B.Sಯಡಿಯೂರಪ್ಪ:ಮೊಮ್ಮಗಳ ಆತ್ಮಹತ್ಯೆ ,ಸಾಹೇಬ್ರು ಕಣ್ಣೀರು;

ಬೆಂಗಳೂರು :“ಪಾಪ ಸಾಹೇಬ್ರು ತುಂಬಾನೆ ಅತ್ತು ಬಿಟ್ಟರು. ಅವರು ಕಣ್ಣೀರು ಹಾಕಿದ್ದೇ ನೋಡಿರಲಿಲ್ಲ. ಈ ರೀತಿ ಬಿಕ್ಕಿ ಬಿಕ್ಕಿ ಅತ್ತಿದ್ದು ಇದೇ ಮೊದಲು. ಎಲ್ಲರಿಗೂ ಅಯ್ಯೋ ಅನ್ನಿಸಿಬಿಡ್ತು”……ಮೊಮ್ಮಗಳು ಡಾ.ಸೌಂದರ್ಯ ಆತ್ಮಹತ್ಯೆ ಬಳಿಕ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಣ್ಣೀರಿಟ್ಟಿದ್ದನ್ನು ಕಂಡು ಕಾವೇರಿಯಲ್ಲಿ ಇರುವ ಉದ್ಯೋಗಿಗಳು ಈ‌ ರೀತಿ ನೋವು ತೋಡಿಕೊಂಡಿದ್ದಾರೆ.

ಎಂಥ ವಿಷಮ‌ ಸ್ಥಿತಿಯಲ್ಲೂ ಧೃತಿಗೆಡದ ಯಡಿಯೂರಪ್ಪ ಮೊಮ್ಮಗಳ ಸಾವಿನಿಂದ ಅಕ್ಷರಶಃ ಕುಸಿದು ಹೋಗಿದ್ದರಂತೆ . ಎರಡು ದಿನ‌ ಹಿಂದಿನವರೆಗೂ ತಮ್ಮ ಜತೆಯೇ ಇದ್ದ‌ ಮೊಮ್ಮಗಳು ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಅವರನ್ನು ತೀವ್ರವಾಗಿ ಕಾಡುತ್ತಿದ್ದು, ಇಷ್ಟೊಂದು ದುಃಖಪಟ್ಟಿದ್ದನ್ನು ಇದುವರೆಗೆ ಯಾರೂ ನೋಡೇ ಇರಲಿಲ್ಲ ಎನ್ನುತ್ತಾರೆ ಸಿಬ್ಬಂದಿ.

ಖಿನ್ನತೆ ಕಾರಣವೇ ?

ಯಡಿಯೂರಪ್ಪ ಆಪ್ತ ಮೂಲದ ಪ್ರಕಾರ ಸೌಂದರ್ಯ ಕುಟುಂಬದಲ್ಲಿ ಯಾವುದೇ ವಿವಾದ ಇರಲಿಲ್ಲ. ಅವರ ಪತಿ ಡಾ.ನೀರಜ್ ತುಂಬಾ ಒಳ್ಳೆಯ ವ್ಯಕ್ತಿ. ಹೆರಿಗೆ ಬಳಿಕ ಕಾಣಿಸಿಕೊಂಡ ಖಿನ್ನತೆಯೇ ಇದಕ್ಕೆ ಕಾರಣ ಎಂದು ಪ್ರತಿಪಾದಿಸುತ್ತಾರೆ.

ಆತ್ಮಹತ್ಯೆಗೆ ಮುನ್ನ ಆ ಮಗುವನ್ನು‌ ಒಮ್ಮೆ ನೆನೆಸಿಕೊಂಡರೆ ಈ ರೀತಿ ಮಾಡುತ್ತಿರಲಿಲ್ಲವೇನೋ ? ಒಳ್ಳೆ ಗೊಂಬೆ ತರ ಇದ್ದ ಮಗುವನ್ನು ನೆನೆಸಿಕೊಂಡರೆ ಬೇಸರವಾಗುತ್ತದೆ. ಇತ್ತೀಚೆಗಂತೂ ಸಾಹೇಬ್ರು ಆ ಮಗುವಿನ‌ ಜತೆಯೇ ಇರುತ್ತಿದ್ದರು ಎಂದು ಸಿಬ್ಬಂದಿ ಬೇಸರ ತೋಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

RECIPE: ರವೆ ಇಡ್ಲಿ;

Sat Jan 29 , 2022
ರೆಸ್ಟೋರೆಂಟ್‍ನಲ್ಲಿ ಮಾಡುವ ಹಾಗೆ ನಾನೂ ಕೂಡ ಇಡ್ಲಿ ಮಾಡಬೇಕು. ಯಾಕೋ ನಾನ್ ಮಾಡೋ ಇಡ್ಲಿ ಕೆಲವೊಮ್ಮೆ ಗಟ್ಟಿ ಆಗಿ ಬಿಡುತ್ತವೆ. ಮಲ್ಲಿಗೆ ಥರ ಬರೋದೇ ಇಲ್ಲ ಎನ್ನುವವರೇ ಹೆಚ್ಚು. ನೀವು ಮಾಡೋ ಇಡ್ಲಿ ಮೃದುವಾಗಿ, ಉದುರುದುರಾಗಿ ಬರಬೇಕಾ? ಹಾಗಾದರೆ ನಾವು ಹೇಳುವಂತೆ ಒಮ್ಮೆ ಮಾಡಿ ನೋಡಿ. ಬೇಕಾಗಿರುವ ಸಾಮಗ್ರಿಗಳು * ರವೆ – 1 ಕಪ್ * ಮೊಸರು – 1 ಕಪ್ * ರುಚಿಗೆ ತಕ್ಕಷ್ಟು ಉಪ್ಪು * […]

Advertisement

Wordpress Social Share Plugin powered by Ultimatelysocial