ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದ್ದು ಸುಮಾರು 1.38 ಲಕ್ಷ ಜನರಿಗೆ ಸೋಂಕು ತಗುಲಿದೆ. ಆದರೆ ಲಕ್ಷದ್ವೀಪದಲ್ಲಿ ಇಲ್ಲಿಯವರೆಗೂ ಕೊರೊನಾ ಸೋಂಕು ಪತ್ತೆಯಾಗಿಲ್ಲ. 35 ಸಣ್ಣ ಸಣ್ಣ ದ್ವೀಪಗಳಿರುವ ಲಕ್ಷದ್ವೀಪ 64 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಕೇರಳ ರಾಜ್ಯದ ಕರಾವಳಿ ತೀರಕ್ಕೆ ಲಕ್ಷದ್ವೀಪ ಹೊಂದಿಕೊಂಡಿದ್ದು ವ್ಯವಹಾರಿಕವಾಗಿ ದಕ್ಷಿಣ ರಾಜ್ಯಗಳನ್ನು ಅವಲಂಭಿಸಿದೆ. ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಲಕ್ಷದ್ವೀಪದಲ್ಲಿ ಕೊರೊನಾ ಸೋಂಕು ಪತ್ತೆಯಾಗಿಲ್ಲ ಎಂದು ವರದಿಯಾಗಿದೆ.