ಭಾರತದ ಮೇಲೆ ಅಮೆರಿಕ ನಿರ್ಬಂಧ..!!

ರಷ್ಯಾದಿಂದ ಎಸ್​ 400 ಕ್ಷಿಪಣಿ ವ್ಯವಸ್ಥೆ ಖರೀದಿ ಒಪ್ಪಂದ ಮಾಡ್ಕೊಂಡಿರೋ ಭಾರತದ ಮೇಲೆ CAATSA ಅಂದ್ರೆ ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್​​ ಥ್ರೂ ಸ್ಯಾಂಕ್ಷನ್ ಆಕ್ಟ್​​ ಅಡಿಯಲ್ಲಿ ನಿರ್ಬಂಧ ಹೇರಬಾರದು ಅಂತ ಸೆನೆಟರ್ಗಳು ಆಗ್ರಹಿಸಿದ್ದಾರೆ ಬಗ್ಗೆ ಸೀನಿಯರ್ ಸೆನೆಟರ್​​ಗಳಾದ ಮಾರ್ಕ್ವಾರ್ನರ್ ಮತ್ತು ಜಾನ್ ಕಾರ್ನಿನ್​​​​ ಅಮೆರಿಕ ಅಧ್ಯಕ್ಷ ಜೋ ಬೈಡೆನ್​​ಗೆ ಪತ್ರ ಬರೆದಿದ್ದಾರೆ. 2019 ಅಕ್ಟೋಬರ್ನಲ್ಲಿ ಭಾರತರಷ್ಯಾ ನಡುವೆ 543 ಕೋಟಿ ಡಾಲರ್​​ ಮೊತ್ತದಲ್ಲಿ 5 ಎಸ್​ 400 ಖರೀದಿಸುವ ಸಲುವಾಗಿ ಒಪ್ಪಂದ ಏರ್ಪಟ್ಟಿತ್ತು. ಆದ್ರೆ ಇದ್ರಿಂದ ಅಮೆರಿಕ ಭಾರತದ ಮೇಲೆ CAATSA ಅಡಿಯಲ್ಲಿ ನಿರ್ಬಂಧ ವಿಧಿಸಬಹುದು ಅಂತ ವರದಿಯಾಗಿತ್ತು. ಸೋವಿಯತ್ ಒಕ್ಕೂಟ ಇದ್ದಾಗಿನಿಂದಲೂ ಭಾರತ ಅಲ್ಲಿಂದ ಶಸ್ತ್ರಾಸ್ತ್ರ ಖರೀದಿಸುತ್ತಾ ಬಂದಿದೆ. ಆದ್ರೆ ಭಾರತ ಕಳೆದ ಹಲವು ವರ್ಷಗಳಲ್ಲಿ ರಷ್ಯಾದಿಂದ ಶಸ್ತ್ರಾಸ್ತ್ರ ಆಮದನ್ನು ಕಡಿಮೆ ಮಾಡಲು ಹಲವು ಹೆಜ್ಜೆ ಇಟ್ಟಿದೆ. ಹೀಗಾಗಿ ಭಾರತದ ಮೇಲೆ ನಿರ್ಬಂಧಗಳನ್ನು ಹೇರಬಾರದು ಅಂತ ಸೆನೆಟರ್​​ಗಳು ಉಲ್ಲೇಖಿಸಿದ್ದಾರೆ.

‌ ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಹಿಳೆಯರ ಮೇಲೆ ಟ್ರಕ್‌ ಹರಿದು ಮೂವರ ಸಾವು..!!

Thu Oct 28 , 2021
ದೆಹಲಿ-ಹರಿಯಾಣ ಗಡಿಯಲ್ಲಿ ರೈತರ ಪ್ರತಿಭಟನಾ ಸ್ಥಳದ ಬಳಿ ವೇಗವಾಗಿ ಬಂದ ಟ್ರಕ್ಕೊಂದು ಡಿವೈಡರ್ ಮೇಲೆ ಹರಿದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿದ ಘಟನೆ ನಡೆದಿದೆ. ಟ್ರಕ್ ಢಿಕ್ಕಿ ಹೊಡೆದಾಗ ಮಹಿಳೆಯರು ಡಿವೈಡರ್ ಮೇಲೆ ಕುಳಿತು ಆಟೋ ರಿಕ್ಷಾಕ್ಕಾಗಿ ಕಾಯುತ್ತಿದ್ದರು ಎನ್ನಲಾಗಿದೆ. ಅಪಘಾತದ ಸ್ಥಳದಿಂದ ಟ್ರಕ್ ಚಾಲಕ ಓಡಿಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟರೆ, ಒಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಮಹಿಳೆಯರು […]

Advertisement

Wordpress Social Share Plugin powered by Ultimatelysocial