ಟೆಸ್ಟ್ ತಂಡದ ನಾಯಕತ್ವ ತೊರೆದ ಕೊಹ್ಲಿ, ಭಾವನಾತ್ಮಕ ಪತ್ರ ಬರೆದ ಅನುಷ್ಕಾ ಶರ್ಮಾ;

ಭಾರತೀಯ ಕ್ರಿಕೆಟ್ ತಂಡ ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿರುವ ವಿರಾಟ್ ಕೊಹ್ಲಿ ಟೆಸ್ಟ್ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಇದೇ ವೇಳೆ ವಿರಾಟ್ ಕೊಹ್ಲಿಯ ಪತಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸೋಶಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ.

ಇಷ್ಟು ವರ್ಷ ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿಯ ಏಳು-ಬೀಳುಗಳ ಜೊತೆ ನಿಂತಿದ್ದಾರೆ.

ವಿರಾಟ್ ಕೊಹ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೆ ರಾಜೀನಾಮೆ ನೀಡಿದ ಬಳಿಕ ಅನುಷ್ಕಾ ಶರ್ಮಾ ಇನ್‌ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಕೆಲವು ಪತಿ ವಿರಾಟ್ ಜೊತೆಯಲ್ಲಿರುವ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಇನ್ನು ಮತ್ತೆ ಕೆಲವು ವಿರಾಟ್ ಕೊಹ್ಲಿ ಬಿಳಿ ಜರ್ಸಿ ತೊಟ್ಟು ಫೋಟೊಗಳನ್ನು ಶೇರ್ ಮಾಡಿದ್ದಾರೆ. 2014 ರಿಂದ ಟೆಸ್ಟ್ ನಾಯಕತ್ವ ವಹಿಸಿಕೊಂಡ ವಿರಾಟ್ ಕೊಹ್ಲಿಯ ಜರ್ನಿಯನ್ನು ನೆನಪಿಸಿಕೊಂಡಿದ್ದಾರೆ.

2014ರಲ್ಲಿ ಟೆಸ್ಟ್ ತಂಡ ನಾಯಕನಾದಾಗ ಆಡಿದ ಮಾತು ನೆನಪಿದೆ

ಅನುಷ್ಕಾ ಶರ್ಮಾ ಪತಿ ವಿರಾಟ್ ಕೊಹ್ಲಿ 2014ರಲ್ಲಿ ಟೆಸ್ಟ್ ತಂಡದ ನಾಯಕನಾಗಿ ಆಯ್ಕೆ ಆಗಿದ್ದಾಗ ಆಡಿದ ಸಂದರ್ಭವನ್ನು ನೆನಪಿಸಿಕೊಂಡು ಪತ್ರ ಬರೆದಿದ್ದಾರೆ. “2014ರಲ್ಲಿ ನಿಮ್ಮನ್ನು ಟೆಸ್ಟ್ ತಂಡದ ನಾಯಕನನ್ನಾಗಿ ಘೋಷಿಸಿದ ದಿನ ನನಗೆ ನೆನಪಿದೆ. ಆ ದಿನ ಎಂ ಎಸ್ ಧೋನಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ ಬಗ್ಗೆ ಹೇಳಿದ್ರಿ. ಆ ದಿನ ನಾನು, ನೀವು ಹಾಗೂ ಎಂಎಸ್ ಆಡಿದ ಮಾತುಗಳು ನನಗೆ ನೆನಪಿದೆ. ಆಗ ನಿನ್ನ ಗಡ್ಡ ಎಷ್ಟು ಬೇಗ ಬೆಳ್ಳಗಾಗುತ್ತಿವೆ ಎಂದು ಜೋಕ್ ಮಾಡಿದ್ದವು. ಅಲ್ಲಿಂದ ನಿಮ್ಮ ಗಡ್ಡ ಬೆಳ್ಳಗಾಗುವುದನ್ನಷ್ಟೇ ನೋಡಿಲ್ಲ. ಬದಲಾಗಿ ನಿಮ್ಮ ಏಳಿಗೆಯನ್ನೂ ನೋಡಿದ್ದೇನೆ.” ಎಂದು ಅನುಷ್ಕಾ ಶರ್ಮಾ ಬರೆದಿದ್ದಾರೆ.

“ನಿಮ್ಮ ನಾಯಕತ್ವದಲ್ಲಿ ಭಾರತದ ರಾಷ್ಟ್ರೀಯ ಕ್ರಿಕೆಟ್ ತಂಡದ ಸಾಧನೆಯನ್ನು ಕಂಡಿದ್ದೇನೆ. ಎಂತಹ ಸಾಧನೆ ಅದು. ಆದರೆ, ನಾನು ಅದೆಲ್ಲದಕ್ಕಿಂತ ಹೆಚ್ಚಾಗಿ ನಿಮ್ಮೊಳಗಿನ ಸಾಧನೆಯಲ್ಲಾದ ಬದಲಾವಣೆಯನ್ನು ಹೆಚ್ಚು ಕಂಡಿದ್ದೇನೆ.” ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಪತ್ರದಲ್ಲಿ ಬರೆದಿದ್ದಾರೆ.

ನಮ್ಮ ಮಗಳು ನಿಮ್ಮ ಈ 7 ವರ್ಷಗಳನ್ನು ಕಲಿಯುತ್ತಾಳೆ

ನಾನು ಹೇಳಿದಂತೆ, ನಿಮ್ಮನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದವರು ನಿಜವಾಗಿಯೂ ಧನ್ಯರು. ನೀವು ಪರ್ಫೆಕ್ಟ್ ಅಲ್ಲ ಅನ್ನುವುದು ಗೊತ್ತಿದೆ. ನಿಮ್ಮಲ್ಲೂ ನ್ಯೂನತೆಗಳಿವೆ. ಆದರೆ ಅದನ್ನು ಯಾವಾಗ ಮರೆಮಾಚಲು ಪ್ರಯತ್ನಿಸಿದ್ದೀರಿ? ಒಳ್ಳೆಯನ್ನು ಮಾಡುವುದಕ್ಕಾಗಿಯೇ ನೀವು ಯಾವಾಗಲೂ ಮುಂದಕ್ಕೆ ಹೋಗಿದ್ದೀರಿ. ನೀವು ದುರಾಸೆಯಿಂದ ಯಾವ ಸ್ಥಾನವನ್ನು ಕಬಳಿಸಿಲ್ಲ ಎಂಬುದು ನನಗೆ ತಿಳಿಸಿದೆ. ನೀವು ನನ್ನ ಪ್ರೀತಿ, ಆದರೆ ಮಿತಿಯಲ್ಲ. ನಿಮ್ಮ ಈ ಏಳು ವರ್ಷಗಳನ್ನು ನಿಮ್ಮ ಮಗಳು ಮುಂದೆ ಕಲಿಯುತ್ತಾಳೆ.” ಎಂದು ಅನುಷ್ಕಾ ಶರ್ಮಾ ಭಾವನಾತ್ಮಕವಾಗಿ ಬರೆದಿದ್ದಾರೆ.

ಟಾಲಿವುಡ್ ತಾರೆಯರಿಂದ ವಿರಾಟ್‌ಗೆ ಶುಭಾಶಯ

ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗೆ ಇಳಿಯುತ್ತಿದ್ದಂ‍ತೆ ಬಾಲಿವುಡ್ ಮಂಡಿ ಶುಭ ಕೋರಿದ್ದಾರೆ. ರಣ್‌ವೀರ್ ಸಿಂಗ್ ಟ್ವೀಟ್ ಮಾಡಿದ್ದು, “ಕಿಂಗ್ ಯಾವತ್ತಿದ್ದರೂ ಕಿಂಗ್” ಎಂದು ಬರೆದಿದ್ದಾರೆ. ಸುನೀಲ್ ಶೆಟ್ಟಿ, ವಿವೇಕ್ ಓಬೆರಾಯ್, ಅರ್ಜುನ್ ರಾಮ್‌ಪಾಲ್, ಸೇರಿದಂತೆ ಹಲವು ಹಲವು ಬಾಲಿವುಡ್ ತಾರೆಯರು ಸೇರಿದಂತೆ ಕ್ರಿಕೆಟ್ ಜಗತ್ತಿನ ಗಣ್ಯರು ವಿರಾಟ್ ಕೊಹ್ಲಿಗೆ ಅಭಿನಂದನೆ ಹಾಗೂ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಡಿಸ್ನಿ+ ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಲಿದೆ ಧನುಶ್ ಮುಂದಿನ ಚಿತ್ರ

Thu Jan 20 , 2022
ಬಾಲಿವುಡ್ ನಲ್ಲಿ ನಟಿಸಿದ ಅತ್ರಂಗಿ ರೆ ಚಿತ್ರ ಹಿಟ್ ಆದ ಸಂತಸದಲ್ಲಿರುವ ತಮಿಳು ನಟ ಧನುಶ್ ರ ಮುಂದಿನ ಚಿತ್ರ ‘ಮಾರನ್’ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ. ಕಾರ್ತಿಕ್ ನರೆನ್ ನಿರ್ದೇಶನದ ಮಾರನ್ ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಡಿಸ್ನಿ + ಹಾಟ್ ಸ್ಟಾರ್ ನಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರರಂಗ ಹೇಳಿಕೊಂಡಿದೆ. ಆರಂಭದಲ್ಲಿ ಚಿತ್ರಮಂದಿರಗಳಲ್ಲೇ ಸಿನಿಮಾ ರಿಲೀಸ್ ಮಾಡಲು ತಂಡ ಸಿದ್ದತೆ ನಡೆಸಿತ್ತು. ಆದರೆ ಕೋವಿಡ್ ಹೆಚ್ಚಳದ ಕಾರಣದಿಂದ ಇದೀಗ ಓಟಿಟಿಯತ್ತ […]

Advertisement

Wordpress Social Share Plugin powered by Ultimatelysocial