ಬುದ್ಧಿವಂತರಿಗೆ ಚೆಕ್‌ಮೇಟ್

ಚೆಸ್ ಆಟ ಎಂದರೆ ಬುದ್ಧಿವಂತಿಕೆಯ ಆಟ. ಚೆಸ್ ಪ್ರಿಯರಿಗೆ ಚೆಕ್‌ಮೇಟ್ ಪದದ ಪರಿಚಯ ಇದ್ದೇ ಇರುತ್ತದೆ. ಯಾಕಪ್ಪಾ ಇದನ್ನ ಹೇಳ್ತಿದಾರೆ ಅಂತಿದೀರಾ, ಗಾಂಧಿನಗರದಲ್ಲಿ ಚೆಕ್‌ಮೇಟ್ ಎಂಬ ಸಿನಿಮಾ ನಿರ್ಮಾಣವಾಗಿದ್ದು, ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರಕ್ಕೆ ಭಾರತೀಶ ವಸಿಷ್ಠ ಹಾಗೂ ಸಂತೋಷ್ ಚಿಪ್ಪಾಡಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಸಸ್ಪೆನ್ಸ್ ಚಿತ್ರವಾಗಿದ್ದು, ಲವ್‌ಸ್ಟೋರಿ, ಕಾಮಿಡಿಯೂ ಇದೆ. ನಾಲ್ವರು ಸ್ನೇಹಿತರು ಬ್ರೇಕಪ್ ಪಾರ್ಟಿಗೆ ಹೋಗುತ್ತಾರೆ ಎಲ್ಲರೂ ಚದುರಂಗದಾಟದ ಬಲೆಗೆ ಸಿಲುಕಿಕೊಳ್ಳುತ್ತಾರೆ. ಅವರ ನಡುವೆಯೇ ಆಟ ಶುರುವಾಗಿ ಸ್ನೇಹ ಮರೆಯಾಗಿ ಸ್ವಾರ್ಥ ಹುಟ್ಟುತ್ತದೆ. ಈ ಬಲೆಯಿಂದ ಅವರೆಲ್ಲ ಹೇಗೆ ಹೊರ ಬರುತ್ತಾರೆ ಎಂಬುದೇ ಚಿತ್ರದ ಕಥಾಹಂದರ.
ಪೋಸ್ಟ್ ಪ್ರೋಡಕ್ಷನ್ ಕೆಲಸ ಪೂರ್ಣಗೊಂಡಿದ್ದು, ಲಾಕ್‌ಡೌನ್ ಮುಗಿದ ನಂತರ ತೆರೆಗೆ ಬರುವ ಸಿದ್ಧತೆ ನಡೆಸುತ್ತಿದೆ ಚಿತ್ರತಂಡ.
ಸತೀಶ್ ರಾಜೇಂದ್ರನ್ ಅವರ ಛಾಯಾಗ್ರಹಣವಿದ್ದು, ಎಸ್. ಈಶ್ವರ್ ಸಂಕಲನವಿದೆ. ಪಾರು ಐ ಲವ್ ಯು ಚಿತ್ರದ ನಾಯಕರಾಗಿದ್ದ ರಂಜನ್ ಹಾಸನ್ ಚಿತ್ರದ ನಾಯಕ. ಅವರಿಗೆ ಪ್ರೀತು ಪೂಜಾ ನಾಯಕಿಯಾಗಿದ್ದಾರೆ. ವಿಜಯ್ ಚೆಂಡೂರ್, ನೀನಾಸಂ ಅಶ್ವಥ್, ಕಾಕ್ರೋಚ್ ಸುಧಿ, ವಿಶ್ವ ವಿಜೇತ್, ಪ್ರದೀಪ್ ಪೂಜಾರಿ, ಹರಿ, ಕಾರ್ತಿಕ್ ಚಿತ್ರದಲ್ಲಿ ದೊಡ್ಡ ತಾರಾಗಣವಿದೆ.

Please follow and like us:

Leave a Reply

Your email address will not be published. Required fields are marked *

Next Post

ನ್ಯಾಟೋ ಕಣ್ಗಾವಲು ಪಡೆಯ ಹೆಲಿಕ್ಯಾಪ್ಟರ್ ಮಿಸ್ಸಿಂಗ್

Thu Apr 30 , 2020
ಕೆನಡಾದ ನ್ಯಾಟೋ ಕಣ್ಗಾವಲು ಪಡೆಯ ಮಿಲಿಟರಿ ಹೆಲಿಕ್ಯಾಪ್ಟರ್ ಕಾಣೆಯಾಗಿದೆ ಎಂದು ಕೆನಡಾ ಸಶಸ್ತ್ರ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ಇಟಲಿ ಮತ್ತು ಗ್ರೀಸ್ ನಡುವಿನ ಸಮುದ್ರದ ಮೇಲೆ ಗಸ್ತು ಕೆಲಸ ನಿರ್ವಹಿಸುತ್ತಿತ್ತು. ಇದೇ ವೇಳೆ ಕಾರ್ಯಾಚರಣೆಯಲ್ಲಿ ಕಣ್ಮರೆಯಾಗಿದೆ ಎನ್ನಲಾಗಿದೆ. ಈ ಹೆಲಿಕ್ಯಾಪ್ಟರನ್ನು ಕೆನಡಾದ ಫ್ರೀಗೇಟ್ ಫ್ರೆಡೆರಿಕ್ಟನ್ ಗೆ ನಿಯೋಜನೆ ಮಾಡಲಾಗಿತ್ತು. ‘ನಮ್ಮ ಸಿಹೆಚ್-೧೪೮ ಸೈಕ್ಲೋನ್ ಹೆಲಿಕಾಪ್ಟರಗಳನ್ನು ಗುಣಮಟ್ಟ ಅಭಿವೃದ್ದಿ ಮಾಡುವ ಪರಿಸ್ಥಿತಿ ಇದೆ. ಹೀಗಾಗಿ ಹೆಚ್ಎಂಸಿಎಸ್ ಫ್ರೆಡೆರಿಕ್ಟನಲ್ಲಿ ನಿಯೋಜನೆ ಮಾಡಿದ್ವಿ. ಸದ್ಯ […]

Advertisement

Wordpress Social Share Plugin powered by Ultimatelysocial