ಶೌರ್ಯ ಮೆರೆದ ಯುವಕರಿಗೆ ಎಸ್.ಡಿ ಪಿ.ಐ ನಿಂದ ಸನ್ಮಾನ

ಪಾಣೆ ಮಂಗಳೂರು ನೇತ್ರಾವತಿ ನದಿಗೆ ಹಾರಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಿನ್ನೆ ನಡೆದಿದೆ. ಸ್ಥಳೀಯರು ಯುವಕನನ್ನು ರಕ್ಷಣೆ ಮಾಡಿದ್ರೂ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.ಮೃತ ಯುವಕ ಕಲ್ಲಡ್ಕದ ನಿಶಾಂತ್ ಎಂದು ತಿಳಿದು ಬಂದಿದೆ. ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ನಿಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಆತನನ್ನು ನೋಡಿದ ಕೂಡಲೇ ಈದ್ ಹಬ್ಬದ ಸಂಭ್ರಮದಲ್ಲಿದ್ದರೂ ಗೂಡಿನಂಗಡಿಯ ಶಮೀರ್ ಮುಹಮದ್, ತೌಸೀಫ್ ಝಾಹಿದ್,ಮುಕ್ತಾರ್ ಆರೀಫ್ ರಕ್ಷಣೆ ಮಾಡಿದ್ದಾರೆ. ನಿಶಾಂತ್ ನನ್ನು ಆಸ್ಪತ್ರೆಗೆ ಕರೆದೊಯ್ದರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ. ಇನ್ನೂ ಈ ಘಟನೆಗೆ  ಸಂಬಂಧಿಸಿದಂತೆ ಎಸ್.ಡಿ ಪಿ.ಐ ವತಿಯಿಂದ ನೇತ್ರಾವತಿ ನದಿಗೆ ಹಾರಿ ತಮ್ಮ ಜೀವದ ಹಂಗನ್ನು ತೊರೆದು ಜೀವ ರಕ್ಷಿಸಲು ಪ್ರಯತ್ನಿಸಿ ಶೌರ್ಯ ಮೆರೆದ ಯುವಕರಿಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ಕ್ಷೇತ್ರ ಸಮಿತಿ ವತಿಯಿಂದ ಸನ್ಮಾನ ಕಾರ್ಯಕ್ರಮ ಮಾಡಲಾಯಿತು. ಈ ಸಂಧರ್ಭದಲ್ಲಿ ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಯೂಸುಫ್ ಆಲಡ್ಕ, ಜಿಲ್ಲಾ ಸಮಿತಿ ಉಪಾಧ್ಯಕ್ಷ ಇಕ್ಬಾಲ್ IMR, ಬಂಟ್ವಾಳ ಪುರಸಭಾ ಸಮಿತಿ ಅಧ್ಯಕ್ಷ ಮೂನಿಸ್ ಆಲಿ,ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿಗಳಾದ ಮಜೀದ್ ಆಲಡ್ಕ,ಬಂಟ್ವಾಳ ಪುರಸಭಾ ಸದಸ್ಯೆ ಝೀನತ್ ಫೈರೊಜ್, ಸಂಶಾದ್ ಬಾನು,ಎಸ್.ಡಿ ಪಿ.ಐ ಮುಖಂಡ ಹನೀಫ್ ಖಾನ್ ಕೊಡಾಜೆ, ಸಲೀಂ ಆಲಂಪಾಡಿ, ಕ್ಷೇತ್ರ ಸಮಿತಿ ಸದಸ್ಯ ಫೈಝಲ್ ಮಂಚಿ ಮತ್ತು ಮತ್ತಿತರರು ಉಪಸ್ಥಿತರಿದ್ದರು..

Please follow and like us:

Leave a Reply

Your email address will not be published. Required fields are marked *

Next Post

ಬರ್ತ್ ಡೇ ನೆಪದಲ್ಲಿ ಮೋಜು ಮಸ್ತಿಗೆ ಬಂದು ಮಸಣ ಸೇರಿದರು..!

Tue May 26 , 2020
ಲಾಕ್ ಡೌನ್ ನಡುವೆಯೂ ಗೆಳೆಯನ ಹುಟ್ಟು ಹಬ್ಬ ಆಚರಣೆ ನೆಪದಲ್ಲಿ ಮೋಜು ಮಸ್ತಿಗೆಂದು ಬೈಕ್ ನಲ್ಲಿ ಹೋಗಿದ್ದ 8 ಮಂದಿ ಪೈಕಿ ಮೂವರು ಜಲಸಮಾಧಿಯಾಗಿದ್ದಾರೆ. ಬರ್ತ್ ಡೇ ಬಾಯ್ ಕೂಡ ಸಾವಿಗೀಡಾಗಿದ್ದು ಸಂಭ್ರಮಾಚರಣೆ ದುರಂತ ಅಂತ್ಯ ಕಂಡಿದೆ. ಬೆಂಗಳೂರು ರಾಮಮೂರ್ತಿ ನಗರದ ಚಂದ್ರು(20) ರಾಜು(19) ಮತ್ತು ನವೀನ್ ಕುಮಾರ್(24) ಮೃತ ದುರ್ದೆವಿಗಳು ಎಂದು  ತಿಳಿಒದು ಬಂದಿದೆ. ಬರ್ತ್ ಡೇ ಮಾಡಲೆಂದು ರಾಮಮೂರ್ತಿ ನಗರದಿಂದ ನವೀನ ಸೇರಿ ನಾಲ್ವರು ಯುವಕರು ಹಾಗೂ […]

Advertisement

Wordpress Social Share Plugin powered by Ultimatelysocial