ಒಲಿಂಪಿಕ್ಸ್ ನಡೆಯುವುದು ಅಸಂಭವ ಎಂದವರಿಗೆ ಕೊಯಿಕೆ ಸ್ಪಷ್ಟನೆ

ಕೋವಿಡ್ ಹಾವಳಿಯನ್ನು ಮೆಟ್ಟಿನಿಂತು, ಜಾಗತಿಕ ಒಗ್ಗಟ್ಟಿನ ದ್ಯೋತಕವಾಗಿ ಮುಂದಿನ ವರ್ಷ ಒಲಿಂಪಿಕ್ಸ್ ಪಂದ್ಯಾವಳಿ ನಡೆದೇ ನಡೆಯುತ್ತದೆ ಎಂಬುದಾಗಿ ಟೋಕಿಯೊ ಗವರ್ನರ್ ಯುರಿಕೊ ಕೊಯಿಕೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಇಂಥ ಕಠಿಣ ಸನ್ನಿವೇಶದಲ್ಲಿ ಜಗತ್ತು ಒಗ್ಗಟ್ಟಾಗಿ ನಿಲ್ಲಬೇಕು, ಮನುಕುಲದ ಸಂಬAಧವನ್ನು ದೃಢಗೊಳಿಸಬೇಕು. ಒಲಿಂಪಿಕ್ಸ್ ಆಯೋಜನೆಯಿಂದ ಇದು ಸಾಧ್ಯವಾಗಲಿದೆ’ ಎಂದು ರಾಯರ್‌ಗೆ ನೀಡಿದ ಆನ್‌ಲೈನ್ ಸಂದರ್ಶನದಲ್ಲಿ ಯುರಿಕೊ ಕೊಯಿಕೆ ಹೇಳಿದರು. ಇತ್ತೀಚೆಗೆ ಜಪಾನ್‌ನಲ್ಲಿ ನಡೆದ ವಿವಿಧ ಸಮೀಕ್ಷೆಗಳಲ್ಲಿ ಮುಂದಿನ ವರ್ಷವೂ ಟೋಕಿಯೋದಲ್ಲಿ ಒಲಿಂಪಿಕ್ಸ್ ನಡೆಯುವುದು ಅಸಂಭವ ಎಂಬ ರೀತಿಯಲ್ಲಿ ಸಾರ್ವಜನಿಕರು ಪ್ರತಿಕ್ರಿಯಿಸಿದ್ದರು. ಈ ಹಿನ್ನೆಲೆಯಲ್ಲಿ ಟೋಕಿಯೊ ಗವರ್ನರ್ ಹೇಳಿಕೆ ಮಹತ್ವ ಪಡೆದಿದೆ.

Please follow and like us:

Leave a Reply

Your email address will not be published. Required fields are marked *

Next Post

ದುಬೆಗಿತ್ತು ಮಾಸಿಕ ಕೋಟಿ ರೂ. ಆದಾಯ

Wed Jul 15 , 2020
ಎನ್‌ಕೌಂಟರ್‌ನಲ್ಲಿ ಹತನಾದ ಕುಖ್ಯಾತ ಪಾತಕಿ ವಿಕಾಸ್ ದುಬೆ ಅಕ್ರಮ ಆಸ್ತಿ ಹಾಗೂ ಅವ್ಯವಹಾರ ಕುರಿತು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದು, ಈತನ ಅಸ್ತಿಯನ್ನು ಪತ್ತೆ ಹಚ್ಚುವುದು ಸವಾಲಾಗಿ ಪರಿಣಮಿಸಿದೆ. ದುಬೆ ತಿಂಗಳಿಗೆ ಕೋಟಿ ರೂ.ಆದಾಯ ಗಳಿಸುತ್ತಿದ್ದನು ಎಂದು ತಿಳಿದು ಬಂದಿದ್ದು, ಈ ಹಣವನ್ನು ಎಲ್ಲಿ ಹೂಡಿಕೆ ಮಾಡಿದ್ದಾನೆ, ಹೇಗೆ ವ್ಯಯಿಸಿದ್ದಾನೆ ಎಂಬುದನ್ನು ಇ.ಡಿ. ಅಧಿಕಾರಿಗಳು ಪತ್ತೆ ಹಚ್ಚುತ್ತಿದ್ದಾರೆ. ೬೦ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಕುಖ್ಯಾತ ರೌಡಿ ತಿಂಗಳಿಗೆ […]

Advertisement

Wordpress Social Share Plugin powered by Ultimatelysocial