ಬಿಲ್​ ಗೇಟ್ಸ್​ ಪುತ್ರಿಯ​ ವಿವಾಹ: ಈಜಿಪ್ಟಿನ ಕುದುರೆ ಸವಾರನ ಕೈಹಿಡಿದ ಜೆನ್ನಿಫರ್​

ನ್ಯೂಯಾರ್ಕ್: ಜಗತ್ತಿನ ನಾಲ್ಕನೇ ಅತಿ ಶ್ರೀಮಂತ ವ್ಯಕ್ತಿಯಾದ ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್ಸ್​ರ ಹಿರಿಯ ಪುತ್ರಿ ಜೆನ್ನಿಫರ್​ ಗೇಟ್ಸ್​ ಶನಿವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನ್ಯೂಯಾರ್ಕ್​ನ ವೆಸ್ಟ್​ಚೆಸ್ಟರ್ ಕೌಂಟಿಯಲ್ಲಿ ನಡೆದ ಆಪ್ತರನ್ನೊಳಗೊಂಡ ಸಮಾರಂಭದಲ್ಲಿ, ಜೆನ್ನಿಫರ್​, ಈಜಿಪ್ಟಿನ ಕುದುರೆ ಸವಾರಿ ಆಟಗಾರ 30 ವರ್ಷದ ನಯೇಲ್ ನಸ್ಸರ್​ ಕೈಹಿಡಿದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬಿಲ್​ ಗೇಟ್ಸ್​ ಮತ್ತು ಅವರ ಮಾಜಿ ಪತ್ನಿ ಮೆಲಿಂಡಾ ಒಟ್ಟಿಗೆ ಜೆನ್ನಿಫರ್​ರನ್ನು ವಿವಾಹ ವೇದಿಕೆಗೆ ಕರೆದುಕೊಂಡುಹೋದರು. ಸಮಾರಂಭದಲ್ಲಿ ಕುಟುಂಬಗಳ ಸದಸ್ಯರೂ ಸೇರಿದಂತೆ ಸುಮಾರು 300 ಜನರು ಭಾಗವಹಿಸಿದ್ದರು ಎಂದು ಅಮೆರಿಕದ ಪತ್ರಿಕೆಗಳು ವರದಿ ಮಾಡಿವೆ. ಆದರೆ ಈ ವಿವಾಹದ ಯಾವುದೇ ಚಿತ್ರಗಳು ಇನ್ನೂ ಹೊರಬಿದ್ದಿಲ್ಲ.

25 ವರ್ಷ ವಯಸ್ಸಿನ ಜೆನ್ನಿಫರ್​ ಗೇಟ್ಸ್​ ಬಾಯ್​ ಫ್ರೆಂಡ್​ ನಯೇಲ್ ನಸ್ಸರ್​ರೊಂದಿಗಿನ ಎಂಗೇಜ್​ಮೆಂಟನ್ನು 2020ರ ಜನವರಿಯಲ್ಲಿ ಘೋಷಿಸಿದ್ದರು. ನಿನ್ನೆಯ ವಿವಾಹದ ಸಂದರ್ಭದಲ್ಲಿ ಪಾರಂಪರಿಕ ಫಾದರ್​-ಡಾಟರ್​ ಡ್ಯಾನ್ಸ್​ನಲ್ಲಿ ಜೆನ್ನಿಫರ್ ಮತ್ತು ಬಿಲ್​ ಗೇಟ್ಸ್​ ಎಲ್ಟನ್​ ಜಾನ್​ರ ‘ಕ್ಯಾನ್ ಯು ಫೀಲ್ ದ ಲವ್ ಟುನೈಟ್’​ ಹಾಡಿಗೆ ಹೆಜ್ಜೆ ಹಾಕಿದರು ಎನ್ನಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

HSR ಬಡಾವಣೆ : ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿ.ಎಂ. ದಿಢೀರ್‌ ಭೇಟಿ

Mon Oct 18 , 2021
ಬೆಂಗಳೂರು: ಒಂದು ವಾರದಿಂದ ನಗರದಲ್ಲಿ ಸುರಿದ ಭಾರಿ ಮಳೆಯಿಂದ ನಗರದ ಬೊಮ್ಮನಹಳ್ಳಿ ವಲಯದ ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಪ್ರವಾಹ ಉಂಟಾದ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ದಿಢೀರ್‌ ಭೇಟಿ ನೀಡಿದರು. ಎಚ್‌ಎಸ್‌ಆರ್‌ ಬಡಾವಣೆಯ ಅಗರ ಕೆರೆ ಆಸುಪಾಸಿನಲ್ಲಿ ಮನೆಗಳಿಗೆ ನೀರು ನುಗ್ಗಿರುವ ತಗ್ಗುಪ್ರದೇಶಗಳಿಗೆ ಭೇಟಿ ನೀಡುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಮುಖ್ಯಮಂತ್ರಿ, ‘ನಗರದಲ್ಲಿ ಕೆಲವು ಕಡೆ ಪ್ರವಾಹ ಬಂದು ಜನವಸತಿಗಳಿಗೆಲ್ಲ ಸಾಕಷ್ಟು ತೊಂದರೆ ಆಗಿದೆ. ಅತಿ ಹೆಚ್ಚು ಮಳೆಯಾದ […]

Advertisement

Wordpress Social Share Plugin powered by Ultimatelysocial