ತಮಿಳುನಾಡಿಗೆ ನೀರು ಬಿಡುವುದರ ವಿರುದ್ಧ ಕರ್ನಾಟಕ ದೋಷಪೂರಿತ ವಾದ ಮಾಡುತ್ತಿದೆ – ಸ್ಟಾಲಿನ್

ಚೆನ್ನೈ;- ತಮಿಳುನಾಡಿಗೆ ನೀರು ಬಿಡುವುದರ ವಿರುದ್ಧ ಕರ್ನಾಟಕ ದೋಷಪೂರಿತ ವಾದ ಮಾಡುತ್ತಿದೆ ಎಂದು ತಮಿಳುನಾಡು ಸಿಎಂ MK ಸ್ಟಾಲಿನ್ ಹೇಳಿದ್ದಾರೆ

ಈ ಸಂಬಂಧ ಮಾತನಾಡಿದ ಅವರು,ತಮಿಳುನಾಡಿಗೆ ನೀರು ಬಿಡುವುದರ ವಿರುದ್ಧ ಕರ್ನಾಕಟವು ದೋಷಪೂರಿತ ಮತ್ತು ಆಧಾರರಹಿತ ವಾದಗಳನ್ನು ಮಾಡುತ್ತಿದೆ.

ಆದರೆ ಇದನ್ನೆಲ್ಲ ಪರಿಗಣಿಸಬಾರದು. ಹೀಗಾಗಿ ತಮಿಳುನಾಡಿಗೆ 12,500 ಕ್ಯೂಸೆಕ್‌ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸುವಂತೆ ಕೋರಲಾಗುವುದು ಎಂದು ಸ್ಟಾಲಿನ್‌ ತಿಳಿಸಿದ್ದಾರೆ.

ರಾಜ್ಯದ ಎಲ್ಲ ಪಕ್ಷಗಳ ಸಂಸದರು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಕಾವೇರಿ ನೀರು ಬಿಡುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಿದ್ದಾರೆ. ರಾಜ್ಯ ಜಲ ಸಂಪನ್ಮೂಲ ಸಚಿವ ದುರೈಮುರುಗನ್‌ ಈ ನಿಯೋಗದ ನೇತೃತ್ವ ವಹಿಸಲಿದ್ದಾರೆ ಎಂದು ಸ್ಟಾಲಿನ್‌ ಹೇಳಿದ್ದಾರೆ.

ಈ ವರ್ಷದ ಸೆ.14ರವರೆಗೆ ರಾಜ್ಯಕ್ಕೆ 103.5 ಟಿಎಂಸಿ ಅಡಿ ನೀರು ಬಿಡಗಡೆಯಾಗಬೇಕಿತ್ತು. ಆದರೆ ಕೇವಲ 38.4 ಟಿಎಂಸಿ ಅಡಿ ನೀರು ಬಿಡಲಾಗಿದ್ದು ಇನ್ನೂ 65.1 ಟಿಎಂಸಿ ಅಡಿ ನೀರು ನಮಗೆ ಕೊರತೆಯಾಗಿದೆ ಎಂದು ತಿಳಿಸಿದ್ದಾರೆ.

Please follow and like us:

tmadmin

Leave a Reply

Your email address will not be published. Required fields are marked *

Next Post

BREAKING : ನೂತನ ಸಂಸತ್ ಕಟ್ಟಡದಲ್ಲಿ ಧ್ವಜಾರೋಹಣ ನೆರವೇರಿಸಿದ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಕರ್

Sun Sep 17 , 2023
  ನವದೆಹಲಿ : ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರು ಇಂದು ಹೊಸ ಸಂಸತ್ ಭವನದ ಕಟ್ಟಡದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಸೆಪ್ಟೆಂಬರ್ 18 ರಿಂದ ಪ್ರಾರಂಭವಾಗಲಿರುವ ಐದು ದಿನಗಳ ವಿಶೇಷ ಸಂಸತ್ ಅಧಿವೇಶನಕ್ಕೆ ಒಂದು ದಿನ ಮೊದಲು ಧ್ವಜಾರೋಹಣ ಸಮಾರಂಭ ನಡೆಯಿತು. ಈ ಅಧಿವೇಶನವು ಸಂಸತ್ತಿನ ಕಾರ್ಯಕಲಾಪಗಳನ್ನು ಹಳೆಯ ಕಟ್ಟಡದಿಂದ ಪಕ್ಕದ ಹೊಸ ಕಟ್ಟಡಕ್ಕೆ ವರ್ಗಾಯಿಸಲಾಗುತ್ತಿದೆ. ಲೋಕಸಭಾ ಸಚಿವಾಲಯದ ಪ್ರಕಾರ, ಉಪರಾಷ್ಟ್ರಪತಿ ಧನ್ಕರ್ ಅವರು ಹೊಸ ಸಂಸತ್ ಕಟ್ಟಡದ “ಗಜ […]

Advertisement

Wordpress Social Share Plugin powered by Ultimatelysocial