ನಮ್ಮ ದೇಶ ಕಾಯೋ ಯೋಧರು ಸಿಯಾಚಿನ್ನಂಥ ಮೈ ಹೆಪ್ಪುಗಟ್ಟಿಸೋ ಚಳಿಯ ಪ್ರದೇಶಗಲ್ಲಿ ಕರ್ತವ್ಯ ನಿರ್ವಹಿಸೋದು ನೋಡಿದ್ರೆ ಅವರ ಮೇಲಿನ ಗೌರವ ಇಮ್ಮಡಿಯಾಗುತ್ತೆ. ಈ ಮಧ್ಯೆ ಸೈನಿಕರು ವಿಶೇಷ ದಿನಗಳನ್ನು, ಹಬ್ಬಗಳನ್ನು ಆಚರಿಸೋದು ನೋಡಿ ಜನರು ಕೂಡ ಖುಷಿ ಪಡ್ತಾರೆ. ಸದ್ಯ ಯೋಧರೊಬ್ಬರು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಈ ವಿಡಿಯೋವನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊAಡಿದ್ದಾರೆ. ವಿಡಿಯೋದಲ್ಲಿ ಸೈನಿಕರ ಗುಂಪೊAದು ತಮ್ಮ ಸ್ನೇಹಿತನ ಹುಟ್ಟುಹಬ್ಬ ಆಚರಿಸಿ, ಖುಷಿಯಿಂದ ಚಪ್ಪಾಳೆ ತಟ್ಟುತ್ತ ಸಂಭ್ರಮಿಸುತ್ತಿದ್ದಾರೆ. ಯೋಧ ಮಂಜುಗಡ್ಡೆಯನ್ನೇ ಕೇಕ್ನಂತೆ ಕಟ್ ಮಾಡುವುದನ್ನು ಕಾಣಬಹುದು.
ಯೋಧನ ಹುಟ್ಟುಹಬ್ಬಕ್ಕೆ ಮಂಜುಗಡ್ಡೆ ಕೇಕ್
Please follow and like us: