ನವದೆಹಲಿ: ದೆಹಲಿಯ ತುಘಲಕಾಬಾದ್ ಪ್ರದೇಶದಲ್ಲಿ ನಸುಕಿನ ಜಾವ ಅಗ್ನಿದುರಂತ ಸಂಭವಿಸಿ ೧೨೦ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿವೆ. ತುಘಲಕಾಬಾದ್‌ನ ವಾಲ್ಮೀಕಿ ಮೊಹಲ್ಲಾ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಅಗ್ನಿ ಹೊತ್ತಿ ಉರಿಯಲಾರಂಭಿಸಿದ ಕೂಡಲೇ ಕಳೆದ ಮಧ್ಯರಾತ್ರಿ ೧.೩೦ರ ಹೊತ್ತಿಗೆ ೨೨ ಅಗ್ನಿಶಾಮಕ ಎಂಜಿನ್ ಗಳು ಬಂದು ಬೆಂಕಿಯನ್ನು ನಂದಿಸಿದವು. ಘಟನೆಯಲ್ಲಿ ಯಾರೊಬ್ಬರಿಗೂ ಗಾಯಗಳಾಗಿಲ್ಲ. ಕೆಲ ದಿನಗಳ ಹಿಂದೆ ಕೂಡ ಇದೇ ಪ್ರದೇಶದಲ್ಲಿ ಬೆಂಕಿ ಹತ್ತಿ ಉರಿತು ೨೫೦ಕ್ಕೂ ಹೆಚ್ಚು ಗುಡಿಸಲುಗಳು ಭಸ್ಮವಾಗಿದ್ದವು.
ಅಗ್ನಿ ಅಕಸ್ಮಿಕ ಗುಡಿಸಲುಗಳು ಭಸ್ಮ

Please follow and like us: