ಸಿಎಂ ಬದಲಾವಣೆ ಬಗ್ಗೆ ಮಾತನಾಡಿದರೆ ಕ್ರಮದ ಎಚ್ಚರಿಕೆ: ಯತ್ನಾಳ

 

ಹುಬ್ಬಳ್ಳಿ: ರಾಜ್ಯದಲ್ಲಿ ಯಾವುದೇ ರೀತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲ. ಯಾರಾದರೂ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಮಾತನಾಡಿದರೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಎಚ್ಚರಿಕೆಯನ್ನು ಕೇಂದ್ರ ಸಚಿವರು ಹಾಗೂ ಉಸ್ತುವಾರಿ ಅರುಣಸಿಂಗ್ ಅವರು ನೀಡಿದ್ದಾರೆ ಎಂದು ಶಾಸಕ ಬಸನಗೌಡ ಯತ್ನಾಳ ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಯಾರೇ ಮಾತನಾಡಿದರು. ಅವರ ವಿರುದ್ಧ ಸೂಕ್ತ ಕ್ರಮಗಳನ್ನು ಜರುಗಿಸುವ ಬಗ್ಗೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಹಾಗೂ ರಾಜ್ಯ ಉಸ್ತುವಾರಿ ಅರುಣಸಿಂಗ್ ಹೇಳಿದ್ದಾರೆ. ಈ ಬಗ್ಗೆ ಯಾರೇ ಮಾತನಾಡಿದರು ಕ್ರಮ ಜರುಗುವುದು ನಿಶ್ಚಿತ. ಆದರೇ ಯಾರಿಗೂ ಕೂಡ ಕತ್ತು ಹಿಡಿದು ಹೊರಹಾಕುವಂತ ಪ್ರಮೇಯವೇ ಇಲ್ಲ ಎಂದರು.

ಕೆಲವು ಆಕಾಂಕ್ಷಿಗಳಿಗೆ ನಿರಾಶೆ ಎಂಬುವಂತ ಮಾಧ್ಯಮ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಕೆಲವರಿಗೆ ನಿರಾಶೆಯಾಗಿದೆ. ಯಾರಿಗೆ ಅಂತ ನೇರವಾಗಿ ಹೇಳಲು ಆಗುವುದಿಲ್ಲ. ಕೆಲವರು ಬೆಳಗಾವಿ ಅಧಿವೇಶನ ವೇಳೆಯಲ್ಲಿ ಸುವರ್ಣಸೌಧದಲ್ಲಿ ಓಡಾಡಿದ್ದಾರೆ ಅವರಿಗೆಲ್ಲ ನಿರಾಶೆಯಾಗಿದೆ ಎಂದು ಅವರು ಹೇಳಿದರು.

ಮಾಜಿ ಸಿಎಂ ಯಡಿಯೂರಪ್ಪ ಕಾರ್ಯಕ್ರಮ ಗೈರಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು ಯಡಿಯೂರಪ್ಪ ಅವರು ಖಾಸಗಿ ಕಾರ್ಯಕ್ರಮ ಹೋಗಿದ್ದಾರೆ ಎಂದು ಅವರು ಹೇಳಿದರು.

ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚೆಯಾಗಿದೆ. ಅಲ್ಲದೇ ಇಂದು ಯಾವುದೇ ರೀತಿಯಲ್ಲಿ ಮಹತ್ವದ ಚರ್ಚೆಗಳಾಗಿಲ್ಲ ಎಂದು ಅವರು ಹೇಳಿದರು.̤

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

250 ಕೋಟಿ ದುಡ್ಡು, ಸಮಾಜವಾದಿ ಪಕ್ಷ ಮತ್ತು ಮೋದಿ!

Tue Dec 28 , 2021
ಉತ್ತರಪ್ರದೇಶದ ಕಾನ್​ಪುರ್​ನಲ್ಲಿ ಇತ್ತೀಚೆಗೆ ಸಿಕ್ಕ ದಾಖಲೆ ಇಲ್ಲದ ಸುಮಾರು 250 ಕೋಟಿ ಕ್ಯಾಶ್​ ಬಗ್ಗೆ ಇವತ್ತು ಪ್ರಧಾನಿ ಮೋದಿ ಮಾತನಾಡಿದ್ದಾರೆ. ನಮ್ಮ ರಾಜಕೀಯ ವಿರೋಧಿಗಳು ಎಲ್ಲವನ್ನ ತಾವು ಮಾಡಿದ್ದು, ತಾವು ಮಾಡಿದ್ದು ಅಂತ ಕ್ರಡಿಟ್​ ತಗೋತಾರೆ. ಹಾಗಿದ್ರೆ ಇಲ್ಲಿ ಸಿಕ್ಕಿರೋ ಬಾಕ್ಸ್​​ಗಟ್ಟಲೇ ನೋಟನ್ನ ಕೂಡ ಅವರದ್ದೇ ಅಂತ ಹೇಳ್ತಿಲ್ಲ, ಈ ಕ್ರೆಡಿಟ್​ ಅನ್ನ ತಗೋತಿಲ್ಲ. ಈಗ ಬಾಯಿಗೆ ಬೀಗ ಹಾಕ್ಕೊಂಡು ಸುಮ್ಮನೆ ಕೂತಿದ್ದಾರೆ ಅಂತ ಪ್ರಧಾನಿ ಮೋದಿ ಕಾನ್​ಪುರ್​ನಲ್ಲಿ ಕುಟುಕಿದ್ದಾರೆ. […]

Advertisement

Wordpress Social Share Plugin powered by Ultimatelysocial