ಸೆನ್ಸಾರ್ ಮೆಚ್ಚಿದ “ಆವರ್ತ”

“ವಿಜೇತ ಚಿತ್ರ ” ನಿರ್ಮಿಸಿ ವೇಮಗಲ್ ಜಗನ್ನಾಥ ರಾವ್ ನಿರ್ದೇಶನ ಮಾಡಿರುವ
ವಿಭಿನ್ನ ಥ್ರಿಲ್ಲರ್ ಚಿತ್ರ “ಆವರ್ತ “ವನ್ನ ಇತ್ತೀಚಿಗೆ ನೋಡಿದ ಸೆನ್ಸರ್ ಮಂಡಳಿಯವರು ಮೆಚ್ಚುಗೆ ವ್ಯಕ್ತಪಡಿಸಿ UA ಸರ್ಟಿಫಿಕೇಟ್ ಯಾವುದೇ ಕಟ್ಸ್ ಇಲ್ಲದೆ ನೀಡಿದ್ದಾರೆ, ಉತ್ತಮ ಸಂಭಾಷಣೆ, ಹೊಸತರಹದ ಸ್ಕ್ರೀನ್ ಪ್ಲೇ ಮತ್ತು ಕೊನೆಯ ವರೆಗೂ ತಳ್ಳಣಿಸುವಂತ ಸಸ್ಪೆನ್ಸ್ ಇದೆ ಎಂದು ಮೆಚ್ಚುಗೆ ತಿಳಿಸಿದ್ದಾರೆ. ಹೆಸರಾಂತ ಆಡಿಯೋ “jhankar audio” ಸಂಸ್ಥೆಯವರು ಆಡಿಯೋ ಹಕ್ಕುಗಳನ್ನು ಪಡೆದಿದ್ದು,
ಹಿರಿಯ ಮಹಾನ್ ನಟರಾದ ಎಸ್ ಶಿವರಾಂ ನಟಿಸಿರುವ ಕಡೆಯ ಚಿತ್ರ,ಅದ್ಭುತವಾಗಿ ಅಭಿನಹಿಸಿದ್ದಾರೆ, ಹೊಸ ಪರಿಚಯ ನಾಯಕ ನಟನಾಗಿ ಜೈಚಂದ್ರ , ಹೊಸ ಪರಿಚಯ ಧನ್ವಿತ್, ಹಾಗೂ ನಾಯಕಿಯಾಗಿ ನಯನ, ಮೇಘನಾ ಗೌಡ, ಕಲ್ಲೇಶ್ ವರ್ಧನ್, ರಾಮರಾವ್ , ಶಶಿಧರ್ ಮುಂತಾದವರು ಅಭಿನಯಿಸಿದ್ದಾರೆ. ಛಾಯಾಗ್ರಹಣ :ಬಿಆರ್ ಮಲ್ಲಿಕಾರ್ಜುನ್, ಸಂಕಲನ: ಶಿವಕುಮಾರ್ ಯಾದವ್, ಸಂಗೀತ :ಅತಿಶಯ ಜೈನ್, ಸಾಹಸ: ಡಾಕ್ಟರ್ ಥ್ರಿಲ್ಲರ್ ಮಂಜು,ನಿರ್ಮಾಣ ನಿರ್ವಹಣೆ :ಕಿರಣ್ ರಾಜ್, ಬಿ.ಜಿ. ಜಗನ್ನಾಥರಾವ್ ಮತ್ತು ಗೆಳೆಯರು ನಿರ್ಮಿಸಿರುವ ಈ ಚಿತ್ರದಲ್ಲಿ ವಿಭಿನ್ನ ಕಥಾಹಂದರ ಇದ್ದು, ಇದೊಂದು ಮಿಸ್ಟರಿ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿರುತ್ತದೆ. ಹೊಸಬಗೆಯ ತಾಂತ್ರಿಕತೆ ಹೊಂದಿರುವ ಈ ಚಿತ್ರವನ್ನು ಬೆಂಗಳೂರು,ಮಡಕೇರಿ,ಉಡುಪಿ, ಕುಂದಾಪುರ,ಕಾರವಾರ,ಮುಂತಾದ ಕಡೆ ಚಿತ್ರಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'777 ಚಾರ್ಲಿ'.. ಮನಮುಟ್ಟುವ ಅನುಬಂಧ ಅನಾವರಣ!

Tue May 17 , 2022
ತನ್ನ ಟೈಟಲ್‌, ಫ‌ಸ್ಟ್‌ಲುಕ್‌ ಪೋಸ್ಟರ್‌ ಮತ್ತು ಟೀಸರ್‌ ಮೂಲಕ ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದ್ದ “777 ಚಾರ್ಲಿ’ ಸಿನಿಮಾದ ಟ್ರೇಲರ್‌ ಸೋಶಿಯಲ್‌ ಮೀಡಿಯಾಗಳಲ್ಲಿ ಬಿಡುಗಡೆಯಾಗಿದೆ. ಇನ್ನು ಮನುಷ್ಯ ಮತ್ತು ನಾಯಿಯ ನಡುವಿನ ಸಂಬಂಧವನ್ನು ನವಿರಾಗಿ ಟ್ರೇಲರ್‌ನಲ್ಲಿ ತರಲಾಗಿದ್ದು, ಸುಮಾರು 3 ನಿಮಿಷ 50 ಸೆಕೆಂಡ್‌ ಅವಧಿಯ ಟ್ರೇಲರ್‌ನಲ್ಲಿ ಧರ್ಮ ಎಂಬ ಪಾತ್ರದಲ್ಲಿ ನಟ ರಕ್ಷಿತ್‌ ಶೆಟ್ಟಿ, “ಚಾರ್ಲಿ’ ಎಂಬ ಪಾತ್ರದಲ್ಲಿ ನಾಯಿ ಕಾಣಿಸಿಕೊಂಡಿದೆ. ಕೆಲಸ, ಸಿಗರೇಟ್‌, ಕುಡಿತ ಅಂತಿದ್ದ ಧರ್ಮನ […]

Advertisement

Wordpress Social Share Plugin powered by Ultimatelysocial