ದೆಹಲಿ: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ತಿಳಿಸುವ ಯಂತ್ರವನ್ನು ಐಐಟಿ ಸಂಶೋಧಕರು ತಯಾರಿಸಿದ್ದಾರೆ. ದೆಹಲಿ ಐಐಟಿಯ ಪ್ರೊಫೆಸರ್ ಅನೂಪ್ ಕೃಷ್ಣನ್ ಮತ್ತು ತಂಡ ಸೇರಿಕೊಂಡು ಪ್ರಕ್ರಿತಿ(pracriti) ವೆಬ್ ಆಧಾರಿತ ಡ್ಯಾಶ್ಬೋರ್ಡ್ಅನ್ನು ಸಿದ್ಧಪಡಿಸಿದ್ದಾರೆ. ಈ ಮೂಲಕ ಆರೋಗ್ಯ ಸಚಿವಾಲಯ, ಡಬ್ಲ್ಯೂಹೆಚ್ಒ, ಸರ್ಕಾರ ನೀಡಿದ ಮಾಹಿತಿ ಮೇರೆಗೆ ರಾಜ್ಯ ಹಾಗೂ ಜಿಲ್ಲೆಗಳನುಸಾರ ಕೊರೊನಾ ಸೋಂಕಿತರ ಪ್ರಮಾಣ ದರವನ್ನು ಪತ್ತೆ ಹಚ್ಚಬಹುದಾಗಿದೆ. ಪ್ರಕ್ರಿತಿ ಎಂದರೆ ಪ್ರಿಡಿಕ್ಷನ್ ಅಂಡ್ ಅಸೆಸ್ಮೆಂಟ್ ಆಫ್ ಕೊರೊನಾ ಇನ್ಫೇಕ್ಷನ್ಸ್ ಅಂಡ್ ಟ್ರಾನ್ಸ್ಮಿಷನ್ ಇನ್ ಇಂಡಿಯಾ ಅಂದರೆ ಭಾರತದ ಕೊರೊನಾ ಸೋಂಕು ಮತ್ತು ಹರಡುವಿಕೆಯ ಮನ್ಸೂಚನೆ ಮತ್ತು ಮೌಲ್ಯಮಾಪನ ಪತ್ತೆ ಹಚ್ಚುವ ವೆಬ್ ಆಧಾರಿತ ಡ್ಯಾಶ್ಬೋರ್ಡ್. ಈ ಮೂಲಕ ಯಾವುದೇ ಸ್ಥಳದ ಸೋಂಕಿನ ಪ್ರಮಾಣ ದರವನ್ನು ಗ್ರಹಿಸಬಹುದು, ಇದರಿಂದ ಸೋಂಕಿತರ ಸಂಖ್ಯೆ ಹೆಚ್ಚಿರುವ ಜಿಲ್ಲೆ ಅಥವಾ ರಾಜ್ಯ ಗುರುತಿಸಿ ಎಚ್ಚರಿಕೆವಹಿಸಬಹುದು.
ಕೊರೊನಾ ವೈರಸ್ ಹರಡುವ ಪ್ರಮಾಣ ತಿಳಿಯುವ ಯಂತ್ರ ಸಿದ್ಧ
Please follow and like us: