ನಟ ಪ್ರಭಾಸ್‌ ಅಭಿನಯಿಸುತ್ತಿರುವ ‘ಪ್ರಾಜೆಕ್ಟ್‌ ಕೆ’ ಸಿನಿಮಾದಲ್ಲಿ ನಟಿ ದೀಪಿಕಾ ಪಡುಕೋಣೆ ಕೂಡ ನಟಿಸಲಿದ್ದಾರೆ.

 

 ಈ ಸಿನಿಮಾ ಬಿಗ್ ಬಜೆಟ್‌ನಲ್ಲಿ ತಯಾರಾಗುತ್ತಿದ್ದು, ಕನ್ನಡದ ಮೂಲಕ ಬಣ್ಣದ ಬದುಕು ಆರಂಭಿಸಿದ ನಟಿ ದೀಪಿಕಾ ಬಾಲಿವುಡ್ ನಲ್ಲಿ ಬ್ಯುಸಿಯೆಷ್ಟು ನಟಿ.

ಈಗ ಇದೇ ನಟಿ ‘ಪ್ರಾಜೆಕ್ಟ್ ಕೆ’ ಸಿನಿಮಾದ ಮೂಲಕ ಮತ್ತೆ ದಕ್ಷಿಣ ಭಾರತಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಪ್ರಭಾಸ್‌ ವೃತ್ತಿ ಜೀವನದಲ್ಲೇ ಈ ಸಿನಿಮಾ ಪ್ರಮುವಾಗಿದ್ದು, ಪ್ರಭಾಸ್ ಹಾಗೂ ದೀಪಿಕಾ ಕಾಂಬಿನೇಶನ್‌ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಸದ್ಯ ಈ ತಂಡಕ್ಕೆ ಈಗ ಮತ್ತೊಬ್ಬ ಬಾಲಿವುಡ್ ನಟಿ ಆಗಮನವಾಗಿದೆ.

‘ಪ್ರಾಜೆಕ್ಟ್ ಕೆ’ ಸಿನಿಮಾ ಬಗ್ಗೆ ಈ ಮೊದಲಿನಿಂದಲೂ ಕುತೂಹಲ ಹೆಚ್ಚಿತ್ತು. ಈ ಸಿನಿಮಾ ಕೂಡ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ನಾಗ್‌ ಅಶ್ವಿನ್ ಚಿತ್ರಕ್ಕೆ ಆಕ್ಷನ್ ಕಟ್‌ ಹೇಳಿದ್ದು, ಸಿನಿಮಾ ಈಗಾಗಲೇ ಸೆಟ್‌ ಏರಿ ತುಂಬಾ ದಿನಗಳು ಕಳೆದಿವೆ. ಸದ್ಯ ಈ ಸಿನಿಮಾದಲ್ಲಿ ಪ್ರಭಾಸ್ ಹಾಗೂ ದೀಪಿಕಾ ಮಾತ್ರವಲ್ಲದೆ ಅಮಿತಾಭ್‌ ಬಚ್ಚನ್ ಕೂಡ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ಈಗ ದಿಶಾ ಪಟಾನಿ ಕೂಡ ಈ ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ.

ಈ ಬಗ್ಗೆ ನಟಿ ದಿಶಾ ಪಟಾನಿ ಇನ್ಸ್‌ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದು, ಈ ಸಿನಿಮಾದ ನಿರ್ಮಾಣ ಸಂಸ್ಥೆ ವೈ ಜಯಂತಿ ಮೂವೀಸ್‌ ಕಳುಹಿಸಿದ್ದ ವೆಲ್ಕಮ್ ಆನ್ ಬೋರ್ಡ್‌ ಎಂದು ಪುಷ್ಪಗುಚ್ಚ ಚಿತ್ರವನ್ನು ಶೇರ್‌ ಮಾಡಿಕೊಂಡಿದ್ದಾರೆ. ದಿಶಾ ಪಟಾಣಿ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗ್ತಿದೆ.

ಸದ್ಯಕ್ಕೆ ದಿಶಾ ಪಟಾಣಿ ‘ಪ್ರಾಜೆಕ್ಟ್‌ ಕೆ’ ಸಿನಿಮಾದಲ್ಲಿ ಯಾವ ಪಾತ್ರವನ್ನ ನಿರ್ವಹಿಸಲಿದ್ದಾರೆ ಎಂಬುದನ್ನ ಚಿತ್ರತಂಡ ಇನ್ನೂ ಬಹಿರಂಗ ಪಡಿಸಿಲ್ಲ.

ಒಟ್ಟಿನಲ್ಲಿ ಅಭಿಮಾನಿಗಳಿಗೆ ಈ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು, ಸಿನಿಮಾ ನೋಡಲು ಸಿನಿ ಪ್ರೇಕ್ಷಕರು ಸಹ ಉತ್ಸುಕರಾಗಿದ್ದಾರೆ. ಸದ್ಯ ದಿಶಾ ಪಟಾಣಿ ಈ ವರ್ಷದ ಆರಂಭದಲ್ಲೇ ‘ಏಕ್‌ ವಿಲನ್ ರಿಟರ್ನ್ಸ್‌’, ‘ಯೋಧ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಈಗ ಪ್ರಾಜೆಕ್ಟ್‌ ಕೆ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮಗುವಿನ ಚಿತ್ರ ಹಂಚಿಕೊಂಡು ಸತ್ಯ ಹೊರಹಾಕಿದ ಪ್ರಿಯಾಂಕಾ ಚೋಪ್ರಾ

Mon May 9 , 2022
ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಅನ್ನು ವಿವಾಹವಾಗಿ ವಿದೇಶದಲ್ಲಿಯೇ ಸೆಟಲ್ ಆಗಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಈ ದಂಪತಿ ಪೋಷಕರಾಗಿದ್ದಾರೆ. ಸೆರೊಗಸಿ ಮಾದರಿ ಮೂಲಕ ಪ್ರಿಯಾಂಕಾ ಹಾಗೂ ನಿಕ್ ದಂಪತಿ ತಂದೆ ತಾಯಿ ಆಗಿದ್ದಾರೆ. ತಾವು ಸೆರೊಗಸಿ ಮಾದರಿ ಮೂಲಕ ತಾಯಿಯಾದ ವಿಷಯವನ್ನು ಪ್ರಿಯಾಂಕಾ ಚೋಪ್ರಾ ಜನವರಿ 15 ರಂದು ಘೋಷಿಸಿದ್ದರು. ಇದೀಗ ಮೊದಲ ಬಾರಿಗೆ ತಮ್ಮ ಮಗಳ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಗಳನ್ನು ಎದೆಗೆ ಅಪ್ಪಿಕೊಂಡಿರುವ […]

Advertisement

Wordpress Social Share Plugin powered by Ultimatelysocial