ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಭಾಗಗಳಲ್ಲಿ ಸುಮಾರು 1,500 ಆಟೋಗಳು ಚಾಲನೆಯಲ್ಲಿ ಇದ್ದು ಹೆಚ್ಚು ಅಪರಾಧ ಪ್ರಕರಣಗಳು, ಕಳವು, ಪ್ರಯಾಣಿಕರು ಲಗೇಜ್ ಕಳೆದುಕೊಳ್ಳೋದು ಸಾಮಾನ್ಯವಾಗಿ ಆಟೋಗಳಲ್ಲೇ ಆಗಿದ್ದು. ಆಟೋರಿಕ್ಷಾದ ನೊಂದಣಿ ಸಂಖ್ಯೆಯನ್ನು ನೆನಪಿಟ್ಟುಕೊಳ್ಳಲು ಬಹುತೇಕ ಮಂದಿಗೆ ಸಾಧ್ಯವಾಗುವುದಿಲ್ಲ. ಆದ್ರೆ ಇನ್ನುಂದೆ ಹಾಗೆ ಆಗಲ್ಲ. ದೊಡ್ಡಬಳ್ಳಾಪುರ ನಗರ ಠಾಣೆ ಇನ್ಸ್ಪೆಕ್ಟರ್ ಸೋಮಶೇಖರ್ ಅವರು ನೂತನ ಪ್ರಯೋಗ ಮಾಡಿದ್ದು, ಪಟ್ಟಣದ ಎಲ್ಲಾ ಆಟೋಗಳಿಗೆ ಯೂನಿಕ್ ನಂಬರ್ ನೀಡಿದ್ದಾರೆ. ಆಟೋಗಳಲ್ಲಿ ಚಾಲಕರು ಮತ್ತು ಆಟೋ ಮಾಲೀಕರ ವಿವರ ಪ್ರಯಾಣಿಕರಿಗೆ ಕಾಣಿಸುವ ಹಾಗೆ ಅಂಟಿಸುವ ಪ್ರಯತ್ನಕ್ಕಿಂತ ಇದು ಸುಲಭ ಮತ್ತು ಜನರಿಗೆ ಅನುಕೂಲವಾಗುವ ಹೊಸ ಪ್ರಯತ್ನ ಇದಾಗಿದೆ. ಇನ್ಸ್ಪೆಕ್ಟರ್ ಸೋಮಶೇಖರ್ ಅವರ ಈ ಐಡಿಯಾಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.