ನವ ದಂಪತಿಗಳಿಗೆ ೧೦ ಸಾವಿರ ದಂಡ ವಿಧಿಸಿದ ಹೈಕೋರ್ಟ್

ನವದೆಹಲಿ: ತಮ್ಮ ಮದುವೆಗೆ ಕುಟುಂಬ ಸದಸ್ಯರ ವಿರೋಧ ಇರುವ ಹಿನ್ನೆಲೆಯಲ್ಲಿ ತಮಗೆ ರಕ್ಷಣೆ ನೀಡಬೇಕೆಂದು ಕೋರಿ ಕೋರ್ಟ್ ಮೆಟ್ಟಿಲೇರಿದ ನವ ವಧುವರನಿಗೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ನಡೆದಿದೆ. ತಮ್ಮ ಮದುವೆಗೆ ಕುಟುಂಬಸ್ಥರ ವಿರೋಧವಿದ್ದು, ತಮಗೆ ರಕ್ಷಣೆ ಕೊಡಲು ಸೂಚನೆ ನೀಡಬೇಕೆಂದು ಕೋರಿ ಕೋರ್ಟ್ ಮೆಟ್ಟಿಲೇರಿದ್ದ ವೇಳೆ ನ್ಯಾಯಾಧೀಶರು ವಿವಾಹದ ಫೋಟೋ ಗಮನಿಸಿದ ಸಂದರ್ಭದಲ್ಲಿ ಇಬ್ಬರೂ ಮಾಸ್ಕ್ ಧರಿಸಿಲ್ಲ ಎಂಬುದನ್ನು ಪತ್ತೆ ಹಚ್ಚಿದ್ದಾರೆ. ವಿವಾಹದ ಫೋಟೋಗಳನ್ನು ವೀಕ್ಷಿಸಿದ ಹೈಕೋರ್ಟ್ ಪೀಠದ ಜಸ್ಟೀಸ್ ಹರಿ ಪಾಲ್ ವರ್ಮಾ ಅವರು ಮಾಸ್ಕ್ ಧರಿಸದಿರುವುದನ್ನು ಕಂಡು ಹತ್ತು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಕೋವಿಡ್ ೧೯ ಸಂದರ್ಭದಲ್ಲಿ ಮಾಸ್ಕ್ ಅಗತ್ಯ. ಈ ಹಿನ್ನೆಲೆಯಲ್ಲಿ ದೂರುದಾರರು ೧೫ ದಿನದೊಳಗೆ ಹೋಶಿಯಾರ್ ಪುರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹತ್ತು ಸಾವಿರ ರೂಪಾಯಿ ಠೇವಣಿ ಇಡುವಂತೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಠೇವಣಿ ಇಡುವ ಈ ಹಣವನ್ನು ಹೋಶಿಯಾರ್ ಪುರ್ ಜನರಿಗೆ ಮಾಸ್ಕ್ ನೀಡುವ ಉದ್ದೇಶಕ್ಕೆ ಬಳಸಬೇಕು ಎಂದು ಹೈಕೋರ್ಟ್ ತಿಳಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಮಂಗಳಸೂತ್ರ ಮಾರಿದ ವಲಸೆ ಕಾರ್ಮಿಕ

Wed Jun 3 , 2020
ಒಡಿಶಾದ ವಲಸೆ ಕಾರ್ಮಿಕನೊಬ್ಬ ಬೆಂಗಳೂರಿನಿAದ ತನ್ನ ಊರಿಗೆ ತೆರಳುವ ಉದ್ದೇಶದಿಂದ ಪತ್ನಿಯ ಮಂಗಳ ಸೂತ್ರ ಮಾರಾಟ ಮಾಡಿರುವ ಹಣದಲ್ಲಿ ಸೈಕಲ್ ಖರೀದಿಸಿದ್ದಾನೆ. ನಾವು ಹಣವಿಲ್ಲದೆ ಪರದಾಡುತ್ತಿದ್ದಾಗ, ನನ್ನ ಹೆಂಡತಿ ಎರಡು ಬೈಸಿಕಲ್ ಗಳನ್ನು ಖರೀದಿಸಲು ತನ್ನ ಮಂಗಳಸೂತ್ರವನ್ನು ಮಾರಿದಳು. ಬಳಿಕ ಸೈಕಲ್ ಖರೀದಿಸಿ ಬೆಂಗಳೂರಿನಿAದ ಹೊರಟೆವು ಎಂದು ಚಂದನ್ ಹೇಳಿದ್ದಾರೆ. ಎರಡು ತಿಂಗಳಿನಿAದ ಯಾವುದೇ ಸಂಪಾದನೆ ಇರಲಿಲ್ಲ. ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದೆವು, ಕೊನೆಯ ಉಪಾಯವಾಗಿ, ತಲಾ ೫,೦೦೦ ರೂ.ಗೆ […]

Advertisement

Wordpress Social Share Plugin powered by Ultimatelysocial