ಶಾಲಿನಿ – ಅಜಿತ್ ಮಧ್ಯೆ ಪ್ರೀತಿ ಅರಳೋಕೆ ಕಾರಣವಾಗಿದ್ದು ಒಂದು ಆಕ್ಸಿಡೆಂಟ್!.

 

ತಮಿಳು ಸಿನಿಮಾ ರಂಗದ ಟಾಪ್ ನಟರ ಪೈಕಿ ಅಜಿತ್ ಕೂಡ ಒಬ್ಬರು. ವಯಸ್ಸು 50 ದಾಟಿದ್ದರೂ ನಟ ಅಜಿತ್‌ಗೆ ಕಾಲಿವುಡ್‌ನಲ್ಲಿ ಡಿಮ್ಯಾಂಡ್ ಕೊಂಚ ಕೂಡ ಕಡಿಮೆ ಆಗಿಲ್ಲ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಅಜಿತ್ ಬಿಜಿಯಿದ್ದಾರೆ. ಎಷ್ಟೇ ಬಿಜಿಯಿದ್ದರೂ, ತಿಂಗಳಿಗೆ 15 ದಿನ ಮಿಸ್ ಮಾಡದೆ ಕುಟುಂಬದ ಜೊತೆಗೆ ಅಜಿತ್ ಕಾಲ ಕಳೆಯುತ್ತಾರೆ. ಅದಕ್ಕೆ ಕಾರಣ.. ಪತ್ನಿ ಶಾಲಿನಿಗೆ ಅವರು ಮಾಡಿರುವ ಪ್ರಾಮಿಸ್..!
ಹೌದು.. ‘’ಎಷ್ಟೇ ಸಿನಿಮಾಗಳು ಬಂದರೂ  ಒಂದು ಸಮಯಕ್ಕೆ ಒಂದು ಚಿತ್ರವನ್ನ ಮಾತ್ರ ಒಪ್ಪಿಕೊಳ್ತೀನಿ. ತಿಂಗಳಿಗೆ 15 ದಿನ ಫ್ಯಾಮಿಲಿಗೆ ಮೀಸಲು’’ ಅಂತ ದಶಕಗಳ ಹಿಂದೆ ಪತ್ನಿ ಶಾಲಿನಿಗೆ ಅಜಿತ್ ಮಾತು ಕೊಟ್ಟಿದ್ದರು. ಆಡಿದ ಮಾತಿಗೆ ತಕ್ಕ ಹಾಗೆ ಈಗಲೂ ಅಜಿತ್ ನಡೆದುಕೊಳ್ಳುತ್ತಿದ್ದಾರೆ. ಅಸಲಿಗೆ, ಶಾಲಿನಿ ಮತ್ತು ಅಜಿತ್ ಅವರದ್ದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್. ಇಬ್ಬರ ಧರ್ಮ ಬೇರೆ ಬೇರೆಯಾದರೂ.. ಇಬ್ಬರನ್ನೂ ಬೆಸೆದದ್ದು ನಿಷ್ಕಲ್ಮಶ ಪ್ರೀತಿ. ಹಾಗಾದ್ರೆ, ಅಜಿತ್ ಮತ್ತು ಶಾಲಿನಿ ಮೊದಲು ಭೇಟಿಯಾಗಿದ್ದೆಲ್ಲಿ? ಇಬ್ಬರ ಮಧ್ಯೆ ಪ್ರೀತಿ ಚಿಗುರಿದ್ದು ಹೇಗೆ ಅಂತೀರಾ? ಇಲ್ಲಿದೆ ಸಂಪೂರ್ಣ ಮಾಹಿತಿ  ಕಾಲಿವುಡ್‌ನಲ್ಲಿ ಅದಾಗಲೇ ಅಜಿತ್ ಯಶಸ್ವಿ ನಟರಾಗಿ ಗುರುತಿಸಿಕೊಂಡಿದ್ದರು. ಇತ್ತ ಶಾಲಿನಿ ಬಾಲನಟಿಯಾಗಿ ಜನಪ್ರಿಯತೆ ಪಡೆದಿದ್ದರು. ನಾಯಕಿಯಾಗಿಯೂ ತಮಿಳು ಚಿತ್ರರಂಗದಲ್ಲಿ ಹೆಸರು ಗಳಿಸುತ್ತಿದ್ದರು. ಇವರಿಬ್ಬರು ಮೊದಲ ಬಾರಿಗೆ ಭೇಟಿಯಾಗಿದ್ದು 1998ರಲ್ಲಿ ತೆರೆಕಂಡ ‘ಕಾದಲ್ ಮನ್ನಣ್’ ಚಿತ್ರದ ಪ್ರೀಮಿಯರ್ ಸಂದರ್ಭದಲ್ಲಿತಮ್ಮ ಕೂದಲನ್ನ ಕರ್ಲ್ ಮಾಡಿಕೊಂಡು ‘ಕಾದಲ್ ಮನ್ನಣ್’ ಸಿನಿಮಾದ ಪ್ರೀಮಿಯರ್‌ನಲ್ಲಿ ಶಾಲಿನಿ ಭಾಗವಹಿಸಿದ್ದರು. ಶಾಲಿನಿ ಅವರ ಹೇರ್ ಸ್ಟೈಲ್ ಅಜಿತ್‌ಗೆ ಇಷ್ಟವಾಗಿರಲಿಲ್ಲ. ಹೀಗಾಗಿ, ಶಾಲಿನಿ ಅವರನ್ನ ನೋಡಿದ ಕೂಡಲೆ, ಆಕೆಯ ಕೈ ಕುಲುಕಿ ‘’ದಯವಿಟ್ಟು ತಪ್ಪಾಗಿ ಭಾವಿಸಬೇಡಿ. ‘ಕಾದಲುಕ್ಕು ಮರಿಯಾಧೈ’ ಸಿನಿಮಾದಲ್ಲಿದ್ದ ನಿಮ್ಮ ಹೇರ್ ಸ್ಟೈಲ್ ಚೆನ್ನಾಗಿದೆ. ಅದು ನಿಮಗೆ ಚೆನ್ನಾಗಿ ಸೂಟ್ ಆಗುತ್ತದೆ’’ ಎಂದು ಅಜಿತ್ ಕಾಮೆಂಟ್ ಮಾಡಿದ್ದರು.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

4 ಪ್ರಶಸ್ತಿಗಳನ್ನು ಬಾಚಿಕೊಂಡ ರಾಜಮೌಳಿಯ ‘ಆರ್‌ಆರ್‌ಆರ್’ ಚಿತ್ರ.

Sun Feb 26 , 2023
  ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಭಾರತವನ್ನ ಹೆಮ್ಮೆ ಪಡುವಂತೆ ಮಾಡುತ್ತಿದೆ ‘ಆರ್‌ಆರ್‌ಆರ್‌’ ಚಿತ್ರತಂಡ. ಇತ್ತೀಚೆಗಷ್ಟೇ ‘ಆರ್‌ಆರ್‌ಆರ್‌’ ಚಿತ್ರದ ‘ನಾಟು ನಾಟು’ ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿತು. ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿಗೆ ‘ಆರ್‌ಆರ್‌ಆರ್‌’ ಚಿತ್ರದ ‘ನಾಟು ನಾಟು’ ಹಾಡು ನಾಮಿನೇಟ್ ಆಗಿದೆ. ಹೀಗಿರುವಾಗಲೇ, ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್ಸ್ 2023 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ‘ಆರ್‌ಆರ್‌ಆರ್’ ಚಿತ್ರ 4 ಪ್ರಶಸ್ತಿಗಳನ್ನು ಪಡೆದುಕೊಂಡಿದೆ.ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಷನ್ ಅವಾರ್ಡ್ಸ್ 2023 ಪ್ರಶಸ್ತಿ […]

Advertisement

Wordpress Social Share Plugin powered by Ultimatelysocial