ಹೆಚ್ಚುವರಿ ಶುಲ್ಕ ವಸೂಲಿ ಮಾಡಿದ್ರೆ ಕ್ರಮ

ಯಾವುದೇ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಪೋಷಕರಿಂದ ಹೆಚ್ಚುವರಿ ಶುಲ್ಕ ವಸೂಲಿ ಮಾಡಿರುವ ದೂರುಗಳು ಬಂದರೆ ಕಠಿಣ ಕ್ರಮ ಜರುಗಿಸುವುದಾಗಿ ಸಚಿವ ಸುರೇಶ್‍ಕುಮಾರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುವರಿ ಶುಲ್ಕ ಸಂಗ್ರಹ ಮಾಡಬಾರದು ಎಂದು ಶಿಕ್ಷಣ ಇಲಾಖೆ ಒಂದೂವರೆ ತಿಂಗಳ ಹಿಂದೆಯೇ ಆದೇಶ ಹೊರಡಿಸಿದೆ. ಈವರೆಗೂ ಯಾವ ಶಾಲೆಯ ವಿರುದ್ಧವೂ ಪೋಷಕರು ದೂರು ನೀಡಿಲ್ಲ. ಒಂದು ವೇಳೆ ದೂರು ಕೇಳಿ ಬಂದಿದ್ದೇಯಾದರೆ ಸರ್ಕಾರ ಮುಲಾಜಿಲ್ಲದೆ ಕ್ರಮ ಜರುಗಿಸಲಿದೆ. ಸಮವಸ್ತ್ರದ ಜೊತೆಯಲ್ಲಿ ಮಾಸ್ಕ್ ಗಳನ್ನು ಖರೀದಿ ಮಾಡಬೇಕೆಂದು ಕೆಲವು ಶಾಲೆಗಳು ಒತ್ತಡ ಹೇರುತ್ತಿರುವ ಬಗ್ಗೆ ಪ್ರತಿಕ್ರಿಯಿಸುತ್ತಿರುವ ಅವರು, ಡೆಲ್ಲಿ ಪಬ್ಲಿಕ್ ಸ್ಕೂಲ್‍ನಲ್ಲಿ ಈ ರೀತಿ ಒತ್ತಡ ಹೇರಿದ ದೂರು ಬಂದಿತ್ತು. ಅದಕ್ಕೆ ಶೋಕಾಸ್ ನೋಟಿಸ್ ಕೂಡ ನೀಡಲಾಗಿದೆ. ಯಾವುದೇ ಶಾಲೆಗಳು ಬಲವಂತವಾಗಿ ಮಾಸ್ಕ್ ಮಾರಾಟ ಮಾಡಲು ಪ್ರಯತ್ನಿಸಿದರೆ ಪೋಲೀಸರಿಗೆ ದೂರು ನೀಡಲಾಗುವುದು. ಈ ಕುರಿತಂತೆ ಶೀಘ್ರವೇ ಸರ್ಕಾರ ಆದೇಶವೊಂದನ್ನು ಹೊರಡಿಸಲಿದೆ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

Next Post

ಪೊಲೀಸ್ ಸೋಗಿನಲ್ಲಿ ಕಿಡ್ನಾಪ್

Thu Jun 11 , 2020
ಪೊಲೀಸರು ಎಂದು ಹೇಳಿಕೊಂಡು ದುಷ್ಕರ್ಮಿಗಳು ಜೂನ್ 9 ರಂದು ಮೂವರನ್ನು ಕಿಡ್ನಾಪ್ ಮಾಡಿದ್ದಾರೆ. ಬೊಮ್ಮನಹಳ್ಳಿಯಲ್ಲಿ ಜಹೀರುಲ್ಲಾ ಹುಸೇನ್​ನ್ನು ಕಿಡ್ನಾಪ್ ಮಾಡಿದರೆ,  ಮೈಕೋ ಲೇ ಔಟ್‌ನಲ್ಲಿ ಖಾಬುಲ್ ಅಹ್ಮದ್ ಹಾಗೂ ಮೆಹಬೂಬ್​​ನನ್ನು ಕಿಡ್ನಾಪ್ ಮಾಡಿದ್ದಾರೆ. ಕಿಡ್ನಾಪ್ ಮಾಡಿದ ನಂತರ ಮೈಕೋ ಲೇ ಔಟ್ ಕಟ್ಟಡದಲ್ಲಿ ಇರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಹುಸೇನ್ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಬಳಿಕ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಶಿ ಹಾಗೂ ಎಸಿಪಿಗಳಾದ […]

Advertisement

Wordpress Social Share Plugin powered by Ultimatelysocial