ಕೊಲೆ ಆರೋಪ ದಾಖಲಿಸಲು ಕೇಂದ್ರ ಸೂಚನೆ.

 

ವದೆಹಲಿ ಜನವರಿ 13: ದೆಹಲಿಯ ಹಿಟ್ ಅಂಡ್ ಡ್ರ್ಯಾಗ್ ಪ್ರಕರಣದಲ್ಲಿ 20 ವರ್ಷದ ಯುವತಿ ಸಾವನ್ನಪ್ಪಿದ್ದು ಐವರ ವಿರುದ್ಧ ಕೊಲೆ ಆರೋಪವನ್ನು ದಾಖಲಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯ ನಿರ್ದೇಶನ ನೀಡಿದೆ ಎಂದು ಮೂಲಗಳು ಎನ್‌ಡಿಟಿವಿಗೆ ತಿಳಿಸಿವೆ. ಆ ರಾತ್ರಿ ಪ್ರತ್ಯಕ್ಷದರ್ಶಿಗಳಿಂದ ಬಂದ ಅನೇಕ ಕರೆಗಳನ್ನು ನಿರ್ಲಕ್ಷಿಸಿದ ಪೊಲೀಸರನ್ನು ತಕ್ಷಣವೇ ಅಮಾನತುಗೊಳಿಸುವಂತೆ ಸಚಿವಾಲಯವು ಹೇಳಿದೆ ಎಂದು ಮೂಲಗಳು ತಿಳಿಸಿವೆ.

ಹೊಸ ವರ್ಷದಂದು ನಡೆದ ಆಘಾತಕಾರಿ ಪ್ರಕರಣದ ಕುರಿತು ತಾನು ಆದೇಶಿಸಿದ್ದ ತನಿಖೆಯ ವರದಿಯನ್ನು ಸ್ವೀಕರಿಸಿದ ನಂತರ ಸಚಿವಾಲಯದ ಈ ಸೂಚನೆಗಳನ್ನು ನೀಡಿದೆ ಎನ್ನಲಾಗುತ್ತಿದೆ.

ಐವರು ಪಾನಮತ್ತರು ಹೊಸ ವರ್ಷದಂದು ಅಂಜಲಿ ಸಿಂಗ್ ಅವರ ಸ್ಕೂಟಿಗೆ ಡಿಕ್ಕಿ ಹೊಡೆದರು. ಅಂಜಲಿ ದೇಹ ಕಾರಿಗೆ ಸಿಕ್ಕಿಕೊಂಡಾಗ ಅವರು ಕೆಲ ಕಿ.ಮೀ ವರೆಗೂ ಕಾರನ್ನೂ ಚಲಿಸಿದ್ದಾರೆ. ಘಟನೆಯ ನಂತರ ಆಕೆಯ ತಲೆ ಒಡೆದು ಆಕೆಯ ಚರ್ಮ ಸುಲಿದಿದೆ. ಆಕೆಯೊಂದಿಗೆ ಇದ್ದ ಆಕೆಯ ಸ್ನೇಹಿತೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಮರಣೋತ್ತರ ಪರೀಕ್ಷೆಯಲ್ಲಿ ಯುವತಿ ಅಂಜಲಿ ಭೀಕರ ಗಾಯಗಳಿಂದ ಸಾವನ್ನಪ್ಪಿದ್ದಾರೆ.

ದೆಹಲಿ ಹಿಟ್ ಆಂಡ್ ಡ್ರ್ಯಾಗ್ ಕೇಸ್ಹೊಸ ವರ್ಷದ ಮುನ್ನಾದಿನದ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು. ಆದರೆ ಈ ಬಗ್ಗೆ ಮಾಹಿತಿ ನೀಡಲು ಪ್ರತ್ಯಕ್ಷ ದರ್ಶಿ ಮಾಡಿದ ಹಲವಾರು ಕರೆಗಳಿಗೆ ಸ್ಪಂದಿಸಲಿಲ್ಲ. ಸಾರ್ವಜನಿಕರ ತೀವ್ರ ಆಕ್ರೋಶದ ನಡುವೆಯೇ ಕೇಂದ್ರ ಗೃಹ ಸಚಿವಾಲಯ ತನಿಖೆಗೆ ಆದೇಶಿಸಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ರಾಕೇಶ್ ಶರ್ಮಾ ಅಂತರಿಕ್ಷಯಾನ ಮಾಡಿದ ಪ್ರ್ರಥಮ ಭಾರತೀಯರಾಗಿ ಖ್ಯಾತರಾದವರು

Fri Jan 13 , 2023
ಅಂತರಿಕ್ಷಯಾನ ಮಾಡಿದ ಪ್ರ್ರಥಮ ಭಾರತೀಯರಾಗಿ ಖ್ಯಾತರಾದವರು ರಾಕೇಶ್ ಶರ್ಮಾ. ಅವರು 1984 ವರ್ಷದ ಎಪ್ರಿಲ್ 3 ರಂದು ಸೋವಿಯತ್ ಅಂತರಿಕ್ಷ ನೌಕೆ ಸೋಯಜ್ ಟಿ-11 ರಲ್ಲಿ ಪಯಣಿಸಿ  ಸುಮಾರು 8 ದಿನ ಅಂತರಿಕ್ಷದಲ್ಲಿ ಕಳೆದರು.ರಾಕೇಶ್ ಶರ್ಮಾ 1949ರ ಜನವರಿ 13ರಂದು ಪಂಜಾಬಿನ ಪಟಿಯಾಲಾ ನಗರದಲ್ಲಿ ಜನಿಸಿದರು. ಭಾರತೀಯ ವಾಯು ಸೇನೆಯಲ್ಲಿ ಪರೀಕ್ಷಕ ವೈಮಾನಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸ್ಕ್ವಾಡ್ರನ್ ಲೀಡರ್ ರಾಕೇಶ್ ಶರ್ಮಾ 1982 ವರ್ಷದ ಸೆಪ್ಟೆಂಬರ್ 20 ರಂದು ಅಂತರಿಕ್ಷ […]

Advertisement

Wordpress Social Share Plugin powered by Ultimatelysocial