ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಮತ್ತೆ ಮುನ್ನೆಲೆಗೆ.

 

ಬಹುನಿರೀಕ್ಷಿತ ಟ್ರಕ್‌ ಟರ್ಮಿನಲ್‌ ವಾರ್‌ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಪುಟಿದೆದ್ದು, ಬಿಜೆಪಿ ಮತ್ತು ಜೆಡಿಎಸ್‌ ನಡುವಿನ ಕಾಳಗಕ್ಕೆ ನಾಂದಿಯಾಗಿದೆ.ರಾಷ್ಟ್ರೀಯ ಹೆದ್ದಾರಿ ಹಾಯ್ದು ಹೋಗಿರುವ ಹಾಸನ ನಗರ ವ್ಯಾಪ್ತಿಯಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಿಸಿ ಲಾರಿ ಮಾಲೀಕರು, ಚಾಲಕರು, ಕ್ಲೀನರ್‌ಗಳಿಗೆ ಅನುಕೂಲ ಕಲ್ಪಿಸಬೇಕು ಎಂಬುದು ಜಿಲ್ಲಾಲಾರಿ ಮಾಲೀಕರ ಸಂಘದ ದಶಕದ ಮನವಿ ಜಿಲ್ಲೆಯಲ್ಲಿ 2645 ಲಾರಿಗಳು ಇದ್ದು, ನಗರ ಒಂದರಲ್ಲೇ ಒಂದೂವರೆ ಸಾವಿರಕ್ಕೂ ಹೆಚ್ಚು ಲಾರಿ, ಟ್ರಕ್‌ಗಳಿವೆ. ರೈಲ್ವೆ ಗೂಡ್ಸ್‌ ಶೆಡ್‌ಗೆ ಬರುವ ಸಿಮೆಂಟ್‌, ಗೊಬ್ಬರ, ಆಲೂ ಮತ್ತಿತರ ಎಲ್ಲ ಬಗೆಯ ಪದಾರ್ಥಗಳನ್ನು ಇಲ್ಲಿಂದ ಜಿಲ್ಲೆ, ಹೊರ ಜಿಲ್ಲೆಗೆ ಸಾಗಿಸುವ ವ್ಯವಸ್ಥೆ ಹತ್ತು ಹಲವು ವರ್ಷದಿಂದಲೂ ಇದೆ.
ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಹತ್ತಾರು ಸಾವಿರ ಲಾರಿಗಳು ಸಂಚರಿಸುತ್ತವೆ. ಕೇರಳ, ತಮಿಳುನಾಡು ಸೇರಿದಂತೆ ರಾಜ್ಯ, ಹೊರ ರಾಜ್ಯದಿಂದ ಹಗಲು-ರಾತ್ರಿ ಎನ್ನದೆ ಲಾರಿಗಳು ಹಾಸನಕ್ಕೆ ಬಂದು ಮುಂದೆ ಸಾಗುತ್ತವೆ. ಹೀಗೆ ಮುಂದೆ ಸಾಗುವ ನಡುವೆ ವಿಶ್ರಾಂತಿಗಾಗಿ ಟ್ರಕ್‌ ಟರ್ಮಿನಲ್‌ ಇಲ್ಲದೆ ಅಪಘಾತ, ಅಪರಾಧ ಪ್ರಕರಣ ನಡೆದ ಉದಾಹರಣೆ ಕೂಡ ಇದೆ. ರಸ್ತೆಬದಿ ರಾತ್ರಿ ವೇಳೆ ನಿಲ್ಲಿಸಿ ಚಾಲಕ ನಿದ್ದೆಗೆ ಜಾರಿದಾಗ ಡೀಸೆಲ್‌ ಕಳ್ಳತನ, ಟೈರ್‌, ಬ್ಯಾಟರಿ ಕಳ್ಳತನ ಇಲ್ಲವೇ ದರೋಡೆ ಮಾಡಿದ ಪ್ರಕರಣಗಳೂ ಇದ್ದು, ಸುರಕ್ಷತೆ ದೃಷ್ಟಿಯಿಂದ ಟ್ರಕ್‌ ಟರ್ಮಿನಲ್‌ ನಿರ್ಮಿಸಬೇಕು ಎಂಬ ಒತ್ತಾಯ ಕೇಳಿಬರುತ್ತಲೇ ಇದೆ.ಲಾರಿ ಚಾಲಕರ ಸಂಘ ಟ್ರಕ್‌ ಟರ್ಮಿನಲ್‌ ಮಾಡಿಕೊಡುವಂತೆ ಮನವಿ ಮಾಡುತ್ತಾ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಜಾಗ ಹುಡುಕುತ್ತಲೇ ಇತ್ತು. ಅಂತಿಮವಾಗಿ ಶಾಸಕ ಪ್ರೀತಂ ಜೆ ಗೌಡ ಎಲ್ಲರೊಂದಿಗೆ ಚರ್ಚಿಸಿ, ರಾಷ್ಟ್ರೀಯ ಹೆದ್ದಾರಿ ಬುರುಡಾಳು ಬಾರೆ ಬಳಿ ಮೂರೂವರೆ ಎಕರೆ ಪ್ರದೇಶ ಗುರುತಿಸಿ ವರ್ಷದ ಹಿಂದೆ ಆ ಸ್ಥಳದಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣ ಕಾಮಗಾರಿಯೂ ಶುರುವಾಯಿತು.ಟ್ರಕ್‌ ಟರ್ಮಿನಲ್‌ ಜಾಗ ಹೇಮ ಗಂಗೋತ್ರಿ ಕಾಲೇಜು ಸಮೀಪದಲ್ಲೇ ಇದ್ದು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಜೆಡಿಎಸ್‌ ತಕರಾರು ತೆಗೆಯಿತು. ಶಾಸಕ ಎಚ್‌ ಡಿ ರೇವಣ್ಣ ಖುದ್ದು ಧರಣಿ ಕುಳಿತರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಕೂಡ ಪ್ರತಿಭಟನೆಗೆ ಮುಂದಾದ ಹಿನ್ನೆಲೆಯಲ್ಲಿ ಕಾಮಗಾರಿಗೆ ತಾತ್ಕಾಲಿಕ ಬ್ರೇಕ್‌ ಬಿದ್ದಿತು.
ನಗರದ ರಾಜಘಟ್ಟ ಬಡಾವಣೆಗೆ ತೆರಳುವ ಮಾರ್ಗ ಬದಿಯಲ್ಲಿ ತಾತ್ಕಾಲಿಕವಾಗಿ ಗೂಡ್ಸ್‌ಶೆಡ್‌ ನಿರ್ಮಿಸಲಾಗಿದೆ. ಇಲ್ಲಿ ಲಾರಿ ನಿಲುಗಡೆ ಬಿಟ್ಟರೆ ಕುಡಿಯುವ ನೀರು, ವಿದ್ಯುತ್‌, ಶೌಚಾಲಯ ಸೇರಿ ಯಾವುದೇ ಮೂಲಸೌಲಭ್ಯವಿಲ್ಲ. ಜನವಸತಿ ಬಡಾವಣೆಗೆ ತೆರಳುವ ಪ್ರದೇಶದಲಿ ಲಾರಿ ನಿಲುಗಡೆಗೆ ಅವಕಾಶ ಕಲ್ಪಿಸಬಾರದು ಎಂಬ ವಿರೋಧ ಪ್ರಾರಂಭದಿಂದಲೂ ಇದ್ದೇ ಇದೆ. ಹೀಗಾಗಿ ಟ್ರಕ್‌ ಟರ್ಮಿನಲ್‌ ಬೇಕೆಂಬ ಒತ್ತಾಯ ಪದೇಪದೆ ಕೇಳಿ ಬರುತ್ತಲೇ ಇದೆ. ಪ್ರಸ್ತುತ ಈ ಸಂಗತಿ ಚುನಾವಣೆ ಸಂದರ್ಭದಲ್ಲಿ ಮುನ್ನೆಲೆಗೆ ಬಂದಿದ್ದು, ಮತ್ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಬಿಡಿಎ, ಬಿಬಿಎಂಪಿ ಆಸ್ತಿ ರಕ್ಷಣೆಗೆ ಸಿಎಂ ಭರವಸೆ ರಾಜಕಾಲುವೆ ಮೇಲೆ ಕಟ್ಟಡ ನಿರ್ಮಿಸಿದ ವ್ಯಕ್ತಿಗೆ 1 ವರ್ಷ ಜೈಲುಪಾಲು.

Fri Feb 24 , 2023
  ಬಿಡಿಎ ಮತ್ತು ಬಿಬಿಎಂಪಿಗೆ ಸೇರಿದ ಯಾವುದೇ ಜಾಗವನ್ನು ಒತ್ತುವರಿ ಮಾಡಲು ಬಿಡುವುದಿಲ್ಲ. ಭೂಸ್ವಾಧೀನ ಮತ್ತು ಸ್ವತ್ತುಗಳ ರಕ್ಷಣೆಗೆ ಸಂಬಂಧಪಟ್ಟಂತೆ ಸ್ಪಷ್ಟತೆ ತರಲು ತಮ್ಮ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಗುರುವಾರ ವಿಷಯ ಪ್ರಸ್ತಾಪಿಸಿದ ಸದಸ್ಯ ಮರಿತಿಬ್ಬೇಗೌಡ, ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ಬಳಿ ಬಿಡಿಎಗೆ ಸೇರಿದ 23 ಗುಂಟೆ ಜಮೀನು ಒತ್ತುವರಿಯಾಗಿದೆ. ಈ ಸಂಬಂಧ […]

Advertisement

Wordpress Social Share Plugin powered by Ultimatelysocial