FLIGHT TICKET:ಕೇವಲ 1700 ರೂಪಾಯಿಗೆ ವಿಮಾನ ಪ್ರಯಾಣ! ಟಿಕೆಟ್‌ಗಳನ್ನು ಈಗಲೇ ಬುಕ್ ಮಾಡಿ;

ನವದೆಹಲಿ : Indigo Offer : ನೀವು ಸಹ ಹೊಸ ವರ್ಷದಲ್ಲಿ ಎಲ್ಲಿಗಾದರೂ ಹೋಗುವ ಬಗ್ಗೆ ಯೋಚಿಸುತ್ತಿದ್ದರೆ, ದೇಶದ ಸುಂದರ ಸ್ಥಳಗಳನ್ನು ಅತ್ಯಂತ ಅಗ್ಗವಾಗಿ ಸುತ್ತಾಡಬಹುದು. ಅಷ್ಟೇ ಅಲ್ಲ, ಈಗ ವಿಮಾನದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆಪ್ರಯಾಣ ಬೆಳೆಸುವುದು ಕೂಡಾ ಬಹಳ ಸುಲಭವಾಗಲಿದೆ.

ವಿಮಾನಯಾನ ಕಂಪನಿ ಇಂಡಿಗೋ ಅನೇಕ ಹೊಸ ನೇರ ವಿಮಾನಗಳನ್ನು ಘೋಷಿಸಿದೆ. ಇದರೊಂದಿಗೆ ನಮ್ಮ ಪ್ರಯಾಣಿಕರಿಗೆ ಪಾಯಿಂಟ್ ಟು ಪಾಯಿಂಟ್ ಸಂಪರ್ಕವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದೇವೆ ಎಂದು ಇಂಡಿಗೋ ಹೇಳಿದೆ.

ಟ್ವೀಟ್ ಮೂಲಕ ಮಾಹಿತಿ ನೀಡಿದ ಕಂಪನಿ :
ಇಂಡಿಗೋ  ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡುವ ಮೂಲಕ ಈ ಕೊಡುಗೆಯ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದೆ. ಇಂಡಿಗೋ ಇಲ್ಲಿ ಲಿಂಕ್ ಅನ್ನು ಶೇರ್ ಮಾಡಿದ್ದು, ಈ ಲಿಂಕ್ ಮೂಲಕ ಟಿಕೆಟ್ ಬುಕ್ ಮಾಡುವುದು ಸಾಧ್ಯವಾಗುತ್ತದೆ.

ಬುಕ್ ಮಾಡುವುದು ಹೇಗೆ?

ಟಿಕೆಟ್ ಬುಕ್ ಮಾಡಲು ಇಂಡಿಗೋ ವೆಬ್‌ಸೈಟ್‌ಗೆ (Indigo Website) ಭೇಟಿ ನೀಡುವ ಮೂಲಕ ವಿವರವಾದ ಮಾಹಿತಿಯನ್ನು ಪಡೆಯಬಹುದು. ಇದರ ಹೊರತಾಗಿ, ಪ್ರಯಾಣಿಕರು ಇಂಡಿಗೋ ವಿಮಾನಗಳಿಗೆ ವಿಮಾನಯಾನದ ಅಧಿಕೃತ ವೆಬ್‌ಸೈಟ್ https://www.goindigo.in/ ಗೆ ಭೇಟಿ ನೀಡುವ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಸ್ಪೈಸ್‌ಜೆಟ್ ಕೂಡ ನೀಡುತ್ತಿದೆ ಆಫರ್ :

ಕರೋನಾದಿಂದಾಗಿ ದೀರ್ಘ ವಿರಾಮದ ನಂತರ, ಗ್ರಾಹಕರನ್ನು ಆಕರ್ಷಿಸಲು ವಿಮಾನಯಾನ ಸಂಸ್ಥೆಗಳು ವಿಭಿನ್ನ ಕೊಡುಗೆಗಳನ್ನು ನೀಡುತ್ತಿವೆ. ಸ್ಪೈಸ್‌ಜೆಟ್ ‘ವಾವ್ ವಿಂಟರ್ ಸೇಲ್’ ಅನ್ನು ತಂದಿದ್ದು, ಇದರ ಅಡಿಯಲ್ಲಿ ಪ್ರಯಾಣಿಕರು 1122 ರೂ.ಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶವನ್ನು ಪಡೆಯುತ್ತಿದ್ದಾರೆ. ಈ ಕೊಡುಗೆಯಲ್ಲಿ, ಡಿಸೆಂಬರ್ 27 ಮತ್ತು ಡಿಸೆಂಬರ್ 31 ರ ನಡುವೆ ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಗೋ ಫಸ್ಟ್ ನಿಂದಲೂ ರಿಯಾಯಿತಿ :

ಇಂಡಿಗೋ ಮತ್ತು ಸ್ಪೈಸ್‌ಜೆಟ್‌ನಂತೆ  , ಗೋ ಫರ್ಸ್ಟ್ ದೇಶೀಯ ವಿಮಾನಗಳಲ್ಲಿ 20% ವರೆಗೆ ರಿಯಾಯಿತಿಯನ್ನು ನೀಡುತ್ತಿದೆ. ಆದರೆ, ಈ ಕೊಡುಗೆಯ ಪ್ರಯೋಜನವು ಕರೋನಾ ವೈರಸ್ ಲಸಿಕೆಯ (Corona Vaccine) ಎರಡೂ ಡೋಸ್‌ಗಳನ್ನು ಹಾಕಿಸಿಕೊಂಡವರಿಗೆ ಮಾತ್ರ ಲಭ್ಯವಿರುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

LIC:ಐಪಿಓಗಾಗಿ ಎಲ್​ಐಸಿ ಜೊತೆಗೆ ಪಾನ್​ ಕಾರ್ಡ್ ಲಿಂಕ್​ ಮಾಡಲು ಇಲ್ಲಿದೆ ಟಿಪ್ಸ್;

Tue Dec 28 , 2021
  ಭಾರತೀಯ ಜೀವ ವಿಮಾ ನಿಗಮದ ಮೆಗಾ ಐಪಿಓ ಪ್ರಸಕ್ತ ಹಣಕಾಸು ವರ್ಷದ ಅಂತ್ಯದಲ್ಲಿ ಹೊರಬೀಳಲಿದೆ. ಆದರೂ ಸಹ ಎಲ್​​ಐಸಿ ಪಾಲಿಸಿದಾರರು ತಮ್ಮ ಪಾನ್​ ಕಾರ್ಡ್​ನ್ನು ಪಾಲಿಸಿಯ ಜೊತೆಗೆ ಲಿಂಕ್​ ಮಾಡುವುದು ಅತ್ಯಂತ ಅವಶ್ಯಕವಾಗಿದೆ. ಎಲ್​ಐಸಿಯು ಇತ್ತೀಚಿಗೆ ತನ್ನೆಲ್ಲ ಪಾಲಿಸಿದಾರರಿಗೆ ಅನ್ವಯವಾಗುವಂತೆ ಕಂಪನಿಯ ಮುಂಬರುವ ಐಪಿಓ ಚಂದಾದಾರಿಕೆಗೆ ಸಂಬಂಧಿಸಿದಂತೆ ಸಾರ್ವಜನಿಕ ಪ್ರಕಟಣೆಯನ್ನು ಹೊರಡಿಸಿದೆ. ಕಂಪನಿಯ ದಾಖಲೆಗಳಲ್ಲಿ ತಮ್ಮ ಪಾನ್​ ಕಾರ್ಡ್​ನ್ನು ಲಿಂಕ್​ ಮಾಡಿದರೆ ಮಾತ್ರ ಅದರ ಮುಂಬರುವ ಐಪಿಓದ ಚಂದಾದಾರರಾಗಬಹುದು […]

Advertisement

Wordpress Social Share Plugin powered by Ultimatelysocial