ಐಪಿಎಲ್ ನಡೆಸಲು ಭರ್ಜರಿ ಪ್ಲಾನ್

ಜಗತ್ತಿನ ಶ್ರೀಮಂತ ಚುಟುಕು ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ ಅನ್ನು ಇದೇ ವರ್ಷದಲ್ಲಿ ನಡೆಸಲು ಭರ್ಜರಿ ಪ್ಲಾನ್ ಮಾಡಲಾಗಿದೆ. ಹೌದು ಸೆಪ್ಟೆಂಬರ್ ೨೬ರಿಂದ ನವೆಂಬರ್ ೮ರವರೆಗೆ ಐಪಿಎಲ್ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಿಸಿಸಿಐ ಚಿಂತಿಸಿದ್ದು ತಾತ್ಕಾಲಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟಾರೆ ೬೦ ಪಂದ್ಯಗಳನ್ನು ೪೪ ದಿನಗಳಲ್ಲಿ ಮುಗಿಸಲು ಬಿಸಿಸಿಐ ಪ್ಲ್ಯಾನ್ ಮಾಡಿಕೊಂಡಿದೆಯAತೆ. ಇನ್ನು ಈ ಬಾರಿ ಹೋಮ್ ಗ್ರೌಂಡ್ ಮ್ಯಾಚ್ ಗಳಿರುವುದಿಲ್ಲ. ಬದಲಾಗಿ ಒಟ್ಟು ೫ ಕ್ರೀಡಾಂಗಣಗಳನ್ನು ಆಯ್ಕೆ ಮಾಡಿಕೊಂಡು ಇಡೀ ಟೂರ್ನಿಯನ್ನು ನಡೆಸಲಿದೆ. ಕಳೆದ ಕೆಲವು ದಿನಗಳಿಂದ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳು, ಮಾಧ್ಯಮ ಹಕ್ಕುಗಳ ಪಾಲುದಾರ ಮತ್ತು ಐಪಿಎಲ್‌ನ ಇತರ ಪಾಲುದಾರರೊಂದಿಗೆ ಸಮಾಲೋಚಿಸಿದೆ ಮತ್ತು ಐಪಿಎಲ್ ಅನ್ನು ಸೆಪ್ಟೆಂಬರ್ ೨೬ ರಿಂದ ನವೆಂಬರ್ ೮ ರವರೆಗೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ ಮಾಡಿದೆ ಎಂದು ವರದಿ ಮಾಡಿದೆ. ಈ ತಾತ್ಕಾಲಿಕ ದಿನಾಂಕಗಳು ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ೨೦ ವಿಶ್ವಕಪ್ ಅನ್ನು ಮುಂದೂಡುವುದರ ಮೇಲೆ ಅವಲಂಭಿತವಾಗಿದೆ. ಜೂನ್ ೧೦ರಂದು ನಡೆದ ಐಸಿಸಿ ಬೋರ್ಡ್ ಸಭೆಯ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಐಸಿಸಿ ಟಿ ೨೦ ವಿಶ್ವಕಪ್ ಕುರಿತ ನಿರ್ಧಾರವನ್ನು ಜುಲೈ ತಿಂಗಳವರೆಗೆ ವಿಳಂಬಗೊಳಿಸಿತ್ತು. ಬಿಸಿಸಿಐನ ಮೂಲಗಳ ಪ್ರಕಾರ, ಮಂಡಳಿಯು ಹೆಚ್ಚು ಹೊತ್ತು ಕಾಯಲು ಸಿದ್ಧವಾಗಿಲ್ಲ ಮತ್ತು ಐಸಿಸಿ ಸಭೆ ಮುಗಿದ ಕೂಡಲೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ಸದಸ್ಯ ಮಂಡಳಿಗಳಿಗೆ ಸೂಚನೆ ನೀಡಲಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಗಡಿ ವಿವಾದಕ್ಕೆ ನೇಪಳ ಹೊಣೆ ಎಂದ ಭಾರತ

Tue Jun 16 , 2020
ಭಾರತದ ಭೂಪ್ರದೇಶಗಳನ್ನು ಸೇರಿಸಿರುವ ಹೊಸ ರಾಜಕೀಯ ನಕ್ಷೆಯನ್ನು ನೇಪಾಳವು ಬಿಡುಗಡೆ ಗೊಳಿಸಿರುವುದು ರಾಜಕೀಯ ಲಾಭವನ್ನು ಪಡೆಯುವ ದುರುದ್ದೇಶದಿಂದ. ಹಾಗಾಗಿ, ಭಾರತ ಮತ್ತು ನೇಪಾಳದ ನಡುವೆ ಮಾತುಕತೆಯ ವಾತಾವರಣವನ್ನು ಸೃಷ್ಟಿಸುವುದು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಹೊಣೆಗಾರಿಕೆಯಾಗಿದೆ ಎಂಬುದು ಭಾರತದ ನಿಲುವು. ಸತ್ಯಶೋಧನೆ ಅಥವಾ ಪುರಾವೆಗಳೇ ಇಲ್ಲದೆ ಹೊಸ ನಕ್ಷೆ ರಚಿಸಲಾಗಿದೆ. ಇದು ಭಾರತದೊಂದಿಗಿನ ಗಡಿ ವಿವಾದಕ್ಕೆ ರಾಜಕೀಯ ಬಣ್ಣ ನೀಡುವ ಸಂಚಾಗಿದ್ದು, ದಶಕಗಳಿಂದಲೂ ಇರುವಂಥ ಬಿಕ್ಕಟ್ಟನ್ನು ಮಾತುಕತೆ ಮೂಲಕ ಪರಿಹರಿಸುವಲ್ಲಿ ನೇಪಾಳ […]

Advertisement

Wordpress Social Share Plugin powered by Ultimatelysocial