Plugin powered by Ultimatelysocial