ಬದುಕಿರುವಾಗಲೇ ಸಮಾಧಿ ನಿರ್ಮಿಸಿಕೊಂಡ ವೃದ್ಧ ದಂಪತಿ:

ಭುನೇಶ್ವರ್​: ಹುಟ್ಟು ಉಚಿತ ಸಾವು ಖಚಿತ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಸತ್ತಾಗ ನಮ್ಮ ಜೊತೆ ಏನನ್ನು ತೆಗೆದುಕೊಂಡು ಹೋಗುವುದಿಲ್ಲ ಎಂಬುದೂ ಕೂಡ ಸತ್ಯ. ಆದರೂ ಈ ಜಗತ್ತಿನ ಒಂದು ಸುಂದರವಾದ ಮನೆ ಹೊಂದಬೇಕು ಮತ್ತು ಐಷಾರಾಮಿ ಜೀವನ ನಡೆಸಬೇಕು ಎಂದು ಎಲ್ಲರು ಕನಸು ಕಟ್ಟಿಕೊಂಡಿರುತ್ತಾರೆ.ಆದರೆ, ಒಡಿಶಾ ರಾಜ್ಯದ ಗಜಪತಿ ಜಿಲ್ಲೆಯ ಈ ದಂಪತಿಗೆ ಇದಕ್ಕೆ ಹೊರತಾಗಿದ್ದಾರೆ.ತಮಗಾಗಿ ಸುಂದರವಾದ ಮನೆಯನ್ನು ಕಟ್ಟಿಕೊಳ್ಳುವ ಬದಲಾಗಿ ಬದುಕಿರುವಾಗಲೇ ತಮಗೋಸ್ಕರ ಸಮಾಧಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಈ ವಿಚಿತ್ರ ಕಾರಣದಿಂದಾಗಿ ಈ ದಂಪತಿ ಇದೀಗ ಸ್ಥಳೀಯವಾಗಿ ಭಾರೀ ಚರ್ಚೆಯ ವಿಷಯವಾಗಿದ್ದಾರೆ.ವಿವರಣೆಗೆ ಬರುವುದಾದರೆ, ಲಕ್ಷ್ಮಣ್​ ಭುಯಾನ್ (80)​ ಮತ್ತು ಅವರ ಪತ್ನಿ ಜೆಂಗಿ ಭುಯಾನ್​ (70) ಗಜಪತಿ ಜಿಲ್ಲೆಯ ನೌಗರ್ಹ್​ ಬ್ಲಾಕ್​ ಅಡಿಯಲ್ಲಿ ಬರುವ ಸೌರಿ ಗ್ರಾಮದಲ್ಲಿ ಸೀಟಿನ ಮನೆಯಲ್ಲಿ ವಾಸವಿದ್ದಾರೆ. ಗಂಡು ಮತ್ತು ಹೆಣ್ಣು ಮಕ್ಕಳು ಹಾಗೂ ಸೊಸೆ ಮತ್ತು ಅಳಿಯಂದಿರು ಇದ್ದರು ದಂಪತಿ ಏಕಾಂಗಿ ಜೀವನ ಕಳೆಯುತ್ತಿದ್ದಾರೆ.ಸಮಾಜದಲ್ಲಿನ ಎಲ್ಲ ನ್ಯೂನತೆಗಳಿಂದ ಬೇಸತ್ತಿರುವ ದಂಪತಿ, ತಮ್ಮ ಮಕ್ಕಳೊಂದಿಗೆ ತಮ್ಮ ಬಾಂಧವ್ಯವನ್ನು ಮತ್ತು ಚರ ಮತ್ತು ಸ್ಥಿರ ಆಸ್ತಿಗಳನ್ನು ಬಹಳ ಹಿಂದೆಯೇ ಮುರಿದುಕೊಂಡಿದ್ದಾರೆ. ತಮ್ಮ ಉಳಿತಾಯದ ಹಣವನ್ನು ಮನೆ ನಿರ್ಮಾಣಕ್ಕೆ ಬಳಸುವುದನ್ನು ನಾವು ನೋಡಿದ್ದೇವೆ. ಆದರೆ, ಈ ದಂಪತಿ ತಮ್ಮ ಸಮಾಧಿಗಳ ನಿರ್ಮಾಣಕ್ಕೆ ವಿನಿಯೋಗಿಸಿದ್ದಾರೆ. ಸುಮಾರು 1.50 ಲಕ್ಷ ರೂ. ಖರ್ಚು ಮಾಡಿ, ಅಮೃತ ಶಿಲೆಯುಳ್ಳ ಸಮಾಧಿಯನ್ನು ತನಗೆ ಮತ್ತು ತನ್ನ ಪತ್ನಿಗಾಗಿ ನಿರ್ಮಾಣ ಮಾಡಿಕೊಂಡಿದ್ದಾರೆ. ಅದು ಕೂಡ ಬದುಕಿರುವಾಗಲೇ. ತನ್ನ ಹೆಸರಿನಲ್ಲಿದ್ದ ಆಸ್ತಿಯನ್ನು ಮಾರಿ ಸಮಾಧಿಗಳನ್ನು ನಿರ್ಮಾಣ ಮಾಡಿದ್ದಾರೆ.ಈ ಬಗ್ಗೆ ಮಾತನಾಡಿರುವ ಲಕ್ಷ್ಮಣ್​ ಭುಯಾನ್, ನನಗೀಗ 80 ವರ್ಷ. ಈಗಾಗಲೇ ಸಮಾಧಿಯಲ್ಲಿ ನನ್ನ ಒಂದು ಪಾದವಿದೆ. ನಾವು ಯಾವಾಗ ಸಾಯುತ್ತೇನೆ ಎಂದು ಗೊತ್ತಿಲ್ಲ. ನಾವು ಸತ್ತ ನಂತರೂ ಈ ಸಮಾಧಿಗಳಲ್ಲಿ ಒಟ್ಟಿ ಇರುತ್ತೇವೆ. ನನ್ನ ಇಚ್ಛಾನುಸಾರ ನಾನಿದನ್ನು ನಿರ್ಮಾಣ ಮಾಡಿದ್ದಾರೆ. ಈ ರೀತಿ ಮಾಡುವಂತೆ ಯಾರು ಕೂಡ ಹೇಳಿಕೊಟ್ಟಿಲ್ಲ ಎಂದರು.ಲಕ್ಷ್ಮಣ್​ ಭುಯಾನ್ ಅವರು ಮರಳು, ಸಿಮೆಂಟ್ ಮತ್ತು ಇತರ ನಿರ್ಮಾಣ ಸಾಮಗ್ರಿಗಳನ್ನು ಸಂಗ್ರಹಿಸುವುದನ್ನು ನಾನು ನೋಡಿದಾಗ, ನಾನು ಅವರ ಬಳಿ ಕಾರಣವನ್ನು ಕೇಳಿದೆ. ಅದಕ್ಕೆ ಪ್ರತಿಯಾಗಿ ಬಂದ ಉತ್ತರವು ನನ್ನನ್ನು ದಿಗ್ಭ್ರಮೆಗೊಳಿಸಿತು. ಅವರು ಮತ್ತು ಅವರ ಹೆಂಡತಿಗಾಗಿ ಸಮಾಧಿಗಳನ್ನು ನಿರ್ಮಿಸುತ್ತಿರುವುದಾಗಿ ಹೇಳಿದರು ಎಂದು ಸ್ಥಳೀಯ ಶಿಕ್ಷಕ ಮಾದಿಯು ಗಮಾಂಗ ತಿಳಿಸಿದರು.ಈ ಸಮಾಧಿಗಳನ್ನು ಮೂರ್ನಾಲ್ಕು ವರ್ಷಗಳ ಹಿಂದೆಯೇ ನಿರ್ಮಿಸಲಾಗಿದೆ. ಆದರೆ ಲಕ್ಷ್ಮಣ್ ಪ್ರತಿನಿತ್ಯ ಸಮಾಧಿಗಳಿಗೆ ಭೇಟಿ ನೀಡಿ ಅದು ಹಾಗೇ ಇದೆಯೋ ಇಲ್ಲವೋ ಎಂದು ನೋಡಿಕೊಂಡು ಹೋಗುತ್ತಿರುತ್ತಾರೆ.ಸಾವಿನ ನಂತರ ನನ್ನ ಮಕ್ಕಳು ನಮ್ಮ ದೇಹವನ್ನು ಏನು ಮಾಡುತ್ತಾರೆಂದು ನಾನು ನೋಡಬಹುದೇ? ಅವರು ಯಾವುದೇ ಗೌರವ ನೀಡದೇ ನಮ್ಮನ್ನು ಹೂಳಬಹುದು. ಹೀಗಾಗಿ ಮರಣದ ನಂತರವಾದರೂ ನಾವು ಶಾಂತಿಯಿಂದ ಇರಲು ಸಮಾಧಿಗಳನ್ನು ನಿರ್ಮಿಸಿದ್ದೇ ಎಂದು ಲಕ್ಷ್ಮಣ್ ಹೇಳಿದರು. (ಏಜೆನ್ಸೀಸ್​).

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskanna

Please follow and like us:

Leave a Reply

Your email address will not be published. Required fields are marked *

Next Post

ಪುನೀತ್ ರಾಜ್ ಕುಮಾರ್ ಹೆಸರಲ್ಲಿ ಹಲವು ಕಾರ್ಯಕ್ರಮ.

Thu Feb 23 , 2023
ಕರ್ನಾಟಕ ರತ್ನ ಪುನೀತ್ ರಾಜ್ ಅವರ ನೆನಪಿನಲ್ಲಿ ಬೆಂಗಳೂರು ಮತ್ತು ಚಾಮರಾಜ ನಗರ ಜಿಲ್ಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ವಸತಿ ಸಚಿವ ವಿ‌.ಸೋಮಣ್ಣ ಹೇಳಿದ್ದಾರೆ. ಐದು ದಿನಗಳ ಉಲ್ಲಾಸ್ ತರಬೇತಿ ಶಾಲೆ ಮತ್ತು ಅಪ್ಪು ಮಕ್ಕಳ ಚಿತ್ರೋತ್ಸವದ ಚಾಲನೆ ನೀಡಿ ಮಾತನಾಡಿದ ಅವರು, ಚಾಮರಾಜನಗರ ಜಿಲ್ಲೆಯಲ್ಲಿ ಸಮುದಾಯಭವನ ಉದ್ಘಾಟನೆ ಮಾಡಲಾಗಿದ್ದು ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದೇವೆ ಎಂದರು.ಇದಲ್ಲದೆ ಪುನೀತ್ ರಾಜ್ ಕುಮಾರ್ ಅವರ ಹೆಸರಲ್ಲಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಅದೇ […]

Advertisement

Wordpress Social Share Plugin powered by Ultimatelysocial