ಬೀದರ್ : ಬೆಳಗಾವಿ ನಗರದಲ್ಲಿ ಕೆಲ ಪುಂಡರು ಪುಂಡಾಟಿಕೆ ನಡೆಸಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಮೂರ್ತಿಯನ್ನು ವಿರೂಪಗೊಳಿಸಿದ್ದಾರೆ ಹಾಗೂ ಸರ್ಕಾರಿ ವಾಹನಗಳು ಸೇರಿದಂತೆ ಅನೇಕ ವಾಹನಗಳನ್ನು ಜಖಂಗೊಳಿಸಿದ್ದಾರೆ. ಅಂಥ ಪುಂಡರ ವಿರುದ್ಧ ಮುಖ್ಯಮಂತ್ರಿಗಳು ಕೂಡಲೇ ಕಠಿಣ ಕ್ರಮ ಜರುಗಿಸಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.ಖಾಶೆಂಪುರ್ ಗ್ರಾಮದ ಹೊರವಲಯದಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಮಾತನಾಡಿದ ಅವರು, ಬೆಳಗಾವಿಯಲ್ಲಿ ಪುಂಡರ ಅಟ್ಟಹಾಸ […]

ಕೈಸಾಲಕ್ಕೆ ಹೆದರಿ ಕಾಂಡಿಮೆಂಟ್ಸ್ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಳಾಲ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಇರಕಸಂದ್ರ ಕಾಲೋನಿಯ ಎಸ್ ವಿಎಸ್ ಕಾಂಡಿಮೆಂಟ್ಸ್ ಮಾಲೀಕ ಶಿವಕುಮಾರ್ 55 ವರ್ಷದ ವ್ಯಕ್ತಿಯೇ ಮೃತಪಟ್ಟ ದುರ್ದೈವಿ.ಇರಕಸಂದ್ರ ಕಾಲೋನಿಯ ಬಸ್ ನಿಲ್ದಾಣದಲ್ಲಿ ಕಾಂಡಿಮೆಂಟ್ಸ್ ಅಂಗಡಿಯ ವ್ಯಾಪಾರದಲ್ಲಿ ಕುಂಠಿತಗೊಂಡ ಹಿನ್ನೆಲೆಯಲ್ಲಿ ಕೈಸಾಲ ಮಾಡಿಕೊಂಡು ಕಳೆದ ಒಂದು ತಿಂಗಳಿಂದ ಅಂಗಡಿಯನ್ನ ಬಾಗಿಲು ಹಾಕಿದ್ದಾನೆ ಎಂದು ತಿಳಿದು ಬಂದಿದೆ.ಸಾಲ ತಿರಿಸಲು ಸಾಧ್ಯವಾಗದೇ […]

ಕೊರಟಗೆರೆ :- ಬೆಳಗಾವಿಯಲ್ಲಿ ಇತ್ತೀಚೆಗೆ ಎಂ.ಇ.ಎಸ್ ಪುಂಡರು ಕನ್ನಡ ಬಾವುಟವನ್ನು ಸುಟ್ಟು ಹಾಕುವ ಮೂಲಕ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ ಕೂಡಲೇ ಅವರನ್ನು ಬಂಧಿಸಿ ಕಠಿಣ ಶಿಕ್ಷೆಯನ್ನು ನೀಡಬೇಕು ಹಾಗೆಯೇ ಬಂಧಿಸಿರುವ ಕನ್ನಡಿಗರನ್ನು ಕೂಡಲೇ ಬಿಡುಗಡೆಗೊಳಿಸಬೇಕಾಗಿ ಕೊರಟಗೆರೆಯ ಕನ್ನಡಪರ ಸಂಘಟನೆಗಳು ಮೆರವಣಿಗೆ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು .ಕನ್ನಡಿಗರು ಮೌನವಾಗಿದ್ದರೆ ಎಂದರೆ ಶಾಂತ ರೀತಿಯಿಂದ ವರ್ತಿಸುವುದು ಕನ್ನಡಿಗರ ಹುಟ್ಟುಗುಣ ಅದನ್ನು ಎಮ್. ಇ.ಎಸ್ ಪುಂಡರು ಇನ್ನಿತರೆ ನಾಡ […]

ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು ಅದರ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಎಂಇಎಸ್ ನವರು ನಡೆಸಿದ ಗಲಾಟಗೆ ಈಗಾಗಲೇ ಪೊಲೀಸರು ಎಲ್ಲಾ ಕಾನೂನು ಕ್ರಮ ಕೈಗೊಂಡಿದ್ದಾರೆ. ಎಂಇಎಸ್ ಬಗ್ಗೆ ಕಠಿಣ ನಿಲುವು ತೆದುಕೊಳ್ಳುತ್ತೇವೆ ಎಂದು ಎಚ್ಚರಿಸಿದರು.ಮಹಾರಾಷ್ಟ್ರ ಕನ್ನಡಿಗರ ರಕ್ಷಣೆ ಮಾಡಲು ಸರ್ಕಾರ ಬದ್ಧವಾಗಿದೆ. ಅಧಿಕಾರಿಗಳ ಮಟ್ಟದಲ್ಲಿ ಇಂದು ಚರ್ಚೆ ನಡೆಯಲಿದೆ. ಡಿಜಿ, ಹೋಂ ಕಾರ್ಯದರ್ಶಿ […]

ನಿನ್ನೆಯಷ್ಟೇ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ತಂದೆ ಸತ್ತು 10 ವರ್ಷವಾಗಿದೆ. 11 ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಈ ಅವಧಿಯಲ್ಲಿ ಏನೇನ್ ರೂಲ್ಸ್ ಇರುತ್ತೆ ಅಂತ ಹೇಳಿದ್ವಿ. ಅದ್ರ ಬೆನ್ನಲ್ಲೇ ಶೋಕದ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾಗಿದ್ದಾರೆ.ಕಿಮ್ ಸಾಹೇಬ್ರ ತಂದೆ ಕಿಮ್​​ ಜಾಂಗ್ ಇಲ್ ಮತ್ತು ಅಜ್ಜ ಕಿಮ್ ಇಲ್​​ ಸಂಗ್ ಅವರ ಸಮಾಧಿ ಇರೋ ಅರಮನೆ ಮುಂದೆ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಿಮ್ ಜಾಂಗ್ ಇಲ್​ […]

ಅಗತ್ಯವಿದ್ದರೆ ಭಾರತಕ್ಕೆ ಹೆಚ್ಚುವರಿ ರಫೇಲ್ ಯುದ್ಧ ವಿಮಾನಗಳನ್ನು ಪೂರೈಕೆ ಮಾಡಲು ತಮ್ಮ ದೇಶ ಸಿದ್ಧವಿದೆ ಎಂದು ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಹೇಳಿದ್ದಾರೆ. ಅಭಿವೃದ್ಧಿಶೀಲ ರಾಷ್ಟ್ರಗಳ ಸಂಶೋಧನೆ ಮತ್ತು ಮಾಹಿತಿ ವ್ಯವಸ್ಥೆಯ ಅಧ್ಯಕ್ಷ ಮತ್ತು ಫ್ರಾನ್ಸ್‌ನ ಭಾರತದ ಮಾಜಿ ರಾಯಭಾರಿ ಡಾ.ಮೋಹನ್ ಕುಮಾರ್ ಅವರೊಂದಿಗೆ ಸಂವಾದದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.ಮೇಕ್ – ಇನ್ ಇಂಡಿಯಾ ಹಲವಾರು ವರ್ಷಗಳಿಂದ ಫ್ರೆಂಚ್ ಉದ್ಯಮಕ್ಕೆ ವಿಶೇಷವಾಗಿ ಜಲಾಂತರ್ಗಾಮಿ ನೌಕೆಗಳಂತಹ ರಕ್ಷಣಾ ಸಾಧನಗಳಿಗೆ […]

ಸ್ಯಾಂಡಲ್‌ ವುಡ್‌ ಕೃಷ್ಣ ಅಜಯ್‌ ರಾವ್‌ ಹಾಗೂ ಡಿಂಪಲ್‌ ಕ್ವಿನ್‌ ರಚಿತಾ ರಾಮ್‌ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ “ಲವ್ಯೂ ರಚ್ಚು” ಚಿತ್ರದ ಟ್ರೇಲರ್‌ ಇಗಾಗಲೇ ಯುಟ್ಯುಬ್ನಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರವನ್ನು ಶಂಕರ್‌ ಎಸ್‌ ರಾಜ್ ರವರು ನಿರ್ದೇಶನ ಮಾಡಿದರೆ, ಮಣಿಕಾಂತ್‌ ಕದ್ರಿಯವರು ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ. ಗುರು  ದೇಶಪಾಂಡೆ ಪ್ರೋಡಕ್ಷನ್‌ ಬ್ಯಾನರ್‌ನ ಅಡಿ “ಲವ್ಯೂ ರಚ್ಚು” ಸಿನಿಮಾವು ನಿರ್ಮಾವಾಗಿದೆ. ಈ ಚಿತ್ರದ ಟ್ರೇಲರ್‌ ವಿಕ್ಷೀಸಿದ ಪ್ರತಿಯೊಬ್ಬ ವೀಕ್ಷಕನು ಹೇಳುವುದೊಂದೆ ಇದೊಂದು […]

ಕಾಂಗ್ರೆಸ್​ ಶಾಸಕ ರಮೇಶ್​​ ಕುಮಾರ್​ ಮಹಿಳೆಯರ ಕುರಿತು ನೀಡಿರುವ ವಿವಾದಾತ್ಮಕ ಹೇಳಿಕೆ ಇದೀಗ ದೊಡ್ಡ ಬಿರುಗಾಳಿಯನ್ನೇ ಬೀಸಿದೆ. ರಮೇಶ್‌ ಕುಮಾರ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಗರಂ ಆಗಿದೆ. ರಮೇಶ್​ ಕುಮಾರ್​ ಮಾತುಗಳಿಗೆ ಕಾಂಗ್ರೆಸ್ ನಾಯಕತ್ವ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇಂತಹ ಮಾತುಗಳಿಂದ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ ಇವುಗಳು ಸಮರ್ಥನೆಗೆ ಮೀರಿದ್ದಾಗಿದೆ.ಇಂತಹ ಬೇಜವಾಬ್ದಾರಿ ಹೇಳಿಕೆಗಳಿಂದಾಗಿ ಪಕ್ಷದ ಚುನಾವಣಾ ಕಾರ್ಯತಂತ್ರದ ಮೇಲೂ ಪರಿಣಾಮ ಬೀರಲಿದೆ. ಉತ್ತರ ಪ್ರದೇಶದಲ್ಲಿ ಲಡಕಿ ಹೂಂ ಲಡ್ ಸಕ್ತಾ […]

ಸಮಾಜವಾದಿ ಪಕ್ಷದ  ನಾಯಕರು ಹಾಗೂ ಬೆಂಬಲಿಗರ ಮನೆಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿಯ ವರದಿಗಳ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿಪಕ್ಷಗಳನ್ನು ಬೆದರಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.ಬಿಜೆಪಿಯು ಕಾಂಗ್ರೆಸ್ ಹಾದಿಯಲ್ಲೇ ಸಾಗುತ್ತಿದೆ. ಕಾಂಗ್ರೆಸ್‌ನ ಹಳೆಯ ಇತಿಹಾಸವನ್ನು ಒಮ್ಮೆ ನೋಡಿ, ಯಾರನ್ನಾದರೂ ಬೆದರಿಸಬೇಕು ಎಂದಾದಲ್ಲಿ ಅದು ಈ ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತದೆ. ಇಂದು ಬಿಜೆಪಿಯೂ ಅದನ್ನೇ ಮಾಡುತ್ತಿದೆ” ಎಂದು […]

ಬೆಳಗಾವಿ ನಗರದಲ್ಲಿಂದು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಅವಮಾನ ಮಾಡಿರುವ ಖಂಡಿಸಿ ಕನ್ನಡಪರ ಸಂಘಟನೆಗಳು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು ಆದರೆ 144 ಕಲಂ ಜಾರಿಯಾಗಿರುವುದರಿಂದ ಪೊಲೀಸರು ಕನ್ನಡಪರ ಸಂಘಟನೆಗಳನ್ನು ಪ್ರತಿಭಟನೆ ಮಾಡಲು ಪರವಾನಗಿ ನೀಡದೇ ಕಾರಣ ಸಂಘಟನೆ ಕಾರ್ಯಕರ್ತರು ಪೊಲೀಸರ ಜೊತೆ ವಾಗ್ವಾದ ನಡೆಸಿ ಮುಂದು ಹೋಗಲು ಪ್ರಯತ್ನಿಸಿದರು ಆದರೆ ಪೊಲೀಸರು ಕನ್ನಡ ಸಾಹಿತ್ಯ ಭವನ ಗೇಟಿನ ಹೊರಗಡೆ ಹೋಗದಂತೆ ತಡೆಹಿಡಿದರು ಕೆಲವೊತ್ತು ವಾಗ್ವಾದ ಸರ್ಕಾರದ ವಿರುದ್ಧ ಘೋಷಣೆಗಳು […]

Advertisement

Wordpress Social Share Plugin powered by Ultimatelysocial