ಕೋಲ್ಕತ್ತಾ ನೈಟ್ ರೈಡರ್ಸ್ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ರಾಜಸ್ಥಾನ್ ವಿರುಧ್ದ 86 ರನ್ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಪಂದ್ಯವನ್ನ ಗೆಲ್ಲುವುದರ ಮೂಲಕ ಕೋಲ್ಕತ್ತಾ ತಮ್ಮ ಪ್ಲೇ ಆಫ್ ಹಾದಿ ಇನ್ನಷ್ಟು ಸರಳ ಮಾಡಿಕೊಂಡಿದೆ. ಶುಕ್ರವಾರ ಶಾರ್ಜಾದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ಮೊದಲ ಇನ್ನಿಂಗ್ಸನಲ್ಲಿ 171 ರನ್ ಗಳ ಬೃಹತ್ ಮೊತ್ತ ದಾಖಲಿಸಿತು.
ಈಗಾಗಲೆ ತಂಡದ ನೆಟ್ ರನ್ ರೇಟ್ ಜಾಸಿ ಇದ್ದು, ನಿನ್ನೆ ಹೆಚ್ಚಿನ ಅಂತರದಿಂದ ಗೆದ್ದು, ತಂಡ ಪ್ಲೇ ಆಫ್ ಗೆ ಪ್ರವೇಶಿಸುವ ಅವಕಾಶ ಇನ್ನಷ್ಟು ಗಟ್ಟಿಗೊಂಡಿದೆ.
ನೈಟ್ ರೈಡರ್ಸ್ ಪ್ಲೇ ಆಫ್ ಪ್ರವೇಶಿಸಲು ಇಂದು ನಡೆಯುವ ಮುಂಬೈ ಇಂಡಿಯನ್ಸ್ ಹಾಗು ಹೈದರಾಬಾದ್ ಪಂದ್ಯದಲ್ಲಿ ಮುಂಬೈ ಭಾರಿ ಅಂತರದ ಗೆಲುವು ಸಾಧಿಸದೆ ಇರಬೇಕಿದೆ. ಇದು ಬಹುತೇಕವಾಗಿ ಅಸಾಧ್ಯವಾಗಿರುವುದರಿಂದ ಕೋಲ್ಕತ್ತಾ ಪ್ಲೇ ಆಫ್ ಪ್ರವೇಶಿಸುವ ಸಾಧ್ಯತೆ ಹೆಚ್ಚಾಗಿದೆ. ಬ್ಯಾಟಿಂಗ್ ನಲ್ಲಿ ದಾಖಲೆ ಬೃಹತ್ ಮೊತ್ತ ಕಲೆಹಾಕಿದ ಕೆಕೆಆರ್ ಬೌಲಿಂಗ್ ನಲ್ಲು ವಿಜೃಂಬಿಸಿದೆ. ರಾಜಸ್ಥಾನ್ ರಾಯಲ್ಸ್ ತಂಡವನ್ನು ಕೇವಲ 85 ರನ್ಗಳ ಅಲ್ಪಮೊತ್ತಕ್ಕೆ ಆಲೌಟ್ ಮಾಡಿ ಮಿಂಚಿದ್ದಾರೆ.