ಯುದ್ಧ ಸ್ಥಿತಿಯ ಸ್ವರೂಪವು ಮೂಲಭೂತ ಬದಲಾವಣೆಗೊಳಪಟ್ಟಿದೆ ಎಂದು ಗುರುತಿಸಿರುವ ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್‍ರಾವ್ ಚೌಧರಿ ಅವರು ಭಾರತದ ಭದ್ರತಾ ಕ್ರಿಯಾತ್ಮಕತೆ ಬಹುಮುಖಿ ಬೆದರಿಕೆಗಳು ಮತ್ತು ಸವಾಲುಗಳನ್ನು ಒಳಗೊಂಡಿದ್ದು ಬಹುಕ್ಷೇತ್ರೀಯ ಸಾಮಥ್ರ್ಯಗಳನ್ನು ನಿರ್ಮಿಸುವ ಅಗತ್ಯವಿದೆ ಎಂದ ಹೇಳಿದ್ದಾರೆ.ಇಲ್ಲಿನ ದುಂಡ್‍ಗಲ್ ಸಮೀಪ ವಾಯುಪಡೆ ಅಕಾಡೆಮಿಯಲ್ಲಿ ನಿರ್ಗಮಿತ ಸಂಯುಕ್ತ ಪದವೀಧರರ ಪಥಸಂಚಲನದಲ್ಲಿ ಭಾಷಣ ಮಾಡಿದ ಚೌಧರಿ ಅವರು ಭಾರತೀಯ ವಾಯುಪಡೆಯು ಪರಿವರ್ತನೆಯ ಶೃಂಗದಲ್ಲಿದ್ದು ರಫೇಲ್ ಯುದ್ದ ವಿಮಾನಗಳು, ಅಪಾಚೆ […]

ಅರಕಲಗೂಡು : ಕನ್ನಡಿಗರ ಸ್ವಾಭಿಮಾನದ ಸಂಕೇತವಾದ ಕನ್ನಡ ಧ್ವಜವನ್ನು ಸುಟ್ಟು ಕನ್ನಡಿಗರಿಗೆ ಅಪಮಾನ ಎಸಗಿರುವ ಎಂಇಎಸ್ ಹಾಗೂ ಶಿವಸೇನೆ ಸಂಘಟನೆಯನ್ನು ರಾಜ್ಯದಲ್ಲಿ ನಿಷೇಧಿಸಬೇಕೆಂದು ಆಗ್ರಹಿಸಿ ಕರವೇ(ಪ್ರವೀಣ್‌ಶೆಟ್ಟಿಬಣ) ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿ ಬೆಳಗಾವಿಯಲ್ಲಿನ ಎಂಇಎಸ್ ಮತ್ತುಶಿವಸೇನೆ ಸಂಘಟನೆಗಳ ಕಾರ್ಯಕರ್ತರು ಕನ್ನಡಿಗರು,ಕನ್ನಡಭಾಷೆ ವಿರುದ್ಧ ಸಲ್ಲದ ದಬ್ಬಾಳಿಕೆಯನ್ನು ಪ್ರದರ್ಶಿಸುತ್ತಾ ಬಂದಿದ್ದರೂ ಕೂಡ ಸರಕಾರ ಕಾನೂನಾತ್ಮಕವಾಗಿ ಕ್ರಮ ಕೈಗೊಂಡಿಲ್ಲ.ಇದು ಮಿತಿಮೀರಿ ರಾಜ್ಯಧ್ವಜವನ್ನು ಸುಟ್ಟುಹಾಕಿರುವುದು ಇಡೀ ಕನ್ನಡಿಗರಿಗೆ ಮಾಡಿದ ಅಪಮಾನವಾಗಿದೆ.ಕೂಡಲೇ […]

ಹುಡುಗಿಯರಿಗೆ ಮದುವೆಯಾಗಲು ಕನಿಷ್ಠ ವಯೋಮಾನದ ಅರ್ಹತೆಯನ್ನು 21 ವರ್ಷಕ್ಕೇರಿಸಲು ಕೇಂದ್ರ ಸಂಪುಟ ಅಸ್ತು ಎಂದಿರುವ ಬೆನ್ನಿಗೇ ಈ ವಿಚಾರವಾಗಿ ದೇಶಾದ್ಯಂತ ಪರ-ವಿರೋಧಗಳ ಚರ್ಚೆಗಳು ಕೇಳಿ ಬರುತ್ತಿವೆ.ಕೇಂದ್ರದ ನಡೆಯನ್ನು ವಿರೋಧಿಸಿರುವ ಸಮಾಜವಾದಿ ಪಾರ್ಟಿಯ ಸಂಸದ ಎಸ್‌.ಟಿ.ಹಸನ್, ಹುಡುಗಿಯರು 16ನೇ ವಯಸ್ಸಿಗೆ ಮದುವೆಯಾಗುವುದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.ಹುಡುಗಿಯರು ಫಲವತ್ತತೆಯ ವಯಸ್ಸಿಗೆ ಬಂದ ಕೂಡಲೇ ಮದುವೆಯಾಗಬೇಕು. ಪ್ರೌಢ ಹುಡುಗಿಯೊಬ್ಬಳು 16ನೇ ವಯಸ್ಸಿಗೆ ಮದುವೆಯಾಗುವುದು ತಪ್ಪೇನಿಲ್ಲ. ಹುಡುಗಿಯೊಬ್ಬಳು 18ನೇ ವಯಸ್ಸಿಗೆ ಮತದಾನ ಮಾಡಬಹುದಾದರೆ ಮದುವೆ ಏಕಾಗಬಾರದು? ಎಂದು […]

ರಾಮಮೂರ್ತಿನಗರ ವಾರ್ಡ್ ನ ಎನ್.ಆರ್.ಐ ಬಡಾವಣೆಯಲ್ಲಿ 35 ಎಕರೆ ಖಾಸಗಿ ಭೂಮಿ ನನ್ನ ಮೇಲಿನ ಆರೋಪ ಸುಳ್ಳು ಸತ್ಯಕ್ಕೆ ದೂರವಾದಧ್ದು ನಾನು ಯಾವುದೇ ತಪ್ಪು ಮಾಡಿಲ್ಲ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಭೂಹಗರಣದ ಬಗ್ಗೆ ನಗರಾಭಿವೃದ್ಧಿ ಬೈರತಿ ಬಸವರಾಜು ಮಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. 2013 ರಲ್ಲೆ ಎಕರೆಗೆ 18 ಲಕ್ಷ ನೀಡಿ ಖರೀದಿ ಮಾಡಿದ್ದೆನೆ ಈ ಮಾಡುತ್ತಿರುವ ಆರೋಪದಲ್ಲಿ ಯಾವುದೇ ಉರುಳಿಲ್ಲ.ವಿಚಾರದ ಬಗ್ಗೆ ಜಮೀನು ಮಾಲೀಕರು […]

ಮಾಜಿ ಸ್ಪೀಕರ್, ಕಾಂಗ್ರೆಸ್ ಹಿರಿಯ ನಾಯಕ ಕೆ ಆರ್ ರಮೇಶ್ ಕುಮಾರ್ ಮಹಿಳೆಯರ ಮೇಲೆ ಅತ್ಯಾಚಾರ ಹೇಳಿಕೆ ನೀಡಿ ತೀವ್ರ ವಿವಾದ, ಟೀಕೆಗೆ ಗುರಿಯಾಗಿ ಸದನದಲ್ಲಿಯೇ ನಿನ್ನೆ ಕಲಾಪ ವೇಳೆ ಕ್ಷಮೆ ಕೋರಿದ್ದಾಯಿತು.ರಮೇಶ್ ಕುಮಾರ್ ಅವರ ಹೇಳಿಕೆಗೆ ದೇಶ ಮತ್ತು ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿ, ರಮೇಶ್ ಕುಮಾರ್ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು […]

ಅಮೆರಿಕದ ನ್ಯೂಯಾರ್ಕ್‌ ನಿಂದ ಹಿಂದಿರುಗಿದ 29 ವರ್ಷದ ವ್ಯಕ್ತಿಗೆ ಶುಕ್ರವಾರ ಮುಂಬೈನಲ್ಲಿ ಒಮಿಕ್ರಾನ್ ರೂಪಾಂತರಿ ಸೋಂಕು ತಗುಲಿರುವುದು ಧೃಢವಾಗಿದೆ. ಈ ಬಗ್ಗೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ಪ್ರ ಕಟಣೆಯಲ್ಲಿ ತಿಳಿಸಿದೆ.ಒಮಿಕ್ರಾನ್ ಸೋಂಕಿತ ವ್ಯಕ್ತಿಗೆ ಯಾವುದೇ ರೋಗಲಕ್ಷಣಗಳಿಲ್ಲ. ಈತ ಫೈಜರ್ ಲಸಿಕೆಯ ಮೂರು ಡೋಸ್ ತೆಗೆದುಕೊಂಡಿದ್ದಾನೆ ಎಂದು ಬಿಎಂಸಿ ಹೇಳಿದೆ.ನವೆಂಬರ್ 9 ರಂದು ವಿಮಾನ ನಿಲ್ದಾಣದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಅವರು ಕೋವಿಡ್ -19 ಪಾಸಿಟಿವ್ ಪತ್ತೆಯಾಗಿತ್ತು. ನಂತರ ಅವರ ಮಾದರಿಗಳನ್ನು ಜೀನೋಮ್ ಸೀಕ್ವೆನ್ಸಿಂಗ್ […]

ನಗರದಲ್ಲಿ ಸೆಕ್ಷನ್ 144 ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ತಡರಾತ್ರಿ ಕಿಡಿಗೇಡಿಗಳು ಪುಂಡಾಟ ಮೆರೆದ ಹಿನ್ನೆಲೆಯಲ್ಲಿ ನಾಳೆ ಬೆಳಗ್ಗೆ 6 ಗಂಟೆಯವರೆಗೆ ಬೆಳಗಾವಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.ತಪ್ಪಿತಸ್ಥರನ್ನು ಯಾವುದೇ ಕಾರಣಕ್ಕೂ ನಮ್ಮ ಸರ್ಕಾರ ಬಿಡುವುದಿಲ್ಲ. ಇದು ಬೆರಳೆಣಿಕೆಯಷ್ಟು ಜನರು ಮಾಡುತ್ತಿರುವ ಕೃತ್ಯವಾಗಿದೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುತ್ತದೆ. ಪುಂಡಾಟಿಕೆ ಹತ್ತಿಕ್ಕುವ ಜೊತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಪೊಲೀಸರಿಗೆ […]

ಕರ್ನಾಟಕ- ಮಹಾರಾಷ್ಟ್ರದ ನಡುವೆ ಸಂಘರ್ಷ ಮಾಡುವ ಸಂಚು ಮಾಡಲಾಗುತ್ತಿದೆ. ಬೆಳಗಾವಿಯಲ್ಲಿ ಸಂಘರ್ಷ ಮಾಡುವ ಉದ್ದೇಶದಿಂದ, ಅರಾಜಕತೆವಾದಿಗಳು ಸೃಷ್ಟಿ ಮಾಡಿರುವ ಸಾಧ್ಯತೆಯಿದೆ. ಅರಾಜಕತವಾದಿಗಳ ಕುಮ್ಮಕ್ಕಿಗೆ ಬಲಿಯಾಗದೆ ಶಾಂತಿ, ಸೌಹಾರ್ದತೆ ಕಾಪಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.ಸುದ್ದಿಗಾರರೊದಿಗೆ ಮಾತನಾಡಿದ ಅವರು ಬೆಳಗಾವಿಯಲ್ಲಿ ಎಂ.ಇ.ಎಸ್ ಕಾರ್ಯಕರ್ತರ ಪುಂಡಾಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು.ಕೆಲವರು ಅರಾಜಕತೆ, ಸಂಘರ್ಷ ನಡೆಸುವ ಸಂಚು ರೂಪಿಸಿದ್ದಾರೆ. ಕೊಲ್ಲಾಪುರದಲ್ಲಿ ಕನ್ನಡ ಭಾವುಟ ಸುಟ್ಟರು, ಅಲ್ಲಿ ಯಾವ ಪಕ್ಷ ಅಧಿಕಾರದಲ್ಲಿದೆ? […]

ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಚನ್ನಿ, ಈ ಪಕ್ಷ ಆಧುನಿಕ ಈಸ್ಟ್ ಇಂಡಿಯಾ ಕಂಪನಿ ಎಂದು ಆರೋಪಿಸಿದ್ದಾರೆ.ಆಮ್ ಆದ್ಮಿ ಪಕ್ಷ ರಾಜ್ಯದಲ್ಲಿನ ಸಂಪತ್ತನ್ನು ಲೂಟಿ ಮಾಡುವ ಸಂಚು ಮಾಡಿದೆ.ಅಷ್ಟೇ ಅಲ್ಲ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಗೆ ಹಸುವಿನ ಹಾಲು ಕರೆಯುವುದು ಹೇಗೆಂಬುದು ಕೂಡಾ ತಿಳಿದಿಲ್ಲ ಎಂದು ಚನ್ನಿ ಟೀಕಿಸಿದ್ದಾರೆ.ಪಂಜಾಬ್ ನಲ್ಲಿ […]

ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪುತ್ಥಳಿ ಬೀಳಿಸಿ ಕಿಡಿಗೇಡಿಗಳು ವಿಕೃತಿ ಮೆರೆದಿರುವ ಕುರಿತಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಬೆಳಗಾವಿಯಲ್ಲಿರುವ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯ ಎಂದು ಹೇಳಿದ್ದಾರೆ.ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬೆಳಗಾವಿಯಲ್ಲಿರುವ ಕರ್ನಾಟಕದ ಅಭಿಮಾನ ಮೂರ್ತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯ. ಸಿಎಂ ಬಸವರಾಜಬೊಮ್ಮಾಯಿ […]

Advertisement

Wordpress Social Share Plugin powered by Ultimatelysocial