ಓವರ್ ದಿ ಟಾಪ್ (ಓಟಿಟಿ) ವೇದಿಕೆ ದಿನಕಳೆದಂತೆ ಹಿರಿದಾಗುತ್ತಿದೆ. ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತ ಎಲ್ಲೆಡೆ ಹಬ್ಬುತ್ತಿದೆ. ಸಿನಿಮಾದ ಸ್ಟಾರ್ ಕಲಾವಿದರೂ ಇದರತ್ತ ಆಕರ್ಷಿತರಾಗುತ್ತಿದ್ದಾರೆ. ಬಾಲಿವುಡ್ನಲ್ಲಂತೂ ಎ ಗ್ರೇಡ್ ನಟ, ನಟಿಯರಿಗೂ ವೆಬ್ಸರಣಿ ಇಷ್ಟವಾಗುತ್ತಿವೆ. ದಕ್ಷಿಣ ಭಾರತದ ಚಿತ್ರರಂಗದಲ್ಲೂ ಅದರ ಘಮ ಕಮ್ಮಿ ಏನಿಲ್ಲ. ಇದೀಗ ಆ ವೇದಿಕೆ ಪ್ರವೇಶಿಸಲು ನಟಿ ಸಾಯಿ ಪಲ್ಲವಿ ಸಿದ್ಧರಾಗುತ್ತಿದ್ದಾರೆ. ಅವರೊಂದಿಗೆ ಬಹುಭಾಷಾ ನಟ ಪ್ರಕಾಶ್ ರೈ ಸಹ ಕೈ ಜೋಡಿಸಿದ್ದಾರೆ. ಅಂದಹಾಗೆ, ತಮಿಳಿನಲ್ಲಿ ಸಿದ್ಧವಾಗಲಿರುವ ಈ ವೆಬ್ಸಿರೀಸ್ನಲ್ಲಿ ಪ್ರಕಾಶ್ ರೈ ಮತ್ತು ಸಾಯಿ ಪಲ್ಲವಿ ಅಪ್ಪ-ಮಗಳಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ವೆಬ್ ಸರಣಿ ಇದಾಗಿರಲಿದ್ದು, ಖ್ಯಾತ ನಿರ್ದೇಶಕ ವೆಟ್ರಿಮಾರನ್ ಆಕ್ಷನ್ ಕಟ್ ಹೇಳಲಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಈ ವೆಬ್ಸರಣಿ ಬಗ್ಗೆ ಯಾವುದೇ ಮಾಹಿತಿಯನ್ನು ನಿರ್ದೇಶಕರು ಹೇಳಿಕೊಂಡಿರಲಿಲ್ಲ. ಇದೀಗ ಶೂಟಿಂಗ್ಗೆ ಅನುಮತಿ ಸಿಕ್ಕಿರುವ ಬೆನ್ನಲ್ಲೇ ಇನ್ನು ಕೆಲ ದಿನಗಳಲ್ಲಿ ಅಧಿಕೃತ ಫೋಷಣೆ ಮಾಡಲಿದ್ದಾರಂತೆ.
ಅಪ್ಪ ಮಗಳಾಗಿ ಪ್ರಕಾಶ್ ರೈ-ಸಾಯಿ ಪಲ್ಲವಿ
Please follow and like us: