ದರೋಡೆಗೆ ಪ್ಲಾನ್ ಮಾಡಿದ ನಾಲ್ವರು ಅಂದರ್

ಕತ್ತಲಲ್ಲಿ ಹೊಂಚು ಹಾಕಿ ಒಂಟಿ ದಾರಿಹೋಕರ ಮೇಲೆ ಹಲ್ಲೆ ನಡೆಸಿ ನಗದು ಚಿನ್ನಾಭರಣ  ದೋಚಲು ಸಜ್ಜಾಗಿದ್ದ ನಾಲ್ವರು ದರೋಡೆಕೋರರು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ರಾಜಗೋಪಾಲನಗರದ ಅಮರನಾಥ್ (31), ಶಿವರಾಜ್ (32), ಕೆಪಿ ಅಗ್ರಹಾರದ ಶಾಂತರಾಜು (27 ಹಾಗೂ ಶ್ರೀನಿವಾಸ ಬಂಧಿತ ಆರೋಪಿಗಳು  ನಿನ್ನೆ ರಾತ್ರಿ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಇಎಲ್ 2ನೆ ಹಂತದ ಭರತ್‍ನಗರ ಪಾರ್ಕ್ ಸಮೀಪ ಕತ್ತಲಲ್ಲಿ ನಿಂತು ದಾರಿಯಲ್ಲಿ ಒಂಟಿಯಾಗಿ ಹೋಗುವ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿ ನಗದು ಮತ್ತು ಚಿನ್ನಾಭರಣ ಕೊಳ್ಳೆಹೊಡೆಯಲು ಆರೋಪಿಗಳು ಸಜ್ಜಾಗಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ಮಾಡಿದ ಸಿಸಿಬಿ ಸಂಘಟಿತ ಅಪರಾಧ ದಳದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ದರೋಡೆಕೋರರ ಬಳಿ ಇದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದು, ಅವರ ವಿರುದ್ಧ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

 

Please follow and like us:

Leave a Reply

Your email address will not be published. Required fields are marked *

Next Post

  ಕೊರೊನಾ ನಂತರ ಹೊಸ ಜಗತ್ತನ್ನು ಹೊಂದಲಿದ್ದೇವೆ

Wed May 27 , 2020
ಮಹಾಮಾರಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಬಳಿಕ ಹೊಸ ಜಗತ್ತನ್ನ ಹೊಂದಲಿದ್ದೆವೆ ಎಂದು ಕಾಂಗ್ರೆಸ್ ಮುಖಂಡ್ ರಾಹುಲ್ ಗಾಂಧಿ ಹೇಳಿದ್ದಾರೆ. ಹಾವರ್ಡ್ ಗ್ಲೋಬಲ್ ಆರೋಗ್ಯ ಸಂಸ್ಥೆಯ ನಿರ್ದೇಶಕ ಅಶಿಶ್ ಜಾ ಅವರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಕೊರೊನಾ ವೈರಸ್ ಎರಡು ಹಂತದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದು, ಆರೋಗ್ಯ ರಕ್ಷಣೆ ಹಾಗೂ ಜಾಗತಿಕ ರಚನೆಯ ಮೇಲೆ ಕೊರೊನಾ ವೈರಸ್ ಆಕ್ರಮಣ ಮಾಡುತ್ತಿದೆ ಎಂದು ಹೇಳಿದರು. Please follow and […]

Advertisement

Wordpress Social Share Plugin powered by Ultimatelysocial