ಡಿಸೆಂಬರ್ ಎರಡನೇ ವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸಲು ಸರ್ಕಾರ ತೀರ್ಮಾನಿಸಿದೆ;ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ

ವಿಧಾನಮಂಡಲ ಚಳಿಗಾಲ ಅಧಿವೇಶನ ಡಿಸೆಂಬರ್ ಎರಡನೇ ವಾರ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸಲು ಸರಕಾರ ತೀರ್ಮಾನಿಸಿದೆ ಎಂದು ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಬಗ್ಗೆ ಚರ್ಚೆ ಯಾಗಿದೆಕಳೆದ ಮೂರು ವರ್ಷಗಳಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆದಿಲ್ಲ ಎಂದರು.

ಎರಡು ವಾರಗಳವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ವಿಷಯ ಹಾಗೂ ಸಮಸ್ಯಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯುವಂತಾಗಲು ಆದ್ಯತೆ ನೀಡಲಾಗುತ್ತಿದೆ. ಕುರಿತಾಗಿ ತಾವು ಸೇರಿದಂತೆ ಸ್ಪೀಕರ್, ಮುಖ್ಯಮಂತ್ರಿ, ಉಭಯ ಸದನಗಳ ವಿಪಕ್ಷ ನಾಯಕರು, ಸಭಾನಾಯಕರ ವಿಧನಮಂಡಲ ಜಂಟಿ ಬಿಜಿನೆಸ್ ಕಮಿಟಿ ಸಭೆ ಕರೆಯಲು ತಿಳಿಸಲಾಗಿದೆ ಎಂದರು.

ಸದನವನ್ನು ಶಿಸ್ತುಬದ್ದವಾಗಿ ನಡೆಸಲು ಯೋಜಿಸಲಾಗಿದೆ.ಅದೇ ರೀತಿ ಭಾಗದ ವಿಷಯಗಳ ಚರ್ಚೆಗೆ ಅನುವಾಗುವಂತೆ ನೋಡಬೇಕೆಂದು ಉಭಯ ಸದನಗಳ ವಿಪಕ್ಷ ನಾಯಕರಿಗೆ ಮನವಿ ಮಾಡಲಾಗಿದೆ ಎಂದರು.ದೇವಸ್ಥಾನಗಳ ಮಸೂದೆ ಪರಿಷತ್ತು ನಲ್ಲಿ ಅಂಗೀಕಾರವಾದರು ನಾನು ಸಹಿ ಹಾಕಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದ್ದು ತಿಳಿದಿದ್ದೇನೆ. ಅಂದು ತಡರಾತ್ರಿ 1:00 ಗಂಟೆವರಗೂ ನಡೆದಿತ್ತು. ತಡವಾಗಿದ್ದರಿಂದ ಸಹಿ ಹಾಕಿರಲಿಲ್ಲ. ಗುರುವಾರ ಬೆಂಗಳೂರಿಗೆ ಹೋದ ನಂತರ ಸಹಿ ಹಾಕುವೆ ಇದರಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಹೊರಟ್ಟಿ ಅವರು ಸ್ಪಷ್ಟ ಪಡಿಸಿದರು.

 

Please follow and like us:

Leave a Reply

Your email address will not be published. Required fields are marked *

Next Post

ಮೃತರ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಘೋಷಿಸಿದ ಛತ್ತೀಸ್ ಘಡ ಸಿಎಂ..!

Wed Oct 6 , 2021
ಲಖನೌ: ಪ್ರಿಯಾಂಕಾ ಗಾಂಧಿ ಬೆನ್ನಲ್ಲೇ ಇತ್ತ ರಾಹುಲ್ ಗಾಂಧಿ ಪ್ರವೇಶಕ್ಕೂ ಉತ್ತರ ಪ್ರದೇಶ ಪೊಲೀಸರು ತಡೆ ಹಾಕಿದ್ದು, ಲಖನೌ ಏರ್ ಪೋರ್ಟ್ ನಲ್ಲೇ ಕಾಂಗ್ರೆಸ್ ನಾಯಕನಿಗೆ ತಡೆವೊಡ್ಡಿದ್ದಾರೆಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಬಳಿಕ ಉತ್ತರ ಪ್ರದೇಶ ಭಾರಿ ಸುದ್ದಿಗೆ ಗ್ರಾಸವಾಗುತ್ತಿದ್ದು, ಉತ್ತರ ಪ್ರದೇಶ ಸರ್ಕಾರ ಕಾಂಗ್ರೆಸ್ ನಾಯಕರಿಗೆ ಲಖೀಂಪುರ್ ಖೇರಿಗೆ ಭೇಟಿ ನೀಡಲು ಅನುಮತಿ ನೀಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಲಖನೌಗೆ ಆಗಮಿಸಿದ್ದು, ಲಖೀಂಪುರ್ ಖೇರಿಗೆ ಭೇಟಿ […]

Advertisement

Wordpress Social Share Plugin powered by Ultimatelysocial