ಬಿಡಿಎ, ಬಿಬಿಎಂಪಿ ಆಸ್ತಿ ರಕ್ಷಣೆಗೆ ಸಿಎಂ ಭರವಸೆ ರಾಜಕಾಲುವೆ ಮೇಲೆ ಕಟ್ಟಡ ನಿರ್ಮಿಸಿದ ವ್ಯಕ್ತಿಗೆ 1 ವರ್ಷ ಜೈಲುಪಾಲು.

 

ಬಿಡಿಎ ಮತ್ತು ಬಿಬಿಎಂಪಿಗೆ ಸೇರಿದ ಯಾವುದೇ ಜಾಗವನ್ನು ಒತ್ತುವರಿ ಮಾಡಲು ಬಿಡುವುದಿಲ್ಲ. ಭೂಸ್ವಾಧೀನ ಮತ್ತು ಸ್ವತ್ತುಗಳ ರಕ್ಷಣೆಗೆ ಸಂಬಂಧಪಟ್ಟಂತೆ ಸ್ಪಷ್ಟತೆ ತರಲು ತಮ್ಮ ಸರಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.ವಿಧಾನ ಪರಿಷತ್‌ನ ಪ್ರಶ್ನೋತ್ತರ ಕಲಾಪದಲ್ಲಿ ಗುರುವಾರ ವಿಷಯ ಪ್ರಸ್ತಾಪಿಸಿದ ಸದಸ್ಯ ಮರಿತಿಬ್ಬೇಗೌಡ, ಬೆಂಗಳೂರು ದಕ್ಷಿಣ ತಾಲೂಕು ಬೇಗೂರು ಹೋಬಳಿ ಬಳಿ ಬಿಡಿಎಗೆ ಸೇರಿದ 23 ಗುಂಟೆ ಜಮೀನು ಒತ್ತುವರಿಯಾಗಿದೆ. ಈ ಸಂಬಂಧ ಸರ್ಕಾರ ಯಾವ ಕ್ರಮ ಕೈಗೊಂಡಿದೆ? ಎಂದು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಬಿಡಿಎ ಮತ್ತು ಬಿಬಿಎಂಪಿ ಸ್ಥಳವನ್ನು ಯಾರೇ ಆಕ್ರಮಿಸಿದರೂ ಅದನ್ನು ತಕ್ಷಣವೇ ತೆರವುಗೊಳಿಸಲು ಕ್ರಮ ವಹಿಸುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ಪ್ರಕರಣದ ಬಗ್ಗೆ ಸೂಕ್ತ ತನಿಖೆ ಮಾಡಿಸುತ್ತೇನೆ. ಬಿಡಿಎ ತನ್ನದೇ ಆದ ಕಾಯಿದೆಯನ್ನು ಹೊಂದಿದೆ. ನಿರ್ದಿಷ್ಟ ಉದ್ದೇಶವನ್ನು ಪ್ರಸ್ತಾಪಿಸಿ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ಬಳಿಕ ಹೆಚ್ಚುವರಿ ಎಂದು ಕಂಡು ಬಂದ ಭೂಮಿಯನ್ನು ಅಧಿಸೂಚನೆಯಿಂದ ಕೈಬಿಡಲಾಗುವುದು. ನಿಯಮಾನುಸಾರ ಅಂತಿಮ ಅಧಿಸೂಚನೆ ಜಾರಿಯಾದ ಬಳಿಕ ಯಾವ ಕಾರಣಕ್ಕೂ ಭೂಮಿಯನ್ನು ಕೈ ಬಿಡಲು ಸಾಧ್ಯವಿಲ್ಲ ಎಂದರು.ಈ ನಡುವೆ ಭೂಮಾಲೀಕರು ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದು ವಿವಿಧ ರೀತಿಯಲ್ಲಿ ತಗಾದೆ ತೆಗೆದು ನ್ಯಾಯಾಲಯದ ಮೊರೆ ಹೊಗಿದ್ದಾರೆ. ಕೆಲವು ಪ್ರಕರಣಗಳಲ್ಲಿ ತೀರ್ಪು ಸರಕಾರದ ಪರವಾಗಿ ಬಂದಿದ್ದರೆ, ಮತ್ತಷ್ಟು ಪ್ರಕರಣಗಳಲ್ಲಿಇದು ವಿರುದ್ಧವಾಗಿದೆ,” ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

Please follow and like us:

Leave a Reply

Your email address will not be published. Required fields are marked *

Next Post

ಅರ್ಜೆಂಟ್​ ಕೆಲಸ ಎಂದು ಹೋಗಿದ್ದ ಅಪ್ಪ ನಡುರಸ್ತೆಯಲ್ಲೇ ಹೆಣ, 24 ಗಂಟೆಯಲ್ಲೇ ಆರೋಪಿ ಅರೆಸ್ಟ್​!

Fri Feb 24 , 2023
ಬೆಂಗಳೂರು: ಆಗಷ್ಟೇ‌ ಕೆಲಸ ಮುಗಿಸಿಕೊಂಡು ತರಕಾರಿ ಬ್ಯಾಗ್ (Vegetable Bag) ಸಮೇತ ಮನೆ ಕಡೆಗೆ ಹೊರಟಿದ್ದರು. ಮನೆಗೆ (Home) ಬರುವುದು ಮಗಳ (Daughter) ಕೈಗೆ ತರಕಾರಿ ಬ್ಯಾಗ್ ಕೊಟ್ಟು, ಅರ್ಜೆಂಟ್ ಕೆಲಸ ಇದೆ ಹೋಗಿ ಬರುತ್ತೇನೆ, ಮನೆ‌ ಲಾಕ್ ಮಾಡಿಕೊಂಡು ಮಲಗಿ ಅಂತ ಹೇಳಿ ಹೋಗಿದ್ದರು. ಆದರೆ ಮುಂದೆ ಆಗಿದ್ದು ಮಾತ್ರ ಘನಘೋರ. ನಿರ್ಜನ ಪ್ರದೇಶದ ನಡು ರಸ್ತೆಯಲ್ಲಿ (Road) ವ್ಯಕ್ತಿಯನ್ನು ಕೊಚ್ಚಿ ಕೊಲೆ (Murder) ಮಾಡಿದ್ದರು. ಕೊಲೆಯಾದ ವ್ಯಕ್ತಿಯನ್ನು […]

Advertisement

Wordpress Social Share Plugin powered by Ultimatelysocial