ಶಿವಮೊಗ್ಗ-ರಾಣೆಬೆನ್ನೂರು ರೈಲು ಮಾರ್ಗಕ್ಕೆ ಫೆ.27ಕ್ಕೆ ಶಂಕುಸ್ಥಾಪನೆ.

ಶಿವಮೊಗ್ಗ, ಫೆಬ್ರವರಿ 23; ಶಿವಮೊಗ್ಗದ ಸೋಗಾನೆಯಲ್ಲಿ ನಿರ್ಮಾಣವಾಗಿರುವವಿಮಾನ ನಿಲ್ದಾಣ ಉದ್ಘಾಟಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 27ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ.ಈ ಸಂದರ್ಭದಲ್ಲಿ ಅವರು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಹ ಶಂಕು ಸ್ಥಾಪನೆ ಮಾಡಲಿದ್ದಾರೆ.ಶಿವಮೊಗ್ಗ ಮತ್ತು ಹಾವೇರಿ ಜಿಲ್ಲೆಯನ್ನು ಸಂಪರ್ಕಿಸುವ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗಕ್ಕೆ ಸಹ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ಮಾಡಲಿದ್ದಾರೆ. ಕೇಂದ್ರ ಸರ್ಕಾರ 2023-24ನೇ ಸಾಲಿನ ಬಜೆಟ್‌ನಲ್ಲಿ 103 ಕಿ. ಮೀ. ಉದ್ದದ ಈ ರೈಲು ಮಾರ್ಗಕ್ಕೆ 150 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ಯೋಜನೆಗಾಗಿ ಈಗಾಗಲೇ 1,141.29 ಎಕರೆ ಭೂಮಿ ಸ್ವಾಧೀನ ಮಾಡಿಕೊಳ್ಳಲಾಗಿದೆ.ಒಟ್ಟು ಎರಡು ಹಂತದಲ್ಲಿ ಈ ನೂತನ ರೈಲು ಮಾರ್ಗವನ್ನು ನಿರ್ಮಾಣ ಮಾಡಲಾಗುತ್ತದೆ. ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಈ ರೈಲು ಮಾರ್ಗ ಹಾದು ಹೋಗಲಿದೆ. ಈ ಯೋಜನೆಯ ಅಂದಾಜು ವೆಚ್ಚ 1,100 ಕೋಟಿ ರೂಪಾಯಿಗಳು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆಯ ಶೇ 50ರಷ್ಟು ವೆಚ್ಚವನ್ನು ಭರಿಸಲಿವೆ. 100 ಕೋಟಿ ರೂ. ವೆಚ್ಚದಲ್ಲಿ ಶಿವಮೊಗ್ಗದ ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಡಿಪೋ ಸಹ ನಿರ್ಮಾಣವಾಗಲಿದೆ.ಈ ರೈಲು ಯೋಜನೆಯ ಭೂ ಸ್ವಾಧೀನ ವೆಚ್ಚವನ್ನು ಕರ್ನಾಟಕ ಸರ್ಕಾರವೇ ಭರಿಸಲಿದೆ. ಮೂರು ಜಿಲ್ಲೆಗಳ 60 ಗ್ರಾಮಗಳ ಮೂಲಕ ಈ ರೈಲ್ವೆ ಮಾರ್ಗ ಸಾಗಲಿದೆ. ಕೋಟೆಗಂಗೂರು ಆರಂಭಿಕ ನಿಲ್ದಾಣವಾಗಿದೆ. ಈ ಮಾರ್ಗದಲ್ಲಿ ವಿದ್ಯುದೀಕರಣವೂ ಪೂರ್ಣಗೊಂಡ ಬಳಿಕ ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಹಳಿಗಳ ಅಭಿವೃದ್ಧಿ ಮಾಡಲಾಗುತ್ತದೆ ಎಂದು ನೈಋತ್ಯ ರೈಲ್ವೆಯ ಅಧಿಕಾರಿಗಳು ಹೇಳಿದ್ದಾಎರಡು ಹಂತದಲ್ಲಿ ಕಾಮಗಾರಿ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲು ಮಾರ್ಗದ ಕಾಮಗಾರಿ ಎರಡು ಹಂತದಲ್ಲಿ ನಡೆಯಲಿದೆ. ಶಿವಮೊಗ್ಗ-ಶಿಕಾರಿಪುರ ನಡುವಿನ 44 ಕಿ. ಮೀ. ಮಾರ್ಗದ ಕಾಮಗಾರಿ ಮೊದಲು ನಡೆಯಲಿದೆ. ಇದಕ್ಕಾಯೇ 616 ಎಕರೆ ಭೂ ಸ್ವಾಧೀನ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. 2025ರ ಡಿಸೆಂಬರ್‌ ವೇಳೆಗೆ ಈ ಮಾರ್ಗ ನಿರ್ಮಾಣ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.ನಿರ್ಮಾಣ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.ಈ ರೈಲು ಮಾರ್ಗ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮೂಲಕ ಹಾದು ಹೋಗಲಿವೆ. ಒಟ್ಟು 12 ನಿಲ್ದಾಣಗಳನ್ನು ಈ ಮಾರ್ಗ ಒಳಗೊಂಡಿದೆ. ಶಿವಮೊಗ್ಗ-ಶಿಕಾರಿಪುರ ನಡುವಿನ ಮಾರ್ಗ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಯೋಜನೆಯ ಶಂಕುಸ್ಥಾಪನೆ ಮುಗಿದ ಬಳಿಕ ನಿರ್ಮಾಣ ಕಾಮಗಾರಿಗೆ ಚಾಲನೆ ಸಿಗಲಿದೆ. 2021ರಲ್ಲಿಯೇ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ ಭೂ ಸ್ವಾಧೀನ ವಿಚಾರದ ಗೊಂದಲ, ಕೋವಿಡ್ ಪರಿಸ್ಥಿತಿ ಕಾರಣ ರೈಲು ಮಾರ್ಗ ಕಾಮಗಾರಿ ಪ್ರಾರಂಭವಾಗಲಿಲ್ಲ.ಈ ರೈಲು ಯೋಜನೆ ಶಿಕಾರಿಪುರದ ಶಾಸಕ, ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕನಸಿನ ಯೋಜನೆಯಾಗಿದೆ. 2019ರಲ್ಲಿ ಅವರು ಮುಖ್ಯಮಂತ್ರಿಯಾಗಿದ್ದಾಗ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ್ ಅಂಗಡಿ ಮೂಲಕ ಯೋಜನೆಗೆ ಒಪ್ಪಿಗೆ ಪಡೆದರು. ಕೋವಿಡ್ ಸಮಯದಲ್ಲಿ ಸುರೇಶ್ ಅಂಗಡಿ ನಿಧನ ಹೊಂದಿದರು. ಬಳಿಕ ಯಡಿಯೂರಪ್ಪ ಸಹ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದರು. ಇದರಿಂದಾಗಿ ಯೋಜನೆ ವಿಳಂಬವಾಯಿತು.ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ರೈಲು ಮಾರ್ಗದ ಎರಡನೇ ಹಂತದ ಕಾಮಗಾರಿ ಶಿಕಾರಿಪುರ-ರಾಣೆಬೆನ್ನೂರು ನಡುವೆ ನಡೆಯಲಿದೆ. ಈ ಸಂಪೂರ್ಣ ರೈಲು ಮಾರ್ಗದಲ್ಲಿ 12 ರೈಲು ನಿಲ್ದಾಣಗಳು, 22 ದೊಡ್ಡ ಮತ್ತು 48 ಚಿಕ್ಕ ಸೇತುವೆಗಳು ಬರಲಿವೆ. ರೈಲ್ವೆ ಕಾಮಗಾರಿಗಾಗಿ ವಶಪಡಿಸಿಕೊಳ್ಳುವ ರೈತ ಭೂಮಿಗೆ ಪರಿಹಾರ ನೀಡುವ ವಿಚಾರದಲ್ಲಿ ಗೊಂದಲ ಉಂಟಾಗಿತ್ತು. ಈ ವಿವಾದ ಕೋರ್ಟ್‌ ಮೆಟ್ಟಿಲೇರಿತ್ತು.ನಿಲ್ದಾಣಗಳ ವಿವರ ಈ ರೈಲು ಯೋಜನೆಯಲ್ಲಿ ಕೋಟೆಗಂಗೂರು, ರಾಮನಗರ, ಮಲ್ಲಾಪುರ, ಕೊರ್ಲಹಟ್ಟಿ, ಶಿಕಾರಿಪುರ, ಕಿಟ್ಟದಹಳ್ಳಿ, ಮಾಸೂರು, ರಟ್ಟೀಹಳ್ಳಿ, ದಂಡಿಗೆಹಳ್ಳಿ, ಹಲಗೇರಿ, ರಾಣೆಬೆನ್ನೂರು ಸೇರಿ 12 ನಿಲ್ದಾಣಗಳಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಉದ್ಯಮಿಗಳೆಂದರೆ ರಿಯಲ್ ಎಸ್ಟೇಟ್ ಅಲ್ಲ.

Thu Feb 23 , 2023
  ಉದ್ಯಮಿಗಳೆಂದರೆ ರಿಯಲ್ ಎಸ್ಟೇಟ್ ಅಲ್ಲ. ಸಬ್ಸಿಡಿ ಪಡೆಯುವುದಲ್ಲ. ಉದ್ಯೋಗಗಳನ್ನು ಸೃಷ್ಠಿಸುವಂತಾಗ ಬೇಕು,ಸರ್ಕಾರದಲ್ಲಿ ಕೈಗಾರಿಕೆಗಳ ಅಭಿವೃದ್ದಿ ಹಲವಾರು ಯೋಜನೆಗಳಿವೆ ಅದರೆ ಇವುಗಳನ್ನು ನಾವು ಎಷ್ಟು ಮಾತ್ರ ಸದ್ಬಳಿಸಿ ಕೊಳ್ಳುತ್ತಿವೆ ಎಂಬುದರ ಕುರಿತು ಚಿಂತಿಸುವಂತಾಗ ಬೇಕು ಎಂದು ಸಹಕಾರ ಸಂಘಗಳ ಚುನಾವಣಾ ಆಯುಕ್ತ ಎನ್.ಸಿ.ಮುನಿಸ್ವಾಮಿ ವಹಿಸಿ ಮಾತನಾಡಿದರು.ದಲಿತ್ ಇಂಡಿಯನ್ ಚೆಂಬರ್ ಆಫ್ ಕಾಮರ್‍ಸ್ ಅಂಡ್ ಇಂಡಸ್ಟ್ರಿವತಿಯಿಂದ ನಗರದ ಸಾಯಿಧಾಮ್ ಹೋಟೆಲ್‌ನಲ್ಲಿ ಹಮ್ಮಿಕೊಂಡಿದ್ದ ದಲಿತ ಉದ್ಯಮಿದಾರರ ಜಿಲ್ಲಾ ಸಮಾವೇಶವನ್ನು ಅಧ್ಯಕ್ಷತೆವಹಿಸಿ ಅವರು ಮಾತನಾಡಿಇಂದಿನ […]

Advertisement

Wordpress Social Share Plugin powered by Ultimatelysocial