ತಾ.ಪಂ,ಜಿ.ಪಂ ಮಹಿಳೆಯರಿಗೆ ಯಶವಂತರಾಯಗೌಡ ಪಾಟೀಲ.

ಸಾಮಾನ್ಯ ಮಹಿಳೆ ರಾಷ್ಟ್ರ ಮಟ್ಟದ ನಾಯಕಿಯಾಗಲು ಅವಕಾಶ ನೀಡಿದ ಏಕೈಕ ಪಕ್ಷ ಕಾಂಗ್ರೆಸ್.40 ವರ್ಷ ರಾಜಕಾರಣದಲ್ಲಿ ನಾನು ಎಂದಿಗೂ ಮಹಿಳೆಯರ ಸಂಘಟನೆಗೆ ಹೆಚ್ಚು ಒತ್ತು ನೀಡಿರಲ್ಲಿಲ್ಲ ಶ್ರೀಮತಿ ನಿರ್ಮಲಾ ತಳಕೇರಿ ಹಾಗೂ ವಿಧ್ಯಾರಾಣಿ ತುಂಗಳ ಇವರ ಪರಿಶ್ರಮಕ್ಕೆ ಸಂಘಟನಾ ಶಕ್ತಿಯ ಕಾರ್ಯ ಶ್ಲ್ಯಾಗನೀಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಮಹಿಳಾ ಪದಾಧಿಕಾರಿಗಳ ಪದಗ್ರಹಣ ಹಾಗೂ ನಾ ನಾಯಕಿ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಹಿಳೆಯರ ಪ್ರತಿಯೋಂದು ಕ್ಷೇತ್ರದಲ್ಲಿ ಮುಂದೆ ಬರಲು ಸಂವಿಧಾನಾತ್ಮಕ ಅವಕಾಶವಿದ್ದು ಈಕೆಲಸ ಪ್ರಮಾಣಿಕ ಮಾಡಿದ್ದೇ ಕಾಂಗ್ರೆಸ್ ಪಕ್ಷದಿಂದ ಮಾತ್ರ. ಮಾತನಾಡುವವರ ಸಾಕಷ್ಟು ಜನರಿದ್ದಾರೆ ಕೃತಿಯಲ್ಲಿ ಯಾರು ಇದ್ದಾರೆ ಅಂತಹವರಿಗೆ ಗೌರವಿಸುವ ಕೆಲಸ ನಡೇಯಬೇಕು. ಬರುವ ದಿನಗಳಲ್ಲಿ 33 ಪ್ರತಿಶತ ಈ ತಾಲೂಕಿನಲ್ಲಿ ಮಹಿಳೆಯರಿಗೆ ತಾ.ಪಂ ,ಜಿ.ಪಂ ಸ್ಥಳೀಯ ರಾಜಕೀಯದಲ್ಲಿ ಅವಕಾಶ ನೀಡುತ್ತೇನೆ. ಈ ಹಿಂದೆ ಸ್ಥಳಿಯ ಪರಸಭೆಯಲ್ಲಿ ತಾಯಿ ಬುದ್ದಮ್ಮ ಕಾಳೆಯವರಿಗೆ ಹಾಗೂ ಇತರೇ ಸ್ಥಳೀಯ ಆಡಳಿತದಲ್ಲಿ ಪ್ರಾತಿನಿಧ್ಯ ನೀಡಿರುವೆ ಪುರುಷ್ಯರಿಗೆ ಹೆಚ್ಚಿನ ಅವಕಾಶ ನೀಡಿರುವೆ ಮುಂಬರುವ ದಿನಗಳಲ್ಲಿ ನಿಮ್ಮ ಪ್ರಾಮಾಣಿಕತೆಗೆ ಬದ್ದತೆಯಿಂದ ನ್ಯಾಯ ನೂಡುವ ಭರವಸೆ ನೀಡಿದರು.ಜಿಲ್ಲಾ ಮಹಿಳಾ ಅಧ್ಯಕ್ಷೆ ವಿಧ್ಯಾರಾಣಿ ತುಂಗಳ, ತಾಲೂಕಾ ಅಧ್ಯಕ್ಷೆ ನಿರ್ಮಲಾ ತಳಕೇರಿ ಜಂಟಿ ಮಾತನಾಡಿ ಮಹಿಳೆಯರಿಗೆ ಮಾತೃ ಸ್ಥಾನದಿಂದ ಗೌರವಿಸುವ ಪಕ್ಷ ಕಾಂಗ್ರೆಸ್ ದಿ. ಇಂಧಿರಾಗಾಂಧಿಜೀಯರು ಬಡವರ ದೀನದುರ್ಬಲರ ತಾಯಿಯಾಗಿದ್ದರು. ಗರೀಬಿ ಹಟಾವೂ. 20 ಅಂಶಗಳ ಕಾರ್ಯಕ್ರಮ ಉಳ್ಳುವವನೆ ಭೂಮಿಯ ಒಡೇಯ ಹೀಗೆ ಅನೇಕ ಯೋಜನೆಗಳು ಜಾರಿ ಮಾಡಿ ಉಕ್ಕಿನ ಮಹಿಳೆ ಎಂಬ ಬಿರುದಿಗೆ ಪಾತ್ರರಾಗಿದ್ದರು. ನಮ್ಮ ಜಿಲ್ಲೆಯಲ್ಲಿ 3ಸಾವಿರ ನಾಯಕಿ ಗುಣಧರ್ಮ ಹೊಂದಿದ ಮಹಿಳೆಯರನ್ನ ಗುರುತಿಸಿದ್ದು ಪಕ್ಷದ ಸಂಘಟನೆಗಾಗಿ ಸದಾ ದುಡಿಯಲ್ಲಿದ್ದಾರೆ ಎಂದರು.ಬ್ಲಾಕ್ ಕಾಂಗ್ರೆಸ ಅಧ್ಯಕ್ಷ ಜಾವೀದ ಮೋಮಿನ, ಭೀಮಣ್ಣಾ ಕೌಲಗಿ, ಪ್ರಶಾಂತ ಕಾಳೆ, ನಾಗೇಶ ತಳಕೇರಿ ವೇದಿಕೆಯಲ್ಲಿದ್ದರು.ಪ್ರಭಾವತಿ ಬಿರಾದಾರ, ಸುಗಂದಾ ಬಿರಾದಾರ, ರಾಜೇಶ್ರೀ ಹಿರೇಮಠ, ಶಾರವ್ವ ನಾಯಕೋಡಿ, ಜಗದೇವಿ ಕಾಂಬಳೆ, ಚಂದ್ರಭಾಗ ಸಂಗೋಗಿ, ಪ್ರೇಮಾ ಸಿಂಗೆ, ನಿಜಲಿಂಗವ್ವ ಕಡೇಮನಿ, ಚಂದ್ರಭಾಗಾ ಹೋಸಮನಿ, ಶೋಭಾ ಚವ್ಹಾಣ, ಮೋಪಿನ ಪಟೇಲ್ ,ಸುಜಾತಾ ಮಾದರ, ಪ್ರಮೀಲಾ ಶಿವಶರಣ, ರಾಧಾ ಕಾಂಬಳೆ, ಶಾಂತಲಾ ಬಿಜಾಪೂರ, ಜನಾಬಾಯಿ ಹರಿಜನ, ಅನುಸುಯಾ ಸೋಂಪೂರ, ಖೈನೂನ ತಾಸೇವಾಲೆ, ನಾಗರತ್ನ ಕಾಂಬಳೆ, ರೇಣುಕಾ ಮಂಚದ, ರೂಪಾ ದೋತ್ರೆ, ಸರೋಬಾಯಿ ಹುಲಿಮನಿ, ಭಾರತಿ ಕಟ್ಟಿಮನಿ, ಬಸಲಿಂಗವ್ವ ಮಾಶ್ಯಾಳ, ಲತಾ ಗಜಾಕೋಶ, ಶಿವಮ್ಮ ಹರಿಜನ, ನೀಲ್ಲಮ್ಮಾ ಹೊಸಮನಿ, ಇಂಧುಮತಿ ಹಳ್ಳದಮನಿ , ಜೈಶ್ರೀ ದೊಡಮನಿ ಸೇರಿದಂತೆ ಅನೇಕ ಮಹಿಳಾ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

25ನೇ ವಯಸ್ಸಿಗೆ ಗಾಯತ್ರಿ ಸಿವಿಲ್‌ ನ್ಯಾಯಾಧೀಶೆ.

Tue Jan 17 , 2023
ಬಂಗಾರಪೇಟೆ: ಸಿವಿಲ್‌ ನ್ಯಾಯಾಧೀಶೆಯಾಗಿ ತಾಲೂಕಿನ ಯಳಬುರ್ಗಿ ಗ್ರಾಮದ ನಾರಾಯಣಸ್ವಾಮಿ ಹಾಗೂ ವೆಂಕಟರತ್ನಮ್ಮ ಅವರ ಪುತ್ರಿ ಎನ್‌.ಗಾಯತ್ರಿ ಅವರು ಆಯ್ಕೆಯಾಗಿ ಇಡೀ ತಾಲೂಕಿಗೆ ಕೀರ್ತಿ ತಂದಿದ್ದಾರೆ. 2021ರಲ್ಲಿ ಕಾನೂನು ಪದವಿ ಪಡೆದು ಕೊಂಡಿರುವ ಎನ್‌.ಗಾಯತ್ರಿ ಅವರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಮತ್ತು ಸರಿಯಾದ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶೆ ಯಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ.ಹೈಕೋರ್ಟ್‌ ಸಿವಿಲ್‌ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್‌ […]

Advertisement

Wordpress Social Share Plugin powered by Ultimatelysocial