ನನ್ನ ಜೀವನ ಕತೆಯನ್ನು ಸರಿಯಾಗಿ ಸಿನಿಮಾ ಮಾಡಿಲ್ಲ ಇಂದ್ರಜಿತ್: ಶಕೀಲ ಬೇಸರ

ನನ್ನ ಜೀವನ ಕತೆಯನ್ನು ಸರಿಯಾಗಿ ಸಿನಿಮಾ ಮಾಡಿಲ್ಲ ಇಂದ್ರಜಿತ್: ಶಕೀಲ ಬೇಸರ

ಅಪ್ರಾಪ್ತ ಸಿನಿಮಾಗಳ ನಟಿಯಾಗಿ ಮೆರೆದಿದ್ದ ಶಕೀಲ ನಿರ್ಮಾಪಕಿಯಾಗಿ ಪೋಷಕ ನಟಿಯಾಗಿ ಬ್ಯುಸಿಯಾಗಿದ್ದಾರೆ. ಇದೀಗ ಮೂರು ವರ್ಷಗಳ ಬಳಿಕ ಕನ್ನಡದ ಸಿನಿಮಾದಲ್ಲಿ ಶಕೀಲ ನಟಿಸುತ್ತಿದ್ದು, ನಗರದಲ್ಲಿ ಸುದ್ದಿಮಾಧ್ಯಮಗಳನ್ನುದ್ದೇಶಿಸಿ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಶಕೀಲಾ ಬಾಳಲ್ಲಿ 15 ಜನ ಪುರುಷರು ಬಂದು ಹೋದರು,ಆದ್ರೆ.

ಶಕೀಲ ಜೀವನ ಆಧರಿಸಿದ ‘ಶಕೀಲ’ ಹೆಸರಿನ ಸಿನಿಮಾವನ್ನು ಕನ್ನಡದ ಇಂದ್ರಜಿತ್ ಲಂಕೇಶ್ ಸಿನಿಮಾ ಮಾಡಿದ್ದರು, ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದ ಸಿನಿಮಾ ಫ್ಲಾಪ್ ಆಗಿತ್ತು, ಈ ಬಗ್ಗೆ ಮಾತನಾಡಿರುವ ಶಕೀಲ, ”ನನ್ನ ಜೀವನ ಕತೆಯ ಸಿನಿಮಾನನ್ನು ಸರಿಯಾಗಿ ತೋರಿಸಲಾಗಿಲ್ಲ” ಎಂದಿದ್ದಾರೆ.

”ನನ್ನ ಜೀವನ ಕತೆ ಆಧರಿಸಿ ಶಕೀಲ ಸಿನಿಮಾ ಸರಿಯಾಗಿ ಮೂಡಿಬಂದಿಲ್ಲ. ನನ್ನ ಜೀವನದಲ್ಲಿ ನಡೆದ ಕೆಲವು ಮುಖ್ಯ ಘಟನೆಗಳನ್ನು ಸಿನಿಮಾದ ತೋರಿಸಲಾಗಿಲ್ಲ. ನನಗೆ ಇಬ್ಬರು ಅಣ್ಣಂದಿರು, ಒಬ್ಬ ತಮ್ಮ ಇದ್ದ ಅದನ್ನು ಸಿನಿಮಾದಲ್ಲಿ ತೋರಿಸಿಲ್ಲ. ಅದರ ಬಗ್ಗೆ ಇಂದ್ರಜಿತ್‌ಗೆ ಕೇಳಿದಾಗ ಸಿನಿಮಾದ ಮನೊರಂಜನಾತ್ಮಕ ಕಾರಣಕ್ಕೆ ಅದನ್ನು ಸೇರಿಸಿಲ್ಲ ಎಂದರು, ಹೋಗಲಿ ಬಿಡು ಎಂದು ನಾನೂ ಸುಮ್ಮನಾದೆ. ಆದರೆ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣಲಿಲ್ಲ” ಎಂದರು ಶಕೀಲ.

ಕನ್ನಡದ ಸಿನಿಮಾದಲ್ಲಿ ನಟಿಸುತ್ತಿರುವ ಬಗ್ಗೆ ಮಾತನಾಡಿದ ಶಕೀಲ, ”ಮೂರು ವರ್ಷಗಳ ಬಳಿಕ ಕನ್ನಡ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿದೆ. ಈಗ ನಟಿಸುತ್ತಿರುವ ‘ಡವ್ ಮಾಸ್ಟರ್’ ಸಿನಿಮಾದಲ್ಲಿ ಕೇವಲ ನಾನು ಶಕೀಲ ಆಗಿ ನಟಿಸುತ್ತಿಲ್ಲ. ಇಲ್ಲಿ ನನಗೆ ಒಳ್ಳೆಯ ಪಾತ್ರವಿದೆ. ಹಾಸ್ಯಮಯ, ಪಕ್ಕದ ಮನೆ ಆಂಟಿಯ ಪಾತ್ರ ನನ್ನದು. ಈ ಸಿನಿಮಾ ಪ್ರಾಣಿಗಳ ಹಾಗೂ ಮನುಷ್ಯನ ನಡುವಿನ ಸಂಬಂಧದ ಕತೆಯನ್ನು ಹೊಂದಿದೆ” ಎಂದರು.

”ಈ ಸಿನಿಮಾದ ಕತೆ ನನಗೆ ಬಹಳ ಇಷ್ಟವಾಯಿತು. ಕತೆ ಕೇಳಿದಾಗ ನನಗೆ ಈ ಸಿನಿಮಾದಲ್ಲಿ ನಟಿಸಲೇ ಬೇಕು ಎನಿಸಿತು. ಸಿನಿಮಾದಲ್ಲಿ ನಟಿಸುತ್ತಿರುವ ನಾಯಿ ರಾಕಿ ಸಹ ನನಗೆ ಬಹಳ ಅದ್ಭುತ ಎನಿಸಿತು. ಎಷ್ಟು ಚೆನ್ನಾಗಿ ಈ ನಾಯಿ ಎಲ್ಲರ ಮಾತು ಕೇಳುತ್ತದೆ. ವಿದೇಶಗಳಲ್ಲಿ ಇಷ್ಟು ಚೆನ್ನಾಗಿ ಮಾತು ಕೇಳುವ ನಾಯಿಗಳನ್ನು ನೋಡಿದ್ದೆ. ಆದರೆ ರಾಕಿ ಎಲ್ಲರ ಮಾತು ಕೇಳುತ್ತದೆ” ಎಂದರು ಶಕೀಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಮನಾಥ್ ನಿರ್ದೇಶನದ 'ಭೈರವ' ಚಿತ್ರಕ್ಕೆ ಸುಕನ್ಯಾ ಗಿರೀಶ್ ನಾಯಕಿ

Mon Dec 27 , 2021
ಶಶಾಂಕ್ ನಿರ್ದೇಶನದ ಲವ್ 360 ಸಿನಿಮಾದಲ್ಲಿ ನಟಿಸಿದ್ದ ಸುಕನ್ಯಾ ಗಿರೀಶ್ ತಮ್ಮ ಮುಂದಿನ ಸಿನಿಮಾಗೆ ಸಹಿ ಮಾಡಿದ್ದಾರೆ. ಮೈಥಾಲಜಿ ಅಂಶಗಳನ್ನಿಟ್ಟುಕೊಂಡು ರಾಮತೇಜ ಸಿನಿಮಾ ನಿರ್ದೇಶಿಸಿದ್ದು, ಶಿವಾಜಿ ಸುರತ್ಕಲ್ ನಟ ಅಭಿನಯಿಸಿದ್ದಾರೆ. ಈ ಹಿಂದೆ ಸೈಕೋ, ಮತ್ತು ಸಾಲ್ಟ್ ಅಂಡ್ ಪೆಪ್ಪರ್‌ನಂತಹ ವೆಬ್ ಸರಣಿಗಳಲ್ಲಿ ಕೆಲಸ ಮಾಡಿದ್ದ ನಿರ್ದೇಶಕರು ಭೈರವ ಚಿತ್ರದ ಮೂಲಕ ತಮ್ಮ ಚೊಚ್ಚಲ ಚಲನಚಿತ್ರವನ್ನು ಮಾಡಲಿದ್ದಾರೆ ಹನಿ ಚೌಧರಿ ಮತ್ತು ವೈಭವ್ ಬಜಾಜ್ ಜಂಟಿಯಾಗಿ ನಿರ್ಮಿಸಲಾಗಿದ್ದು, ನಿರ್ದೇಶಕರು ನೇರ […]

Advertisement

Wordpress Social Share Plugin powered by Ultimatelysocial