ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ ಸಾರಾ ಅಲಿ ಖಾನ್;

 

ಸಾರಾ ಅಲಿ ಖಾನ್ ಅವರು ಸೌಮ್ಯ ಸ್ವಭಾವದವರು. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಪಾಪರಾಜಿಗಳು ಮುತ್ತಿಕೊಳ್ಳುತ್ತವೆ. ಇದಕ್ಕೆ ಸಾರಾ ಅಲಿ ಖಾನ್ ಎಂದಿಗೂ ಬೇಸರ ಮಾಡಿಕೊಂಡವರಲ್ಲ. ನಮಸ್ತೆ ಎಂದು ತಮ್ಮದೇ ಸ್ಟೈಲ್​ನಲ್ಲಿ ವಿಶ್ ಮಾಡುತ್ತಿದ್ದರು.ನಟಿ ಸಾರಾ ಅಲಿ ಖಾನ್  ಅವರು ಬಾಲಿವುಡ್​​ನಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಅವರು ಸ್ಟಾರ್ ಕಿಡ್ ಎಂಬ ಕಾರಣಕ್ಕೆ ಸುಲಭವಾಗಿ ಚಿತ್ರರಂಗದಲ್ಲಿ ಅವಕಾಶಗಳು ಸಿಕ್ಕವು. ಆದರೆ, ಯಾವ ಚಿತ್ರಗಳೂ ಗೆಲುವು ಕಾಣುತ್ತಿಲ್ಲ. ಈಗ ಸಾರಾ ಅವರು ಮುಖ ಮುಚ್ಚಿಕೊಂಡು ಓಡಾಡುತ್ತಿದ್ದಾರೆ. ಈ ಬಗ್ಗೆ ಅಭಿಮಾನಿಗಳಿಗೆ ಅನುಮಾನ ಮೂಡಿದೆ. ಸಾರಾ ಈ ರೀತಿ ಮಾಡುತ್ತಿರುವುದೇಕೆ ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಸಾರಾ ಅಲಿ ಖಾನ್ ಅವರು ಸೌಮ್ಯ ಸ್ವಭಾವದವರು. ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಪಾಪರಾಜಿಗಳು ಮುತ್ತಿಕೊಳ್ಳುತ್ತಾರೆ. ಇದಕ್ಕೆ ಸಾರಾ ಅಲಿ ಖಾನ್ ಎಂದಿಗೂ ಬೇಸರ ಮಾಡಿಕೊಂಡವರಲ್ಲ. ನಮಸ್ತೆ ಎಂದು ತಮ್ಮದೇ ಸ್ಟೈಲ್​ನಲ್ಲಿ ವಿಶ್ ಮಾಡುತ್ತಿದ್ದರು. ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿ ಕೆಲ ಹೊತ್ತು ಪೋಸ್ ನೀಡಿ ಕಾರಿನ ಒಳಗೆ ತೆರಳುತ್ತಿದ್ದರು. ಆದರೆ, ಈ ಬಾರಿ ಆರೀತಿ ಆಗಿಲ್ಲ. ಸಾರಾ ಮುಖ ಮುಚ್ಚಿಕೊಂಡು ತೆರಳಿದ್ದಾರೆ.

ಮುಂಬೈನಲ್ಲಿ ಸಾರಾ ಅವರು ಫಿಟ್​ನೆಸ್​ ಸೆಷನ್​ಗೆ ತೆರಳಿದ್ದರು. ಅದನ್ನು ಮುಗಿಸಿ ಮರಳಿ ಬಂದಿದ್ದಾರೆ. ಸಾರಾಗಾಗಿ ಅನೇಕ ಪಾಪರಾಜಿಗಳು ಕಾದು ಕೂತಿದ್ದರು. ಆದರೆ ಸಾರಾ ನಮಸ್ತೆಯನ್ನೂ ಮಾಡಿಲ್ಲ, ಕ್ಯಾಮೆರಾ ಕಡೆ ಮುಖವನ್ನೂ ತಿರುಗಿಸಿಲ್ಲ. ಬದಲಿಗೆ ನೇರವಾಗಿ ಹೋಗಿ ಕಾರು ಏರಿದ್ದಾರೆ. ಕಾರು ಏರಿದ ನಂತರವೂ ಮುಖ ಮುಚ್ಚಿಕೊಂಡು ಕುಳಿತಿದ್ದಾರೆ.

ಸಾರಾ ಮುಖಕ್ಕೆ ಅಲರ್ಜಿ ಆಗಿದೆಯೇ? ಇದಕ್ಕಾಗಿ ಅವರು ಮುಖ ಮುಚ್ಚಿಕೊಂಡು ಹೋದರೇ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಸಾರಾ ಅಲಿ ಖಾನ್ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

‘ಧರಣಿ ಮಂಡಲ ಮಧ್ಯದೊಳಗೆ’ ಟ್ರೇಲರ್ ರಿಲೀಸ್ - ಚಿತ್ರ್ಕಕೆ ಹ್ಯಾಟ್ರಿಕ್ ಹೀರೋ, ವಸಿಷ್ಠ ಸಿಂಹ ಸಾಥ್!

Sat Nov 26 , 2022
ಟೀಸರ್, ಹಾಡುಗಳ ಮೂಲಕ ಪ್ರೇಕ್ಷಕರ ಮನದಲ್ಲಿ ಭರವಸೆಯ ಮುದ್ರೆ ಒತ್ತಿರುವ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ಟ್ರೇಲರ್ ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ರನ್ನು ಡಿಜಿಟಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ವೇದಿಕೆಯಲ್ಲಿ ನಾಯಕ ನಟ ವಸಿಷ್ಠ ಸಿಂಹ ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಡಿಸೆಂಬರ್ 2ರಂದು ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ಟ್ರೇಲರ್ ಹೊತ್ತು ಬಂದ ಸಿನಿಮಾ ತಂಡ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.ಸಿನಿಮಾದ ಕ್ಯೂರಿಯಾಸಿಟಿ ಹೊತ್ತ ಟ್ರೇಲರ್ […]

Advertisement

Wordpress Social Share Plugin powered by Ultimatelysocial