ಬಾಯಲ್ಲಿ ನೀರೊರೆಸುವ ರುಚಿಯಾದ ಕಡಲೆಬೇಳೆ ಚಟ್ನಿ

ಇಂದು ನಿಮ್ಮ ಮನೆಯವರು ಕೇಳುವ ಮುನ್ನವೇ ನೀವು ಕಡಲೆಬೇಳೆ ಚಟ್ನಿ ಮಾಡಿ.
ಸರಳವಾಗಿ, ಫಟಾಫಟ್ ತಯಾರಿಸುವ ಅಡುಗೆ ಎಂದರೆ ಹಲವರಿಗೆ ಇಷ್ಟವಾಗುತ್ತದೆ.

ಇನ್ನೇಕೆ ತಡ..? ಮನೆಯವರ ಮಚ್ಚುಗೆ ಪಡೆಯಲು ಈ ಸ್ವಾದಿಷ್ಟ ಚಟ್ನಿಯನ್ನು ತಯಾರಿಸಿ.

ಬೇಕಾಗುವ ಸಾಮಗ್ರಿಗಳು
* ಕಡಲೆಬೇಳೆ – ಅರ್ಧ ಕಪ್
* ಕಾಯಿತುರಿ-ಅರ್ಧ ಕಪ್
* ಕೆಂಪು ಮೆಣಸಿನ ಕಾಯಿ -ಮೂರು
* ಹುಣಸೆ ಹುಣ್ಣು – ಸ್ವಲ್ಪ
* ರುಚಿಗೆ ತಕ್ಕಷ್ಟು ಉಪ್ಪು
* ಕೊತ್ತಂಬರಿ ಸೊಪ್ಪು – ಸ್ವಲ್ಪ
* ಅಡುಗೆಎಣ್ಣೆ- 4 ಚಮಚ
* ಸಾಸಿವೆ – ಒಂದು ಚಮಚ
* ಉದ್ದಿನ ಬೇಳೆ – 2 ಚಮಚ
* ಈರುಳ್ಳಿ (ಸಾಂಬಾರ್ ಈರುಳ್ಳಿ) – ಐದು
* ಕರೀಬೇವು- ಸ್ವಲ್ಪ

ಮಾಡುವ ವಿಧಾನ
* ಒಂದು ಪಾತ್ರೆಯಲ್ಲಿ ಅಡುಗೆಎಣ್ಣೆ ಹಾಕಿ ಬಿಸಿಮಾಡಿ ಕೆಂಪುಮೆಣಸು, ಕಡಲೆ ಬೇಳೆಯನ್ನು ಚಿಕ್ಕ ಉರಿಯಲ್ಲಿ ಕೊಂಚ ಕಾಲ ಹುರಿಯಿರಿ. ಬಳಿಕ ಮೆಣಸನ್ನು ಪಕ್ಕಕ್ಕಿಡಿ.
* ಈಗ ಉಳಿದ ಎಣ್ಣೆಯನ್ನು ಇದೇ ಪಾತ್ರೆಯಲ್ಲಿ ಹಾಕಿ ಸಾಸಿವೆ, ಉದ್ದಿನ ಬೇಳೆ, ಈರುಳ್ಳಿ ಮತ್ತು ಕರೀಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು.

* ಫ್ರೈ ಮಾಡಿಕೊಂಡ ಪದಾರ್ಥಗಳನ್ನು ಮಿಕ್ಸಿಯ ಜಾರ್ನೊಳಗೆ ಹಾಕಿ ರುಬ್ಬಿಕೊಳ್ಳಬೇಕು.
* ಕೊತ್ತಂಬರಿ ಸೊಪ್ಪು, ಸಾಸಿವೆ, ಈರುಳ್ಳಿ, ಕೆಂಪು ಮೆಣಸಿನ ಕಾಯಿ ಹಾಕಿ ಒಗ್ಗರಣೆ ತಯಾರಿಸಿಕೊಂಡು ರುಬ್ಬಿದ ಮಿಶ್ರಣಕ್ಕೆ ಹಾಕಿದರೆ ಸ್ವಾದಿಷ್ಟ ಚಟ್ನಿ ತಯಾರಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಚಳಿಗಾಲದಲ್ಲಿ ಕಡಲೇಕಾಯಿ ಸೇವನೆಯಿಂದ ಸಿಗುತ್ತೆ ಇಷ್ಟೆಲ್ಲಾ ಲಾಭ

Mon Dec 20 , 2021
ಚಳಿಗಾಲದ ಕೊರೆತಕ್ಕೆ ಛಾವಣಿ ಮೇಲೆ ಕುಳಿತು ಬಿಸಿಲಿಗೆ ಮೈಯೊಡ್ಡಿಕೊಂಡು ಬಟ್ಟಲು ತುಂಬಾ ಕಡ್ಲೇಕಾಯಿ ತಿನ್ನುವುದು ಎಷ್ಟು ಮಜಾ ಅಲ್ಲವೇ? ಕಡಲೇಕಾಯಿ ಬೀಜಗಳು ಬಲು ರುಚಿಯಾಗಿರುವುದಲ್ಲದೇ ಆರೋಗ್ಯಕರವೂ ಹೌದು. ತೂಕ ಕಳೆದುಕೊಳ್ಳಲು, ಜೀರ್ಣಂಗಗಳ ಆರೋಗ್ಯಕ್ಕೆ, ಅಥವಾ ಹೊಟ್ಟೆ ತುಂಬಲು ಕಡಲೇಕಾಯಿ ಹೇಳಿ ಮಾಡಿಸಿದ ತಿನಿಸು. ಆದರೆ ಕೆಲವರು ಕಡಲೇಕಾಯಿಯ ಚಟ ಅಂಟಿಸಿಕೊಂಡು, ತೀರಾ ಅದರಿಂದಲೇ ಆರೋಗ್ಯ ಹಾಳು ಮಾಡಿಕೊಂಡು ಬಿಡುತ್ತಾರೆ. ಪಥ್ಯ ತಜ್ಞ ರಜತ್‌ ಜೈನ್ ಕಡಲೇಕಾಯಿಗಳ ಆರೋಗ್ಯಪೂರ್ಣ ಪ್ರಮಾಣಗಳ ಕುರಿತು […]

Advertisement

Wordpress Social Share Plugin powered by Ultimatelysocial