ಪುರುಷರ ಶೌಚಾಲಯಕ್ಕೆ ನುಗ್ಗಿದ್ದ ವಿಷಯ ಆಲಿಯಾ ಜೊತೆ ಹಂಚಿಕೊಂಡ ದೀಪಿಕಾ

 

ನಟಿ ದೀಪಿಕಾ ಪಡುಕೋಣೆ ತಮ್ಮ ಹೊಸ ಸಿನಿಮಾ ‘ಗೆಹ್ರಾಯಿಯಾ’ ಸಿನಿಮಾದ ಬಿಡುಗಡೆ ಸಿದ್ಧತೆಯಲ್ಲಿದ್ದಾರೆ. ಫೆಬ್ರವರಿ 11 ರಂದು ಈ ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.’ಗೆಹ್ರಾಯಿಯಾ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಟಿ ದೀಪಿಕಾ ಪಡುಕೋಣೆ ಬ್ಯುಸಿಯಾಗಿದ್ದು, ಸಿನಿಮಾದ ಸಹ ನಟರಾದ ಅನನ್ಯಾ ಪಾಂಡೆ ಹಾಗೂ ಸಿದ್ಧಾಂತ್ ಚತುರ್ವೇದಿ ಜೊತೆ ಹಲವು ಸಂದರ್ಶನಗಳಲ್ಲಿ, ಇವೆಂಟ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ.ಹೀಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದಾಗ ಮಾತನಾಡಿರುವ ದೀಪಿಕಾ ಪಡುಕೋಣೆ, ತಾವು ಆಲಿಯಾ ಭಟ್ ಜೊತೆಗೂಡಿ ಗಂಡಸರ ಶೌಚಾಲಯದ ಒಳಕ್ಕೆ ನುಗ್ಗಿದ್ದ ವಿಷಯವನ್ನು ಹಂಚಿಕೊಂಡಿದ್ದಾರೆ.ಸಂದರ್ಶಕ, ‘ಅಗತ್ಯ ಬಿದ್ದರೆ ಪುರುಷರ ಶೌಚಾಲಯ ಬಳಸುತ್ತೀರ?’ ಎಂದು ಪ್ರಶ್ನೆ ಮಾಡಿದ್ದಾನೆ. ಇದಕ್ಕೆ ಉತ್ತರಿಸಿರುವ ಅನನ್ಯಾ ಪಾಂಡೆ, ‘ಸ್ವಚ್ಛವಾಗಿದ್ದ ಖಂಡಿತ ಬಳಸುತ್ತೇನೆ’ ಎಂದಿದ್ದಾರೆ. ಬಳಿಕ ಮಾತನಾಡಿದ ನಟ ಸಿದ್ಧಾಂತ್ ಚತುರ್ವೇದಿ, ‘ದೀಪಿಕಾ ಪಡುಕೋಣೆ, ಹಾಗೆ ಮಾಡಲು ಸಾಧ್ಯವಿಲ್ಲ. ಆಕೆ ಪುರುಷರ ಶೌಚಾಲಯ ಬಳಸುವುದಿಲ್ಲ’ ಎನ್ನುತ್ತಾರೆ. ಆಗ ಮಾತನಾಡುವ ದೀಪಿಕಾ ತಾವು ಈಗಾಗಲೇ ಪುರುಷರ ಶೌಚಾಲಯ ಬಳಸಿದ್ದಾಗಿ ಹೇಳಿಕೊಂಡಿದ್ದಾರೆ.ಬರ್ಲಿನ್‌ನಲ್ಲಿ ನಡೆದ ಘಟನೆ ನೆನಪಿಸಿಕೊಂಡ ದೀಪಿಕಾ  ಒಮ್ಮೆ ಕೋಲ್ಡ್‌ ಪ್ಲೇ ಕಾನ್ಸರ್ಟ್‌ಗಾಗಿ ಬರ್ಲಿನ್‌ಗೆ ಹೋಗಿದ್ದೆವು. ಅಲ್ಲಿ ಕಾನ್ಸರ್ಟ್ ನಡೆಯುವಾಗ ಮಹಿಳೆಯ ಶೌಚಾಲಯದ ಮುಂದೆ ಬಹಳ ದೊಡ್ಡ ಕ್ಯೂ ಇತ್ತು. ಹಾಗಾಗಿ ನಾನೂ ಹಾಗೂ ಆಲಿಯಾ ಭಟ್ ಪುರುಷರ ಶೌಚಾಲಯಕ್ಕೆ ನುಗ್ಗಿ, ನಮ್ಮ ಕೆಲಸ ಮುಗಿಸಿಕೊಂಡೆವು” ಎಂದಿದ್ದಾರೆ. ”ಸ್ವಚ್ಛತೆ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಶೌಚಾಲಯ ಬಳಸಬೇಕು ಎಂದುಕೊಂಡಾಗ ಶೌಚಾಲಯ ಬಳಸಬೇಕು ಅಷ್ಟೆ. ಸ್ವಚ್ಛವಾಗಿರಲಿ-ಇಲ್ಲದಿರಲಿ, ಪುರುಷರ ಶೌಚಾಲಯವಿರಲಿ, ಮಹಿಳೆಯರದ್ದಾಗಲಿ, ಎಲ್ಲಾದರೂ ಆಗಿರಲಿ ನಾನು ಯೋಚನೆ ಮಾಡುವುದಿಲ್ಲ” ಎಂದಿದ್ದಾರೆ ದೀಪಿಕಾ ಪಡುಕೋಣೆ. ಆಲಿಯಾ-ದೀಪಿಕಾ ಆತ್ಮೀಯ ಗೆಳತಿಯರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

"ಅದ್ಧೂರಿ ಲವರ್"ಗೆ ಪ್ರಿಯಾಂಕ ಕುಮಾರಿ ನಾಯಕಿ

Mon Jan 31 , 2022
ಮಾಡೆಲ್ ಮತ್ತು ನಟಿಯಾಗಿ ಹೆಸರು ಮಾಡುತ್ತಿರುವ ನವ ಪ್ರತಿಭೆ ಪ್ರಿಯಾಂಕ ಕುಮಾರ್ ಎಪಿ ಅರ್ಜುನ್ ನಿರ್ದೇಶನದ ಅದ್ಧೂರಿ ಲವರ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.ಅದ್ಧೂರಿ ಲವರ್ ಸಿನಿಮಾದಲ್ಲಿ ಅವರು ವಿರಾಟ್ ಜೊತೆ ನಟಿಸುತ್ತಿದ್ದಾರೆ.ಪ್ರಿಯಾಂಕ ಅವರು ಸೂರಿಯವರ ಬ್ಯಾಡ್ ಮ್ಯಾನರ್ಸ್ ಸಿನಿಮಾಗೆ ಮೊದಲ ಬಾರಿ ಬಣ್ಣ ಹಚ್ಚಿದ್ದಾರೆ.. ಅದ್ಧೂರಿ ಲವರ್ ಅವರ ಎರಡನೇ ಸಿನಿಮಾ ಆಗಿದೆ, ಅದ್ಧೂರಿ ಲವರ್ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದೆ. ಎಪಿ ಅರ್ಜುನ್ ಫಿಲಂಸ್ ಬ್ಯಾನರ್ […]

Advertisement

Wordpress Social Share Plugin powered by Ultimatelysocial